23.2 C
Bangalore
Saturday, December 14, 2019

ಸಾವಿನಲ್ಲೂ ಒಂದಾದ ಅಣ್ಣ, ತಮ್ಮ!

Latest News

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳು: ಬಸ್, ರೈಲ್ವೆ ನಿಲ್ದಾಣಗಳಿಗೆ ಬೆಂಕಿ

ಕೋಲ್ಕತಾ: ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ಕಾನೂನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಶನಿವಾರವೂ ಪ್ರತಿಭಟನೆಗಳು ಮುಂದುವರಿದಿವೆ. ಹೌರಾ ಗ್ರಾಮೀಣ, ಮುಷಿರಾಬಾದ್​ ಮತ್ತು 24...

ಗ್ರಾಮೀಣ ಶುದ್ಧ ನೀರಿನ ಘಟಕದಲ್ಲಿ ಅವ್ಯವಹಾರ, ಶೀಘ್ರವೇ ನನ್ನ ಕೈಸೇರುವ ತನಿಖಾ ವರದಿ

ಶಿವಮೊಗ್ಗ: ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅನುಷ್ಠಾನವಾದ ಗ್ರಾಮೀಣ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸಿ...

ಸಂಚಾರ ನಿಯಮ ಪಾಲಿಸಿ, ಪಾಲಕರಿಗೂ ತಿಳಿಸಿ

ಶಿವಮೊಗ್ಗ: ವಿದ್ಯಾರ್ಥಿಗಳು ಸಂಚಾರ ಸುರಕ್ಷತೆ ನಿಯಮ ತಿಳಿದು, ವಾಹನ ಚಲಾಯಿಸುವಾಗ ನಿಯಮ ಪಾಲಿಸುವಂತೆ ಪಾಲಕರಿಗೂ ತಿಳಿಸಬೇಕು ಎಂದು ಎಸ್ಪಿ ಕೆ.ಎಂ.ಶಾಂತರಾಜು ಹೇಳಿದರು.

ಸುಪ್ರೀಂಗೆ ಅಡಕೆ ಬಗ್ಗೆ ವೈಜ್ಞಾನಿಕ ವರದಿ, ಟಾಸ್ಕ್​ಫೋರ್ಸ್​ನಿಂದಲೂ ವಕೀಲರ ನೇಮಕ

ಸಾಗರ: ಬೆಂಗಳೂರಿನಲ್ಲಿ ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಅಡಕೆ ಟಾಸ್ಕ್​ಫೋರ್ಸ್ ಸಭೆಯಲ್ಲಿ ಅಡಕೆ ಹಾನಿಕಾರಕವಲ್ಲ, ಅದರಲ್ಲಿ ಔಷಧೀಯ ಅಂಶ ಇದೆ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ ಅಪಾರ ಪ್ರಶಂಸೆ

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ...

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ
ಹುಟ್ಟುತ್ತ ಅಣ್ಣ ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎನ್ನುವ ಗಾದೆಯನ್ನು ಹುಸಿ ಮಾಡುವ ರೀತಿಯಲ್ಲಿ ಸಾವಿನಲ್ಲೂ ಸಹ ಅಣ್ಣ, ತಮ್ಮ ಒಂದಾದ ಘಟನೆ ತಾಲೂಕಿನ ಅಲ್ಲೂರ್(ಬಿ) ಗ್ರಾಮದಲ್ಲಿ ವರದಿಯಾಗಿದೆ.

ಅಣ್ಣ ವೀರಣ್ಣ ಮಾಸ್ಟರ್ ನಾಲವಾರ (78), ತಮ್ಮ ಮಲ್ಲಿಕಾರ್ಜುನ ನಾಲವಾರ (75) ಮೃತರಾದ ಸಹೋದರರು. ಅಲ್ಲೂರ(ಬಿ) ಗ್ರಾಮದಲ್ಲಿಯೇ ಇಬ್ಬರು ಸಹೋದರರು ವ್ಯವಸಾಯ ಮಾಡಿಕೊಂಡಿದ್ದರು. ಮಲ್ಲಿಕಾರ್ಜುನ ಅನಾರೋಗ್ಯದಿಂದ ಬುಧವಾರ ಅಸುನೀಗಿದ. ಸಾವಿನ ಹಿನ್ನೆಲೆಯಲ್ಲಿ ಖ್ಯಾತ ಕಲಾವಿದರಾದ ಅಣ್ಣ ವೀರಣ್ಣ ಮಾಸ್ಟರ್ ರಾತ್ರಿ ಭಜನೆ ಮಾಡಿ ಮಲಗಿದ್ದರು. ಬೆಳಗಾಗುವುದರಲ್ಲಿಯೇ ತಮ್ಮನೊಂದಿಗೆ ತಾವೂ ಸ್ವರ್ಗವಾಸಿಗಳಾಗಿದ್ದರು.

ತಮ್ಮನ ಸಾವಿನ ಹಿನ್ನೆಲೆ ರಾತ್ರಿ ತಾವೇ ಹಾಡಿ ಭಜನೆ ಮಾಡಿ ಮಲಗಿದ್ದ ಅಣ್ಣ ವೀರಣ್ಣ ಮಾಸ್ಟರ್ ಹಾಗೂ ತಮ್ಮ ಮಲ್ಲಿಕಾರ್ಜುನ ಅವರ ಜೋಡಿ ಸಾವಿನಿಂದ ಅವರ ಕುಟುಂಬಸ್ಥರು, ಗ್ರಾಮಸ್ಥರು ತೀವ್ರ ಶೋಕಕ್ಕೆ ಒಳಗಾದರು. ಇಬ್ಬರ ಮೃತದೇಹಗಳನ್ನು ಒಂದೆಡೆ ಇಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗುರವಾರ ಸಂಜೆ ಐದು ಗಂಟೆಯ ಸುಮಾರಿಗೆ ಇಬ್ಬರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನೆರವೇರಿಸಲಾಯಿತು.

ಮಾಸ್ತರ್ ಎಂದೇ ಖ್ಯಾತಿ
ವೀರಣ್ಣ ನಾಲವಾರ ಅವರು ಅಲ್ಲೂರ್(ಬಿ) ಗ್ರಾಮದಲ್ಲಿ ಸಂಗೀತ ಮಾಸ್ತರ್ ಎಂದೇ ಪ್ರಸಿದ್ಧ ಪಡೆದಿದ್ದರು. ನಾಟಕ ಕಲಾವಿದ, ನಟ, ನಿರ್ದೇಶಕರಾಗಿದ್ದರು. ಪತ್ನಿ, ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಆಕಾಶವಾಣಿ ಕಲಾವಿದರಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನೂರಾರು ನಾಟಕಗಳಿಗೆ ಸಂಗೀತ ಮಾಸ್ತರ್ ಆಗಿ ಕೆಲಸ ಮಾಡಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯಿಂದ ಅನೇಕ ಜಾನಪದ, ತತ್ವಪದ, ವಚನ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರಿಗೆ ಅನೇಕ ಸಂಘ- ಸಂಸ್ಥೆಗಳು ಸನ್ಮಾನಿಸಿ ಪ್ರಶಸ್ತಿ ನೀಡಿದ್ದಾರೆ.

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...