18.5 C
Bangalore
Monday, December 16, 2019

ಸಾರ್ವಜನಿಕರಿಗೆ ಆಧಾರ್ ಕಿರಿಕಿರಿ

Latest News

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಕಾಲೇಜ್ ಆವರಣದಲ್ಲಿ ಮದ್ಯದ ಸದ್ದು

ಮೊಳಕಾಲ್ಮೂರು: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣ ಭದ್ರತೆ ಕೊರತೆಯ ಕಾರಣಕ್ಕೆ ಪುಂಡ ಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ. ಈಚೆಗೆ ಕೆಲ ಕಿಡಿಗೇಡಿಗಳು ಕಾಲೇಜಿನ ಆವರಣದಲ್ಲಿರುವ...

ಶತಮಾನ ಶಾಲೆಗಿಲ್ಲ ಸೌಲಭ್ಯಗಳ ಭಾಗ್ಯ

ಕೆ.ಕೆಂಚಪ್ಪ ಮೊಳಕಾಲ್ಮೂರು: ಶತಮಾನ ಪೂರೈಸಿದ ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ. ಒಂದು ತಲೆಮಾರಿಗೆ ಅಕ್ಷರ ದಾಸೋಹ...

ಕುಮಟಾ: ತಾಲೂಕಿನಲ್ಲಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಳ್ಳಿಗಾಡಿನ ಜನತೆ ಆಧಾರ್ ಕೇಂದ್ರದೆದುರು ರಾತ್ರಿಯಿಡೀ ಕಾಯುವ ದುಸ್ಥಿತಿ ನಿರ್ವಣವಾಗಿದೆ.

ಇಡೀ ತಾಲೂಕಿನ ಜನತೆಗೆ ಕೇವಲ ಕುಮಟಾದ ಮುಖ್ಯ ಆಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿ, ಇನ್ನಿತರ ಸೇವೆಗಳು ಸೌಲಭ್ಯವಿವೆ. ಸಿಬ್ಬಂದಿ ಕೊರತೆ, ತಾಂತ್ರಿಕ ಸಮಸ್ಯೆ ಮತ್ತಿತರ ಕಾರಣಗಳಿಂದ ಕೆವಿಜಿ ಬ್ಯಾಂಕ್ ಹಾಗೂ ತಾಲೂಕು ಕಚೇರಿ ಬಳಿ ಇದ್ದ ಆಧಾರ್ ಕೇಂದ್ರಗಳು ಬಂದ್ ಆಗಿವೆ. ಸಾಕಷ್ಟು ಸಮಸ್ಯೆ ಇದ್ದರೂ ಮುಖ್ಯ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ಸೇವೆ ಉಳಿದುಕೊಂಡಿದೆ.

ಆದರೆ, ಇಲ್ಲಿ ನಿತ್ಯ ಬೆಳಗ್ಗೆ ಸರತಿಯಲ್ಲಿ ನೂರಾರು ಜನರಿದ್ದರೂ 15 ಜನರಿಗೆ ಮಾತ್ರ ಟೋಕನ್ ನೀಡಲಾಗುತ್ತಿದೆ. ಯಾಣ, ಬಡಾಳ, ಸಂತೇಗುಳಿ, ಸೊಪ್ಪಿನಹೊಸಳ್ಳಿ ಮುಂತಾದೆಡೆಯ ದೂರದ ಹಳ್ಳಿಯ ಜನರಿಗೆ ಆಧಾರ್ ಟೋಕನ್ ವಿತರಣೆಗೆ ಮುಂಚೆ ಇಲ್ಲಿ ಬಂದು ತಲುಪುವುದು ಅಸಾಧ್ಯ. ಹೀಗಾಗಿ ಹಿಂದಿನ ದಿನ ರಾತ್ರಿಯೇ ಕುಮಟಾದಲ್ಲಿ ಉಳಿದು ಮರುದಿನ ಸರತಿಯಲ್ಲಿ ಮೊದಲೇ ನಿಲ್ಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇಲ್ಲಿನ ಮುಖ್ಯ ಅಂಚೆ ಕಚೇರಿ ಬಾಗಿಲಲ್ಲಿ ರಾತ್ರಿಯಿಡೀ ಹಳ್ಳಿಗಾಡಿನ ಜನ, ವಯೋವೃದ್ಧರು, ಮಕ್ಕಳು, ಮಹಿಳೆಯರು, ಅಂಗವಿಕಲರು ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.

ಈ ಕುರಿತು ’ವಿಜಯವಾಣಿ’ಯೊಂದಿಗೆ ಮಾತನಾಡಿದ ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಜಿ.ಪಿ.ಭಟ್ಟ ಅಗ್ನಿ, ಸಾಕಷ್ಟು ಸಮಸ್ಯೆಗಳ ನಡುವೆಯೂ ಜನರ ಅನುಕೂಲಕ್ಕಾಗಿ ಆಧಾರ್ ಸೇವೆ ನೀಡುತ್ತಿದ್ದೇವೆ. ನಮ್ಮಲ್ಲಿ ಬಿಟ್ಟು ಬೇರೆಲ್ಲಿಯೂ ಆಧಾರ್ ಸೇವಾ ಕೇಂದ್ರ ಇಲ್ಲದಿರುವುದೇ ಜನರ ಅನಾನುಕೂಲಕ್ಕೆ, ಒತ್ತಡಕ್ಕೆ ಕಾರಣವಾಗಿದೆ.’’ಎಂದು ತಿಳಿಸಿದ್ದಾರೆ.

ಸಮಸ್ಯೆ ಇಷ್ಟೊಂದು ಗಂಭೀರವಾಗಿದ್ದರೂ, ತಾಲೂಕಾಡಳಿತವಾಗಲೀ, ಜನಪ್ರತಿನಿಧಿಗಳಾಗಲೀ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ರಾಜಕೀಯ ಪಕ್ಷಗಳು-ಸಂಘಟನೆಗಳು ಜನಸಾಮಾನ್ಯರ ಇಂಥ ಪ್ರತಿದಿನದ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಆಧಾರ್ ಸೇವೆಗಳು ಪ್ರತಿ ಹೋಬಳಿ ಮಟ್ಟದಲ್ಲಾದರೂ ಲಭ್ಯವಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಆಧಾರ್​ಗಾಗಿ ನಮಗೆ ಟೋಕನ್ ಸಿಕ್ಕಿಲ್ಲ. ಬೆಳಗ್ಗೆ ಬೇಗ ಕುಮಟಾಕ್ಕೆ ಬರುವುದೂ ಸಾಧ್ಯವಿಲ್ಲ. ಹೀಗಾಗಿ ಅಂಚೆ ಕಚೇರಿಯ ಬಾಗಿಲಲ್ಲೇ ಉಳಿದುಕೊಂಡಿದ್ದೇವೆ.
ಚಂದ್ರಶೇಖರ, ಮೂಡ್ನಳ್ಳಿ, ಸೊಪ್ಪಿನ ಹೊಸಳ್ಳಿ

ತಾಲೂಕಿನಲ್ಲಿ ಆಧಾರ್​ಗೆ ಸಂಬಂಧಪಟ್ಟಂತೆ ಜನರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಮುಖ್ಯ ಅಂಚೆ ಕಚೇರಿಯ ಒಂದು ಸೇವಾ ಕೇಂದ್ರ ಸಾಲುವುದಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ರ್ಚಚಿಸಿ ನಾಡ ಕಚೇರಿಗಳಲ್ಲಿ ಆಧಾರ್ ಸೇವೆ ದೊರಕಿಸುವ ಬಗ್ಗೆ ಪ್ರಯತ್ನಿಸುತ್ತೇನೆ.
ಶಾಸಕ ದಿನಕರ ಶೆಟ್ಟಿ.

ಟೋಕನ್ ಪಡೆದು ಕಾಯಬೇಕು..
ಕುಮಟಾ ಮುಖ್ಯ ಅಂಚೆ ಕಚೇರಿಯಲ್ಲಿ ಹಣಕಾಸು ವ್ಯವಹಾರ, ರಿಜಿಸ್ಟರ್ಡ್ ಪಾರ್ಸಲ್ ಇನ್ನಿತರ ಬಹುತೇಕ ಎಲ್ಲ ಸೇವೆಗಳಿಗೂ ಟೋಕನ್ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ಹಿರಿಯ ನಾಗರಿಕರು, ಅಂಗವಿಕಲರು ಮುಂತಾದವರಿಗೆ ಸಾಕಷ್ಟು ಅನುಕೂಲವಾಗಿದೆ. ಇದಕ್ಕಾಗಿಯೇ ಅಂಚೆ ಇಲಾಖೆ ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಿದ್ದು ಟಿವಿ ಪರದೆಯಲ್ಲಿ ಟೋಕನ್ ಸರದಿ ಯಾವ ಹಂತದಲ್ಲಿದೆ ಎಂಬ ಮಾಹಿತಿ ಪ್ರದರ್ಶನಗೊಳ್ಳುತ್ತಿರುತ್ತದೆ. ಆದರೆ, ಪೋಸ್ಟಲ್ ಎಜೆಂಟರು ಒಟ್ಟಿಗೇ ಹತ್ತಿಪ್ಪತ್ತು ಪಾಸ್​ಬುಕ್ ತಂದು ನಿಲ್ಲುವುದರಿಂದ ಮುಂದಿನ ಟೋಕನ್​ನವರಿಗೆ ತಾಸುಗಟ್ಟಲೆ ಕಾಯುವಂತಾಗುತ್ತದೆ ಎಂಬ ಅಭಿಪ್ರಾಯ ಜನರಿಂದ ಬಂದಿದೆ. ಉಳಿತಾಯ ಖಾತೆಗೆ ಹಣ ಹಾಕುವ, ತೆಗೆಯುವ ಚಿಕ್ಕ ಕೆಲಸಕ್ಕೂ ಟೋಕನ್ ಪಡೆದು ತಾಸುಗಟ್ಟಲೆ ಕಾಯಬೇಕೇ ಎನ್ನುವುದು ಗ್ರಾಹಕರ ಪ್ರಶ್ನೆಯಾಗಿದೆ.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...