More

    ಸಾರಿಗೆ ಸಂಸ್ಥೆ ನಿವೃತ್ತ ನೌಕರರ ಪ್ರತಿಭಟನೆ

    ಬಾಗಲಕೋಟೆ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರಿಗೆ ಮತ್ತು ಅಧಿಕಾರಿಗಳಿಗೆ ನಿವೃತ್ತಿ ಹೊಂದಿದ ಮೂರು ತಿಂಗಳೂಳಗೆ ಅವರಿಗೆ ಬರಬೇಕಾದ ನಿವೃತ್ತಿ ನಂತರದ ಆರ್ಥಿಕ ಸೌಲಭ್ಯಗಳಿಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಮಹಾಮಂಡಳದ ಸರ್ವಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು.

    ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಂಸ್ಥೆಯ ನೌಕರರ ಮತ್ತು ನಿವೃತ್ತ ಸಹಕಾರ್ಯದರ್ಶಿ ಆರ್.ಎಸ್. ಕುಲಕರ್ಣಿ,ಸಾರಿಗೆ ಸಂಸ್ಥೆ ನಿವೃತ್ತ ನೌಕರರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುಮಾರು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರ ಮತ್ತು ಅಧಿಕಾರಿಗಳಿಗೆ ನಿವೃತ್ತಿ ನಂತರದ ಸೌಲಭ್ಯಗಳಾದ ಉಪಧನ, ರಜೆ ನಗದೀಕರಣ ಸೌಲಭ್ಯ ನೀಡಬೇಕು.ಈಗ ೨೦೨೩ ಫೆಬ್ರುವರಿಯಿಂದ ಇಲ್ಲಿಯವರೆಗೆ ನಿವೃತ್ತಿ ಹೊಂದಿದ ನೌಕರರಿಗೆ ಬರಬೇಕಾದ ಆರ್ಥಿಕ ಅನೇಕ ಸೌಲಭ್ಯಗಳು ಬಂದಿಲ್ಲ. ಆದ್ದರಿಂದ ಸರಕಾರ ನಿವೃತ್ತ ನೌಕರರ ಹಿತಕಾಯ್ದು ಸಮಸ್ಯೆಗೆ ಪರಿಹಾರ ಸೂಚಿಸಬೇಕು.

    ಇಲ್ಲದಿದ್ದರೇ ಇದೇ ನವೆಂಬರೆ ೨೫ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾರಿಗೆ ಸಂಸ್ಥೆ ನಿವೃತ್ತ ನೌಕರರ ಕುಟುಂಬ ಸಮೇತವಾಗಿ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ. ಸತ್ಯಾಗ್ರಹದ ವೇಳೆ ಸಮಸ್ಯೆಗಳುಂಟಾದರೆ ಸರಕಾರವೇ ಹೊಣೆ ಎಂದು ಎಚ್ಚರಿಸಿದರು.

    ಈ ಪ್ರತಿಭಟನೆಯಲ್ಲಿ ಆರ್ ಆರ್ ಬೆಳಗಲ,ಎಮ್ ಆರ್ ದೇಗನಾಳ, ಮಹಾಂತರ ಗೌಡರ, ಸಿದ್ದನ ಮಾಡಿದನಿ, ಎಸ್.ಪಿ.ಸಂತಿ, ಪರಸಪ್ಪ ಆಲೂರ, ದೀಪ ತಾಂಬೇಕರ, ಪಿ.ವಿ.ಮಠ,ಬಿ.ಎಚ್ ಕಮಲದಿನ್ನಿ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts