ಬಾದಾಮಿ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ತಲ್ಲಿಣರಾಗಿ ಓದಿನಿಂದ ವಿಮುಖರಾಗುತ್ತಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಮ್. ಸಿದ್ದಲಿಂಗಪ್ಪನವರ ಕಳವಳ ವ್ಯಕ್ತಪಡಿಸಿದರು.
ನಗರದ ಎಸ್‌ವಿಪಿ ಸಂಸ್ಥೆಯ ಜಿಎಮ್‌ಕೆ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುನ್ನಗ್ಗಬೇಕು ಎಂದರು.
ಗುರಿ ಸಾಧನೆಗೆ ಸತತ ಪ್ರಯತ್ನ ಅಗತ್ಯ. ಇಂದು ಸಾಮಾಜಿಕ ಜಾಲತಾಣವನ್ನು ಬಳಸುವವರ ಸಂಖ್ಯೆ ಹೆಚ್ಚಿದ್ದು, ಕೃತಕ ಬುದ್ಧಿಮತ್ತೆಗೆ (ಎಐ) ಮಾರು ಹೋಗಿ ಅಭ್ಯಾಸದಿಂದ ದೂರವಾಗುತ್ತಿದ್ದಾರೆ ಎಂದರು.
ಕಾಲೇಜು ಸುಧಾರಣಾ ಸಮಿತಿಯ ಚೇರ್ಮನ್ ಡಿ.ಎಂ.ಪೈಲ್ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಪ್ರಯತ್ನಶೀಲರಾಗಿರಬೇಕು. ಲಿತಾಂಶ ಹೆಚ್ಚಿಸುವ ಕಡೆ ನಿಮ್ಮ ಗಮನವಿರಬೇಕು. ತಂದೆ-ತಾಯಿಗಳಿಗೆ ಋಣಿಯಾಗಿರಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಜೆ.ಎಸ್. ಮಮದಾಪೂರ, ಕಾರ್ಯಾಧ್ಯಕ್ಷ ಎ.ಸಿ. ಪಟ್ಟಣದ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಅಶೋಕ ಕಲ್ಯಾಣಶೆಟ್ಟಿ, ಪ್ರಾಚಾರ್ಯ ಪ್ರಭು ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾರ್ವತಿ ಲೆಂಕೆನ್ನವರ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸವಿತಾ ಬಳಗನ್ನವರ ನಿರೂಪಿಸಿದರು. ಗುರು ತುಪ್ಪದ ವಂದಿಸಿದರು.
ಉಪನ್ಯಾಸಕರಾದ ಗುರುಚೆನ್ನ ಮಾಳವಾಡ, ಬಸವರಾಜ್ ಉಳ್ಳಾಗಡ್ಡಿ, ಎಮ್.ಐ. ಹುಲ್ಲೂರ, ಆನೇಪ್ಪನವರ, ಆನಂದ ನಾಡಗೌಡ್ರ ಬಿ.ಸಿ. ಗುರಿಕಾರ, ವಿಶಾಲ ಜವಳಿ, ದೀಪಾ ಹೆರಕಲ್, ಪತ್ರಿಮರದ, ಸುಧಾ, ಎಚ್.ಎಂ. ನಿಡಗುಂದಿ, ಮನಗೂಳಿ, ಆನಂದ ಭಜಂತ್ರಿ, ಹಿತ್ತಲಮನಿ, ವಿ.ವಿ. ಡಿಳ್ಳಿನ, ಸಿ.ಬಿ. ಆಲಗುಂಡಿ, ಎಸ್.ಸಿ. ಘಂಟಿಮಠ, ಮಾಲಾ ನಾಯ್ಕರ ಇದ್ದರು.