ಕೋಲಾರ: ಯುವಕರಲ್ಲಿ ಸಾಮರಸ್ಯ ಸಾರುವಲ್ಲಿ ಗಣೇಶೋತ್ಸವ ಹೆಚ್ಚು ಪರಿಣಾಮಕಾರಿಯಾಗಿದ್ದು, ಸಂಸ್ಕಾರ ಬೆಳೆಸಲು ಸಹಕಾರಿಯಾಗಿದೆ ಎಂದು
ಜಿಲ್ಲಾ ಸೇವಾದಳದ ಅಧ್ಯಕ್ಷ ಕೆ.ಎಸ್.ಗಣೇಶ್ ತಿಳಿಸಿದರು.
ದರು.
ನಗರದ ಸಂತೇಗೇಟ್‌ನಲ್ಲಿ ಶ್ರೀಸಾಯಿ ಗಣೇಶ ಮಿತ್ರ ಬಳಗ ಬೃಹತ್ ಗಣಪನ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದು, ಪೂಜಾ ಕರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ,
ಯುವಕರು ಪರಸ್ಪರ ಒಂದಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ದುಶ್ಚಟಗಳಿಂದ ದೂರವಾಗಿ ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳುವಂತಾಗಲಿ ಎಂದರು.
ಸಾಯಿ ಗಣೇಶ ಮಿತ್ರ ಬಳಗದ ಮಹೇಶ್‌ಕುಮಾರ್, ಸಾಯಿಕುಮಾರ್, ಕೃಷ್ಣ, ಪ್ರದೀಪ್, ಸಾಯಿ ಸುಮನ್, ಸಾಯಿಮೌಳಿ, ನಿತೀನ್,ವಿನಯ್, ಪ್ರೀತಂ, ಕೀರ್ತನ್,ಹರೀಶ್, ಬಾಲಾಜಿ, ತೇಜ್‌ಸ್, ಹೇಮಂತ್, ನವೀನ್, ಗಣೇಶ್, ಗೌತಮ್, ಪ್ರವೀಣ್ ಪ್ರಸನ್ನ, ಚಿನ್ನು, ಮಂಜೇಶ್, ಮೋಹನ್, ಬಜರಂಗದಳ ಬಾಲಾಜಿ, ಪತ್ರಕರ್ತರಾದ ವೆಂಕಟೇಶ್‌ಬಾಬಾ, ಕಿಲಾರಿಪೇಟೆ ಮುನಿವೆಂಕಟಯಾದವ್ ಮತ್ತಿತರರು ಇದ್ದರು.
–____