ಬಸವಕಲ್ಯಾಣ: ವಿದ್ಯಾರ್ಥಿ ಜೀವನದಲ್ಲಿ ಸಮಯ ಪ್ರಜ್ಞೆ ಮಹತ್ವದ್ದು, ಸಮಯ ಸದ್ಬಳಕೆ ಮಾಡಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡಿದಾಗ ಯಶಸ್ಸಿನ ದಾರಿ ಸುಗಮವಾಗುತ್ತದೆ ಎಂದು ಹಿರಿಯ ಪ್ರಾಧ್ಯಾಪಕ ಪ್ರೊ.ಆರ್.ಡಿ.ಬಾಲಿಕಿಲೆ ಹೇಳಿದರು.
ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ೩೨ನೇ ಕರ್ನಾಟಕ ಬಟಾಲಿಯನ್ ಕಲಬುರಗಿ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐಕ್ಯೂಎಸಿ ಸಂಯೋಜಕ ಡಾ. ರಮೇಶ ಕೆ.ಬಿ. ಮಾತನಾಡಿ, ಅಗತ್ಯ ಸಿದ್ಧತೆಯೊಂದಿಗೆ ಸ್ಪರ್ಧಾತ್ಮ ಪರೀಕ್ಷೆ ಬರೆದು ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಠೋಬಾ ಡೊಣ್ಣೆಗೌಡರ್ ಮಾತನಾಡಿ, ಕಲಿಕೆಗೆ ಕೊನೆ ಇಲ್ಲ. ಶ್ರಮ ವಹಿಸಿ ಅಭ್ಯಾಸ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.
೩೨ನೇ ಕರ್ನಾಟಕ ಬಟಾಲಿಯನ್ ಕಲಬುರಗಿಯ ಹವಾಲ್ದಾರ್ ಸುನಿಲ್ ಕಡೆ, ಹವಾಲ್ದಾರ್ ಸರ್ದಾರಿಲಾಲ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮನ ರೆಡ್ಡಿ, ಬ್ರಿಮ್ಸ್ನ ಡಾ.ಮಲ್ಲನಗೌಡ ಪಾಟೀಲ್, ಡಾ.ಸುರೇಶ ಎಚ್.ಆರ್., ಉಪನ್ಯಾಸಕ ಅಶ್ವಿನಿ ಜಲಾದೆ, ಗ್ರಂಥಪಾಲಕ ಸೂರ್ಯಕಾಂತ ನಾಸೆ, ಕಲ್ಯಾಣಪ್ಪ ನಾವದಗಿ, ಶರಣು ಮಠಪತಿ, ಸತೀಶ ರಾಠೋಡ್, ಭೀಮಾಶಂಕರ ಪೂಜಾರಿ ಇತರರಿದ್ದರು. ಕು.ವೈಷ್ಣವಿ ಸ್ವಾಗತಿಸಿದರು. ಕು.ಪ್ರಾರ್ಥನಾ ವಂದಿಸಿದರು. ಕು.ಆರ್ಶಿಯಾ ಮತ್ತು ಕು. ಪ್ರಿಯದರ್ಶಿನಿ ನಿರೂಪಣೆ ಮಾಡಿದರು.