Thursday, 13th December 2018  

Vijayavani

Breaking News

ಸಾಧನೆಗೆ ಕಲಾ ಸ್ಪೂರ್ತಿ

Wednesday, 10.01.2018, 3:01 AM       No Comments

ಸಾಧಿಸುವ ಮನಸ್ಸಿದ್ದರೆ, ಸಾಧನೆಗೆ ಅಡ್ಡಿ ಯಾವುದೂ ಇಲ್ಲ ಎನ್ನುವುದಕ್ಕೆ ಅಂಗವಿಕಲ ಕಲಾವಿದರ ಕಲಾಕೃತಿಗಳು ಸ್ಪೂರ್ತಿಯ ಚಿಲುಮೆಗಳಾಗಿವೆ. ವಿಶ್ವದ ವಿವಿಧೆಡೆಯ ಕಲಾವಿದರ ಹಲವು ನಿದರ್ಶನಗಳು ಇಲ್ಲಿವೆ.

ನಾಲ್ಕನೇ ವಯಸ್ಸಿಗೆ ಎಲೆಕ್ಟ್ರಿಕ್ ಶಾಕ್​ಗೆ ತುತ್ತಾಗಿ ಕೈಗಳನ್ನು ಕಳೆದುಕೊಂಡ ಹುವಾಂಗ್ ಗೋಫ್ ಕಾಲಿನಿಂದ ಕುಂಚ ಹಿಡಿದು ಸುಂದರ ಚಿತ್ರ ಬರೆಯುತ್ತಾರೆ. ಮರಿಯಸ್ ಕೆಜೆಸ್ಕಿಗೆ ಹುಟ್ಟುವಾಗಲೇ ಎರಡು ಕೈಗಳು ಇರಲಿಲ್ಲ. ಆದರೆ ಆಕೆ ಬರೆಯುವ ಚಿತ್ರಗಳನ್ನು ನೋಡಿದರೆ ವಾಹ್ ಎನ್ನುವಂತಿವೆ. ಆಟಿಸಂಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಐರಿಸ್ ಗ್ರೇಸ್ ಎಂಬ ಬಾಲೆ ಖ್ಯಾತ ಕಲಾವಿದರನ್ನೂ ಮೀರಿಸುವ ರೀತಿಯಲ್ಲಿ ಚಿತ್ರ ಬರೆಯುತ್ತಾಳೆ. ಹುಟ್ಟುವಾಗಲೇ ಕೈಗಳನ್ನು ಕಳೆದುಕೊಂಡ ಪೀಟರ್ ಲಾಂಗ್​ಸ್ಟಾಫ್, ತಾನೊಬ್ಬ ಅಂಗವಿಕಲ ಎಂದು ಯಾವತ್ತೂ ಭಾವಿಸಿಕೊಂಡಿಲ್ಲ. ಆದರೆ ಆತನ ಚಿತ್ರ ನೋಡಿದರೆ ಆತನಿಗೆ ಕೈಗಳಿಲ್ಲ ಎನ್ನಲಾಗದು. ಅಲಾನಾ ಕೂಡ ಹುಟ್ಟಿದಾಗಲೇ ಕೈ ಕಳೆದುಕೊಂಡಿದ್ದರೂ, ಬಾಯಿ ಮತ್ತು ಕಾಲನ್ನು ಬಳಸಿ ಸುಂದರ ಚಿತ್ರ ಬರೆಯುತ್ತಾಳೆ. ಟಾಮಿ ಹೊಲೆಸ್ಟೀನ್ ಜೀವನ ವ್ಹೀಲ್​ಚೇರ್​ನಲ್ಲೇ ಕಳೆಯಬೇಕಾದ ಪ್ರಸಂಗ ಬಂದಿದ್ದರೂ ಆತ ವ್ಹೀಲ್​ಚೇರ್ ಬಳಸಿಕೊಂಡೇ ಚಿತ್ರ ಬರೆಯುತ್ತಾನೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top