ಸಿನಿಮಾ ತಾರೆಗಳ ಕುರಿತು ಚಿತ್ರಗಳು, ಪುಸ್ತಕ ಹಾಗೂ ಸಾಕ್ಷ್ಯಚಿತ್ರಗಳು ಬರುತ್ತಿರುತ್ತವೆ. ಈ ಮೂಲಕ ಅವರ ಜೀವನ, ಸಾಧನೆ, ವಿವಾದ, ವೈಯಕ್ತಿಕ ವಿಚಾರಗಳು ಸೇರಿ ಹಲವಾರು ವಿಷಯಗಳು ಮನ್ನೆಲೆಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಬಹುಭಾಷೆ ನಟಿ ನಯನತಾರಾ ಕುರಿತು ಸಾಕ್ಷ್ಯ ಚಿತ್ರ ಸಿದ್ಧವಾಗಿದೆ. ‘ನಯನತಾರಾ: ಬಿಯಾಂಡ್ ದ ಫೇರಿ ಟೇಲ್’ ಎಂಬ ಶೀರ್ಷಿಕೆಯಲ್ಲಿ ತಯಾರಾದ ಈ ಸಾಕ್ಷ್ಯಚಿತ್ರವು ಇದೇ ತಿಂಗಳ 18ರಂದು ಅಂದರೆ, ನಟಿಯ ಹುಟ್ಟುಹಬ್ಬದಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿಯಾಗಿರುವ ನಯನ ತಾರಾ ಬಗ್ಗೆ ಸಾಕ್ಷ್ಯಚಿತ್ರ ಮಾಡಲಾಗುತ್ತಿದೆ ಎಂಬುದನ್ನು ಎರಡು ವರ್ಷಗಳ ಹಿಂದೆ ಟೀಸರ್ ಮೂಲಕ ತಿಳಿಸಲಾಗಿತ್ತು. ಬಳಿಕ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಡಾಕ್ಯುಮೆಂಟರಿಯ ಬಗ್ಗೆ ಅಪ್‌ಡೇಟ್ ದೊರೆತಿದ್ದು, ರಿಲೀಸ್ ಡೇಟ್ ಸೇರಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಒಂದು ತಾಸು 20 ನಿಮಿಷದ ಈ ಸಾಕ್ಷ್ಯಚಿತ್ರದಲ್ಲಿ ನಟಿಯ ಬದುಕು, ಸಿನಿ ಪಯಣ, ಮದುವೆ ಸೇರಿ ಅನೇಕ ವಿಚಾರಗಳ ಬಗ್ಗೆ ಇರಲಿದೆ ಎಂಬುದು ಟ್ರೇಲರ್ ನೋಡಿದ ಬಳಿಕ ಗೊತ್ತಾಗುತ್ತದೆ. ನಟ ಶಾರುಖ್ ಖಾನ್, ಮಣಿರತ್ನಂ, ರಜಿನಿಕಾಂತ್, ಉಪೇಂದ್ರ, ರಾಣಾ ದಗ್ಗುಬಾಟಿ, ತಾಪ್ಸಿ, ವಿಘ್ನೇಶ್ ಶಿವನ್ ಅನೇಕರು ಈ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಸದ್ಯ, ‘ತನಿ ಒರುವನ್-2’, ‘ಮಣ್ಣನ್‌ಗಟ್ಟಿ -1960’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್
ಸಾಕ್ಷ್ಯಚಿತ್ರದಲ್ಲಿ ನಯನತಾರಾ: ಇದೇ 18ಕ್ಕೆ ನಟಿಯ ಹುಟ್ಟುಹಬ್ಬದಂದು ಬಿಡುಗಡೆ
You Might Also Like
ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips
ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…
ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips
ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…
Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!
Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…