28.5 C
Bengaluru
Monday, January 20, 2020

ಸಹಿ ಹಾಕುವ ಮುನ್ನ ಓದಿಕೊಳ್ಳಿ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಕಿತ್ತಾಟ ಹೊಸ ವಿಷಯವೇನಲ್ಲ. ಬಾಡಿಗೆ ಒಪ್ಪಂದದ ವಿಷಯವಾಗಿ ಒಂದಲ್ಲ ಒಂದು ತಕರಾರು ನಡೆಯುತ್ತಲೇ ಇರುತ್ತದೆ. ಅದಕ್ಕಾಗಿ ನೀವು ಮನೆ ಬಾಡಿಗೆ ಪಡೆಯುವ ಮುನ್ನ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಬಾಡಿಗೆ ಹಣ, ಅವಧಿ, ನವೀಕರಣ, ಭದ್ರತಾ ಠೇವಣಿ, ಬಾಡಿಗೆಯ ಕಾಲಾವಧಿ ಮುಕ್ತಾಯ, ಪಾವತಿ ವಿಧಾನ, ಬಾಡಿಗೆ ದಿನಾಂಕ, ವಿಳಂಬ ದಂಡ, ಬಾಡಿಗೆದಾರರಿಗೆ ಸೌಲಭ್ಯಗಳು, ಹಿಂದಿನ ಬಿಲ್, ಶುಲ್ಕ ಸೇರಿ ಮತ್ತಿತರರ ವಿವರಗಳ ಬಗ್ಗೆ ಕಡ್ಡಾಯವಾಗಿ ಓದಿದ ಬಳಿಕ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು. ಈ ವಿಷಯದಲ್ಲಿ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ.

ಬಾಡಿಗೆ ಒಪ್ಪಂದ ಎಂದರೇನು?: ಬಾಡಿಗೆದಾರ ಮತ್ತು ಮಾಲೀಕರ ನಡುವೆ ನಡೆಯುವ ಒಂದು ಕಾನೂನು ರೂಪದ ಒಪ್ಪಂದಕ್ಕೆ ಬಾಡಿಗೆ ಒಪ್ಪಂದ ಎನ್ನುತ್ತಾರೆ. ಬಾಡಿಗೆದಾರ ಮತ್ತು ಮಾಲೀಕ ಇಬ್ಬರು ಒಪ್ಪಂದದ ಸ್ಥಿರ ಸ್ವರೂಪವನ್ನು ಬಳಸುತ್ತಾರೆ. ಆದರೆ, ಅದರ ನಿಯಮ ಹಾಗೂ ಷರತ್ತುಗಳಿಗೆ ಅಷ್ಟೇನೂ ಗಮನ ಹರಿಸುವುದಿಲ್ಲ. ಆಗಲೇ ಬಾಡಿಗೆದಾರ ಹಾಗೂ ಭೂ ಮಾಲೀಕರಿಗೆ ಸಮಸ್ಯೆಗಳು ಉದ್ಭವವಾಗುತ್ತವೆ. ಹೀಗಾಗಿ, ಬಾಡಿಗೆ ಒಪ್ಪಂದದ ವಿಷಯಗಳ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ಏಕೆಂದರೆ ಅದು ಕಾನೂನು ದಾಖಲೆಯಾಗಿರುತ್ತದೆ. ಎರಡು ವ್ಯಕ್ತಿಗಳ ನಡುವಿನ ಸಂವಹನ ಪ್ರಕಾರ ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು.

ಬಾಡಿಗೆ ಮೊತ್ತ ಉಲ್ಬಣ: ಪ್ರತಿ ಬಾಡಿಗೆ ಒಪ್ಪಂದದಲ್ಲಿ ನೀವು ಪಾವತಿಸುವ ಬಾಡಿಗೆ ಮೊತ್ತ ಮತ್ತು ಅದರ ಜತೆಗೆ ಮೊತ್ತವನ್ನು ಉಲ್ಲೇಖಿಸುವ ಷರತ್ತು ಇದೆ. ಆದ್ದರಿಂದ ಈ ಬಗ್ಗೆ ಸ್ಪಷ್ಟನೆ ಪಡೆದ ಬಳಿಕ ನೀವು ಸಹಿ ಹಾಕಬೇಕು.

ಬಾಡಿಗೆ ಅವಧಿ, ನವೀಕರಣ, ಭದ್ರತಾ ಠೇವಣಿ: ಬಾಡಿಗೆ ಒಪ್ಪಂದದ ನವೀಕರಣವನ್ನು 11 ತಿಂಗಳ ಬಳಿಕ ಮಾಡಲಾಗುತ್ತದೆ. ಎಷ್ಟು ಭದ್ರತಾ ಠೇವಣಿ ಇಡಬೇಕು. ಬಾಡಿಗೆ ಅವಧಿ ಮುಗಿದ ಬಳಿಕ ಮನೆ ಖಾಲಿ ಮಾಡಿದಾಗ ಎಷ್ಟು ಮೊತ್ತವನ್ನು ಮಾಲೀಕರು ಹಿಂದಿರುಗಿಸಬೇಕು ಎನ್ನುವ ಕುರಿತು ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.

ಬಾಡಿಗೆ ಮುಕ್ತಾಯ: ಪ್ರತಿ ಬಾಡಿಗೆ ಒಪ್ಪಂದ ಅವಧಿಯನ್ನು ತಿಳಿಸುವ ನಿಬಂಧನೆಯನ್ನು ಒಳಗೊಂಡಿರುತ್ತದೆ. ಇದನ್ನು ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಪರೀಕ್ಷಿಸಿಕೊಳ್ಳಬೇಕು.

ಪಾವತಿ ವಿಧಾನ: ಮನೆಯ ಬಾಡಿಗೆಯ ಮೊತ್ತವನ್ನು ಚೆಕ್ ಅಥವಾ ಕ್ಯಾಷ್ ರೂಪ ದಲ್ಲಿ ನೀಡಬೇಕೆಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.

ಬಾಡಿಗೆಯ ದಿನಾಂಕ, ವಿಳಂಬ ದಂಡ: ಒಂದು ವೇಳೆ ಬಾಡಿಗೆಯನ್ನು ನಿಗದಿತ ಸಮಯದಲ್ಲಿ ಪಾವತಿಸಲು ಸಾಧ್ಯವಾಗದಿದ್ದರೆ ದಂಡವನ್ನು ನಮೂದಿಸುವ ಷರತ್ತು ಒಳಗೊಂಡಿದೆಯೇ ಹಾಗೂ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಬಾಡಿಗೆ ಆರಂಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.

ಹಿಂದಿನ ಬಿಲ್, ಶುಲ್ಕಗಳು

ಬಾಡಿಗೆ ಮನಗೆ ತೆರಳುವ ಮುನ್ನ ಬಾಡಿಗೆದಾರರು ಹಿಂದಿನ ನಿರ್ವಹಣೆಯ ಶುಲ್ಕ, ಆಸ್ತಿಯ ನಿರ್ವಹಣೆ ಮತ್ತು ಮತ್ತಿತರರ ಶುಲ್ಕಗಳನ್ನು ತಪ್ಪದೆ ಪರೀಕ್ಷಿಸಿದ ಪಾವತಿಸಬೇಕು. ಅಲ್ಲದೆ, ಸಾಕು ಪ್ರಾಣಿಗಳನ್ನು ಅನುಮತಿ ನೀಡದಿರುವುದು, ತಡವಾಗಿ ಮನೆಗೆ ಬರುವುದು ಹಾಗೂ ಜೋರಾಗಿ ಮ್ಯೂಸಿಕ್ ಸೇರಿ ಇನ್ನಿತರ ಬಗ್ಗೆ ಚರ್ಚೆ ಮಾಡಬೇಕು. ಇಲ್ಲದಿದ್ದರೆ, ಒಂದೊಂದೇ ಸಮಸ್ಯೆಗಳು ಉಂಟಾಗಿ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಜಗಳ ನಡೆಯುತ್ತಿರುತ್ತವೆ. ಇದರಿಂದ, ಸಂಬಂಧ ಮತ್ತು ಸ್ನೇಹ ಹಾಳಾಗಲಿದೆ. ಆದ್ದರಿಂದ ಬಾಡಿಗೆ ಮನೆಗೆ ಪ್ರವೇಶ ಮಾಡುವ ಕಡ್ಡಾಯವಾಗಿ ಬಾಡಿಗೆದಾರರು ನಿಬಂಧನೆಗಳನ್ನು ಪರೀಕ್ಷಿಸುವುದು ಒಳ್ಳೆಯದು.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...