25.5 C
Bangalore
Monday, December 16, 2019

ಸಹಜ ಕೃಷಿ ಪದ್ಧತಿಯಿಂದ ಪರಿಸರ ಸಂರಕ್ಷಣೆ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ನರೇಗಲ್ಲ: ನಮ್ಮ ಹಿರಿಯರ ಸಹಜ ಕೃಷಿ ಪದ್ಧತಿಯಿಂದ ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ಉತ್ತಮ ಇಳುವರಿ ಪಡೆಯಲು ಸಾಧ್ಯ. ಸಾವಯವ ಕೃಷಿಯಿಂದ ಇಳುವರಿ ಹೆಚ್ಚಾಗುತ್ತದೆ ಎಂದು ಕೋಟುಮಚಗಿಯ ಸಾವಯವ ಕೃಷಿಕ ವೀರೇಶ ನೇಗಲಿ ಹೇಳಿದರು.

- Advertisement -

ಪಟ್ಟಣದ ಹಿರೇಮಠದ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಅಧಿಕ ಉತ್ಪಾದನೆಯ ಆಸೆಗೆ ಕಟ್ಟುಬಿದ್ದು ಬೆಳೆ ವಿಸ್ತೀರ್ಣ ಹೆಚ್ಚಿಸಿಕೊಳ್ಳುವ ಬದಲು ಕಡಿಮೆ ಭೂಮಿಯಲ್ಲಿಯೇ ಉತ್ತಮ ಸಹಜ, ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ರಾಸಾಯನಿಕ ರಸಗೊಬ್ಬರಗಳ ಅತ್ಯಧಿಕ ಬಳಕೆಯ ಫಲವಾಗಿ ಸಮೃದ್ಧವಾದ ಮಣ್ಣು ಇಂದು ಬರಡಾಗುತ್ತಿದೆ. ಭೂಮಿಯಲ್ಲಿನ ಫಲವತ್ತತೆ ನಶಿಸಿ ಹೋಗುತ್ತಿದೆ ಎಂದರು.

ನಿವೃತ್ತ ಶಿಕ್ಷಕ ಎಸ್.ಎನ್. ದಿಂಡೂರ ಮಾತನಾಡಿ, ಕೃಷಿ ಮತ್ತು ಆಧ್ಯಾತ್ಮಕ್ಕೆ ಅವಿನಾಭಾವ ಸಂಬಂಧವಿದ್ದು, ಎರಡನ್ನು ಹೊಂದಲು ನಿಷ್ಠೆ ಮುಖ್ಯ ಎಂದು ಹೇಳಿದರು.

ಧಾರ್ವಿುಕ ಕಾರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ನಡೆಸುತ್ತೇವೆ. ಸಿದ್ಧಾಂತ ಶಿಖಾಮಣಿ ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥವಾಗಿದೆ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನು ಬಯಸುವ ಮಹಾನ್ ಗ್ರಂಥವಾಗಿದೆ ಎಂದರು.

ಜಿಲ್ಲಾ ಉತ್ತಮ ಶಿಕ್ಷಕ ಡಿ.ಎಚ್. ಪರಂಗಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೀರನಗೌಡ ಮಾಲಿಪಾಟೀಲ ಅವರನ್ನು ಸನ್ಮಾನಿಸಲಾಯಿತು. ಅನ್ನಪೂರ್ಣೆಶ್ವರಿ ಮಹಿಳಾ ಸಂಘ, ರೇಣುಕಾಚಾರ್ಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಿಂದ ಭಕ್ತಿಗೀತೆ ಹಾಗೂ ಧರ್ಮಗ್ರಂಥ ಪಾರಾಯಣ ಜರುಗಿತು. ನಿವೃತ್ತ ಶಿಕ್ಷಕ ಎಂ.ಎ. ಗುರುವಡೇಯರ, ಡಾ.ರಾಜೇಂದ್ರಗಚ್ಚಿನಮಠ, ಮಲ್ಲಿಕಾರ್ಜುನಗೌಡ ಮಲ್ಲನಗೌಡ್ರ, ಮುತ್ತಣ್ಣ ಪಲ್ಲೇದ, ಎಸ್.ಕೆ. ಪಾರಿಗೊಂಡ, ಶರಣಪ್ಪ ಜುಟ್ಲ ಸೇರಿದಂತೆ ಇತರರಿದ್ದರು. ನಿಂಗಪ್ಪ ಮಡಿವಾಳರ, ಮುತ್ತಪ್ಪ ಹಡಪದ ನಿರ್ವಹಿಸಿದರು.

ಶಿವನಲ್ಲಿ ನಿಷ್ಠೆಯುಳ್ಳವನೇ ಮಾಹೇಶ್ವರ

ಕೇವಲ ಸಹಜದಾನದಲ್ಲಿಯೇ ಕುಶಲನಾದ, ಶಿವನಲ್ಲಿಯೇ ಏಕನಿಷ್ಠೆಯುಳ್ಳವನಾದ ಮತ್ತು ಬ್ರಹ್ಮಾದಿ ಪದವಿಗಳಿಂದ ವಿಮುಖನಾದ ಭಕ್ತನೇ ನೀಜವಾದ ಮಾಹೇಶ್ವರನಾಗುತ್ತಾನೆ. ವೈರಾಗ್ಯದ ಅಧಿಕ್ಯದಿಂದ ಭಕ್ತಿಯಲ್ಲಿ ಯಾವಾಗ ಉತ್ಕರ್ಷ ಉಂಟಾಗುವುದೋ ಆಗ ಸ್ಥಿರ ವಿವೇಕವುಳ್ಳ ಭಕ್ತನು ಮಾಹೇಶ್ವರನೆಂದು ಕರೆಸಿಕೊಳ್ಳುತ್ತಾನೆ. ಸರ್ವಸ್ವವನ್ನು ಶಿವನಿಗೆ ಅರ್ಪಿಸಿ, ಶಿವಧ್ಯಾನ, ಲಿಂಗಪೂಜೆಗೆ ತನ್ನನ್ನು ತಾನು ಅರ್ಪಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ರುದ್ರನು ವಿಶ್ವಕ್ಕಿಂತಲೂ ದೊಡ್ಡವನಾಗಿರುತ್ತಾನೆ ಮತ್ತು ವಿಶ್ವಕ್ಕೆ ಅನುಗ್ರಹವನ್ನು ಮಾಡುವಂತವನೂ ಆಗಿರುತ್ತಾನೆ. ಈ ವಿಚಾರದಲ್ಲಿ ಸ್ಥಿರಬುದ್ಧಿಯುಳ್ಳವನು ಯಾವನೋ ಅವನೇ ಮಾಹೇಶ್ವರ. ದೇವತೆಗಳಿಗೆ ಈಶ್ವರನೇ ದೊಡ್ಡವನು ಎಂಬ ಬುದ್ಧಿಯೋಗದಿಂದ ಈಶ್ವರನಲ್ಲಿ ಆಸಕ್ತನಾದ ಭಕ್ತನಿಗೆ ಗುರು ಕೃಪೆ ಲಭ್ಯವಾಗುತ್ತದೆ. ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳ ಸಂಪತ್ತುಗಳು (ಪದವಿಗಳು) ಕ್ಷಯ ಮತ್ತು ಅತಿಶಯಗಳಿಂದ ಕೂಡಿಕೊಂಡಿವೆ. ಈ ಪದವಿಗಳನ್ನು ಯುಕ್ತಿಯಿಂದ ಯಾವಾಗಲೂ ಯಾರು ತೃಣ ಸಮಾನನಾಗಿ ತಿಳಿದುಕೊಳ್ಳುತ್ತಾನೆಯೋ ಅವನೇ ವೀರಮಾಹೇಶ್ವರನು.

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...