ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ

ಬೆಂಗಳೂರು: ರಾಜಕೀಯ ಹಸ್ತಕ್ಷೇಪದಿಂದಾಗಿ ಹಲವು ಸಹಕಾರ ಸಂಘಗಳು ಅಧೋಗತಿ ತಲುಪಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಹೊಸಕೆರೆಹಳ್ಳಿ ವಿ ಲೆಗಸಿ ಕನ್ವೆನ್ಷನ್ ಸೆಂಟರ್​ನಲ್ಲಿ ಕಮ್ಮವಾರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ರಾಜಕೀಯ ಮುಖಂಡರು ನಿರ್ದೇಶಕರಾಗಿ ಸಂಘಗಳ ಹಣ ಲೂಟಿ

ಮಾಡುತ್ತಾರೆ. ಈ ನಾಮ ನಿರ್ದೇಶನ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ಸಹಕಾರ ಸಂಘಗಳು ಉದ್ಧಾರ ವಾಗುವುದಿಲ್ಲ ಎಂದರು.

ಪ್ರಧಾನಿಯಾಗಿದ್ದಾಗ ಸಹಕಾರ ಸಂಘಗಳಿಗೆ ಸರ್ಕಾರದಿಂದ ಖಾಸಗಿ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡದಂತೆ ನಿರ್ಣಯ ಕೈಗೊಂಡಿದ್ದೆ. ನಂತರ ಅದನ್ನು ಕೈ ಬಿಡಲಾಗಿದೆ. ಈ ಸಹಕಾರ ಸಂಘಗಳು ಬೆಳೆಯಬೇಕಾದರೆ, ನಿರ್ದೇಶಕರನ್ನು ನೇಮಿಸುವುದು ಕೈಬಿಡಬೇಕು. ಸರ್ಕಾರದ ಹಸ್ತಕ್ಷೇಪ ತಪ್ಪಿಸ ಬೇಕು ಎಂದು ಹೇಳಿದರು.

ಕಮ್ಮವಾರಿ ಸೊಸೈಟಿಯಲ್ಲಿ ನಾಮನಿರ್ದೇಶಿತ ನಿರ್ದೇಶಕರಿಲ್ಲದ ಪರಿಣಾಮ ಉತ್ತಮ ಸಾಧನೆ ಮಾಡಿದೆ. ಸದಸ್ಯರಿಗೆ ಶೇ.23 ಡಿವಿಡೆಂಟ್ ನೀಡುತ್ತಿರುವುದು ಸೊಸೈಟಿ ಆಡಳಿತ ಮಂಡಳಿಗಳು ಎಷ್ಟು ಪಾರದರ್ಶಕ ಆಡಳಿತ ನಡೆಸಿವೆ ಎಂಬುದನ್ನು ತೋರಿಸುತ್ತದೆ ಎಂದರು.

10 ಲಕ್ಷ ರೂ. ದೇಣಿಗೆ: ರಜತ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸೊಸೈಟಿಯಿಂದ ರಾಜ್ಯ ಸಹಕಾರ ಮಹಾಮಂಡಲಕ್ಕೆ ಶಿಕ್ಷಣ ಉದ್ದೇಶಕ್ಕಾಗಿ 10 ಲಕ್ಷ ರೂ. ದೇಣಿಗೆ ನೀಡಲಾಯಿತು. ಸೊಸೈಟಿ ಅಧ್ಯಕ್ಷ ಡಾ.ಟಿ. ಭದ್ರಾಚಲಂ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ವಿ. ವೆಂಕಟೇಶ್, ಕಮ್ಮವಾರಿ ಸಂಘದ ಅಧ್ಯಕ್ಷ ವೈ. ರಾಮಚಂದ್ರ ನಾಯ್ಡು, ಕಾರ್ಯದರ್ಶಿ ಕೆ. ವೆಂಕಟೇಶ ನಾಯ್ಡು, ಮಾಜಿ ಸಚಿವ ಎಂ. ರಘುಪತಿ, ಕೆಎಸ್​ಎಸ್​ಐಡಿಸಿ ಮಾಜಿ ಅಧ್ಯಕ್ಷ ಡಾ. ಗುರಪ್ಪ ನಾಯ್ಡು ಮತ್ತಿತರರಿದ್ದರು.

ಕಮ್ಮವಾರಿ ಸಮಾಜದ ಜನ ಶ್ರಮಜೀವಿಗಳು ಹಾಗೂ ಸ್ವಾಭಿಮಾನಿಗಳು. ಕಳೆದ 25 ವರ್ಷಗಳಿಂದ ಸೊಸೈಟಿಯನ್ನು ಉತ್ತಮವಾಗಿ ಬೆಳೆಸಿದ್ದಾರೆ. ತಮ್ಮ ಸಮುದಾಯಕ್ಕೆ ಸೀತವಾಗದೆ ಇತರೆ ಸಮುದಾಯದ ಸದಸ್ಯರಿಗೂ ಸಾಲ ಸೌಲಭ್ಯ ಕಲ್ಪಿಸುತ್ತಿರುವುದು ನಿಜಕ್ಕೂ ಉತ್ತಮ ಕೆಲಸ.

| ಕೆ.ಆರ್. ರಮೇಶ್ ಕುಮಾರ್ ಮಾಜಿ ಸ್ಪೀಕರ್

Leave a Reply

Your email address will not be published. Required fields are marked *