
ಚಿಟಗುಪ್ಪ: ಹಸಿರೇ ಉಸಿರಾಗಿದೆ. ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಿದರೆ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಮನ್ನಾಎಖೇಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ವನಮಹೋತ್ಸವ ಮತ್ತು ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ತಮ್ಮ ತಮ್ಮ ತಾಯಿ ಮತ್ತು ಗುರು-ಹಿರಿಯರ ಹೆಸರಲ್ಲಿ ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ತಾಯಿ ಹೆಸರಿನಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದ್ದಾರೆ. ಮರ-ಗಿಡಗಳು ನಮಗೆ ಉಚಿತ ಗಾಳಿ, ಆಮ್ಲಜನಕ ನೀಡುತ್ತ ಬಂದಿದೆ. ನಾವು ಸಹ ಹೆಚ್ಚೆಚ್ಚು ಮರ-ಗಿಡಗಳನ್ನು ಹಚ್ಚಿ ಬೆಳೆಸುವ ಮೂಲಕ ಸಸ್ಯ ಸಂಪತ್ತು ರಕ್ಷಿಸಿದರೆ ಅವು ಕಾಮಧೇನು ಕಲ್ಪವೃಕ್ಷದಂತೆ ನಮ್ಮನ್ನು ಕಾಪಾಡುತ್ತವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಅಗಸಿ, ಸದಸ್ಯರಾದ ಸಂತೋಷ ಹಳ್ಳಿಖೇಡ, ಫಾರೂಕ್ ಜಮಾದಾರ, ಖುದ್ದೂಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಬಿರಾದಾರ, ವಲಯ ಅರಣ್ಯಾಧಿಕಾರಿ ಶ್ರೀಕಾಂತ ರಾಠೋಡ್, ಪಿಡಿಒ ಭಾಗ್ಯಜ್ಯೋತಿ, ಪ್ರಮುಖರಾದ ಗುರುನಾಥ ರಾಜಗೀರಾ, ಸುರೇಶ ಮಾಶೆಟ್ಟಿ, ಚಂದ್ರಯ್ಯ ಸ್ವಾಮಿ, ರಾಜುಕುಮಾರ ಪಂಚಾಳ, ಆಬೇದ್ ಅಲಿ, ತಾಜೋದ್ದಿನ್, ಜಗನ್ನಾಥ ಪಂಡಿತ, ಮೋಹನ, ಬಸವರಾಜ, ವಿನೋದ, ನಾಗಶೆಟ್ಟಿ ಚೆಟನಳ್ಳಿ ಇತರರಿದ್ದರು.