More

  ಸರ್ವ ಧರ್ಮಗಳನ್ನೂ ಗೌರವಿಸೋಣ

  ಚನ್ನಮ್ಮನ ಕಿತ್ತೂರ: ಗಡ್ಡ ಬಿಟ್ಟು ಟೋಪಿ ಹಾಕಿದವರು ಮುಸಲ್ಮಾನರಲ್ಲ, ಪ್ರೀತಿ ಇರುವವರು ನಿಜವಾದ ಮುಸಲ್ಮಾನರು ಎಂದು ಕಾದ್ರೊಳ್ಳಿಯ ಹಜರತ್ ತನ್ವಿರಸಾಬ್ ಪೂಜಾರ ಹೇಳಿದರು.

  ಇಲ್ಲಿನ ಕಲ್ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಅವರ 14ನೇ ಪಟ್ಟಾಧಿಕಾರ ವಾರ್ಷಿಕೋತ್ಸವ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತನ್ನ ಧರ್ಮ ಪ್ರೀತಿಸುವ ಜತೆಗೆ ಇತರ ಧರ್ಮವನ್ನು ಗೌರವಿಸಬೇಕು ಎಂದರು.

  ನಿಚ್ಚಣಕಿಯ ಮಡಿವಾಳೇಶ್ವರಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಎಲ್ಲರನ್ನೂ ಸಮಾನರಾಗಿ ಕಾಣುವ ಮೂಲಕ ಶ್ರೀಮಠವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಪಟ್ಟಾಧಿಕಾರದ ವಾರ್ಷಿಕೋತ್ಸವವನ್ನು ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

  ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಎಲ್ಲ ಜನರ ಸಹಕಾರದಿಂದ ಸೇವೆ ಮಾಡಲು ಅವಕಾಶ ದೊರೆತಿದೆ. ನಾಡಿನ ಅಭಿವೃದ್ಧಿಗೆ ಸಾಧ್ಯವಾದಷ್ಟು ಶ್ರಮಿಸುತ್ತೇನೆ ಎಂದರು.

  ಡಾ.ಸತೀಶ ಚೌಲಗೇರ ನವಜೀವನ ಫೌಂಡೇಷನ್, ನವಜೀವನ ಆಸ್ಪತ್ರೆ ಬೆಳಗಾವಿ ಸಹಯೋಗದಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಜರುಗಿತು. ದೇವರಶೀಗಿಹಳ್ಳಿಯ ವೀರೇಶ್ವರ ದೇವರು. ಗಂದಿಗವಾಡದ ಮೃತ್ಯುಂಜಯ ಸ್ವಾಮೀಜಿ, ಕಮತೇನಟ್ಟಿಯ ಗುರುದೇವರು, ಕಿನಾವಿವ ಸಂಘದ ಚೇರ್ಮನ್ ಜಗದೀಶ ವಸದ, ಜಗದೀಶ ಬಿಕ್ಕಣ್ಣವರ, ಡಾ. ಇಮಾದ ರಾಜಗೂಳಿ, ಡಾ. ಚಂದ್ರಶೇಖರ ಪೋಲಿಸ ಪಾಟೀಲ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts