ಸರ್ವಾತ್ಮಕನೆಂದರೆ ಸಂಸಾರಿಯಲ್ಲ

Latest News

ಸಂಸದ, ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಕಾಣೆಯಾಗಿದ್ದಾರೆ ಹುಡುಕಿಕೊಡಿ: ದೆಹಲಿಯಲ್ಲಿ ಪತ್ತೆಯಾದ ನಾಪತ್ತೆ ಪೋಸ್ಟರ್​!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಲ್ಬಣಿಸಿರುವ ವಾಯುಮಾಲಿನ್ಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸಂಸದೀಯ ಸಮಿತಿ ಕರೆದಿದ್ದ ಸಭೆಗೆ ಗೈರುಹಾಜರಾದ ಪೂರ್ವ ದೆಹಲಿಯ ಬಿಜೆಪಿ...

ಮೂಡಬಿದರೆಯ ತೋಡಾರು ಗ್ರಾಮದ ಅಯ್ಯಪ್ಪ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಿರುವ ಶ್ವಾನ

ಚಿಕ್ಕಮಗಳೂರು: ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೊರಟಿರುವ ಭಕ್ತರ ತಂಡದ ಜತೆ ಶ್ವಾನವೊಂದು ತೆರಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ...

ವಿಆರ್​ಎಲ್​ ಪ್ರಾಯೋಜಕತ್ವದ ಹಾಫ್​ ಮ್ಯಾರಥಾನ್​ಗೆ ನಟಿ ಸುಮನ್ ನಗರ್‍ಕರ್ ಚಾಲನೆ: ಗಿನ್ನೆಸ್​ ದಾಖಲೆ ಬರೆದ ಓಜಲ್ ನಲವಡಿಗೆ ಸನ್ಮಾನ

ಹುಬ್ಬಳ್ಳಿ: ವಿಆರ್​ಎಲ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಹಾಫ್ ಮ್ಯಾರಥಾನ್​ಗೆ ಖ್ಯಾತ ನಟಿ ಸುಮನ್ ನಗರ್‍ಕರ್ ಅವರು ಫ್ಲ್ಯಾಗ್ ಆಫ್ ಮಾಡುವ ಮೂಲಕ ಭಾನುವಾರ ಚಾಲನೆ...

16 ವರ್ಷದ ಬಾಲಕನಿಂದ ಸೋದರಸಂಬಂಧಿ ಬಾಲಕಿ ಮೇಲೆ ಅತ್ಯಾಚಾರ

ಗುರುಗ್ರಾಮ: ಹದಿನಾರು ವರ್ಷದ ಬಾಲಕನೊಬ್ಬ ಸೋದರಸಂಬಂಧಿಯ 15 ವರ್ಷದ ಬಾಲಕಿಯನ್ನು ಮಂಚಕ್ಕೆ ಕಟ್ಟಿಹಾಕಿ ಅತ್ಯಾಚಾರ ಎಸಗಿರುವ ಆರೋಪ ಹರಿಯಾಣದ ಗುರುಗ್ರಾಮ 51ನೇ ವಲಯದಲ್ಲಿ...

ಜೀಪಿಗೆ ಅಡ್ಡ ಬಂದ ಕಾಡುಕೋಣವನ್ನು ಹಿಮ್ಮೆಟ್ಟಿಸಿದ ಶ್ವಾನ: ವಿಡಿಯೋ ವೈರಲ್​

ಚಿಕ್ಕಮಗಳೂರು: ವಾಹನಕ್ಕೆ ಅಡ್ಡ ಬಂದ ಕಾಡುಕೋಣವನ್ನು ಶ್ವಾನ ಹಿಮ್ಮೆಟ್ಟಿಸಿದ ಘಟನೆಯ ವಿಡಿಯೋ ಚಿತ್ರೀಕರಣ ವೈರಲ್​ ಆಗಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಫಿ ತೋಟದಲ್ಲಿ...

ಶ್ರೀ ವಸಿಷ್ಠರು ಬೇರೆ ಬೇರೆ ಉದಾಹರಣೆಗಳ ಮೂಲಕ ಬ್ರಹ್ಮಜ್ಞಾನದ ನಂತರ ವಿದೇಹಕೈವಲ್ಯ ಪಡೆದವನಿಗೆ ಜಗತ್ತು ಇರುವುದಿಲ್ಲ ಎಂದಿದ್ದಾರೆ. ವಸಿಷ್ಠರು ಶ್ರೀರಾಮನಿಗೆ ಗುರುಗಳು. ಅವರು ಹೇಳಿದ ಉದಾಹರಣೆಗಳ ಮೂಲಕ ತಾನು ಅರ್ಥಮಾಡಿಕೊಂಡಿದ್ದನ್ನು ಅನುಭವಕ್ಕೆ ತಂದುಕೊಳ್ಳುವುದು ಹೇಗೆಂಬುದು ಶ್ರೀರಾಮನಿಗಿರುವ ಸಮಸ್ಯೆ. ಅನುಭವಕ್ಕೆ ತಂದುಕೊಳ್ಳಲು ವಿಪರೀತಭಾವನೆ ಮತ್ತು ಅಸಂಭಾವನೆಗಳು ಅಡ್ಡಬರುತ್ತಿವೆ. ವಿಪರೀತಭಾವನೆ ಎಂದರೆ ವಿರುದ್ಧ ಭಾವನೆ. ವಸಿಷ್ಠರು ಹೇಳಿದ್ದಕ್ಕೆ ವಿರುದ್ಧವಾಗಿ ಈ ಜಗತ್ತು ಸತ್ಯವೇ ಆಗಿದೆ ಎಂಬ ಭಾವನೆ. ಅಸಂಭಾವನೆ ಎಂದರೆ ವಸಿಷ್ಠರು ಹೇಳಿದ್ದು ಸಂಭವಿಸಲು ಸಾಧ್ಯವಿಲ್ಲವೆಂಬ ಭಾವನೆ. ಈ ಎರಡು ಭಾವನೆಗಳನ್ನು ನಿವಾರಿಸಿಕೊಂಡು ಅನುಭವಕ್ಕೆ ತಂದುಕೊಳ್ಳಬೇಕಾಗಿದೆ. ಅದಕ್ಕಾಗಿ ಪುನಃ ಕೇಳುತ್ತಿದ್ದಾನೆ.

‘ಮುನಿಶ್ರೇಷ್ಠರೇ! ಜಗತ್ತೆಂಬ ದೃಶ್ಯದ ಅತ್ಯಂತ ಅಭಾವದ ಅನುಭವವುಂಟಾಗಲು ಯಾವುದಾದರೂ ಯುಕ್ತಿ ಇದ್ದರೆ ನನಗೆ ಉಪದೇಶಿಸಿ. ನಿಮ್ಮ ಮಾತನ್ನು ನಾನು ಅರ್ಥೈಸಿಕೊಂಡ ಬಗೆಯನ್ನು ಹೇಳುವುದಾದರೆ ? ದ್ರಷ್ಟ ೃ (ನೋಡುವವ) ಮತ್ತು ದೃಶ್ಯ (ನೋಡಲ್ಪಡುವ ವಿಷಯ) ಇವೆರಡೂ ಮೂಲತಃ ಒಂದೇ ಪರಬ್ರಹ್ಮದಿಂದ ಬಂದವು. ಇವೆರಡೂ ಪರಸ್ಪರ ಭೇದವನ್ನು ಕಳೆದುಕೊಂಡು ಪರಬ್ರಹ್ಮದಲ್ಲಿ ಒಂದಾದರೆ ನಿರ್ವಾಣ ಉಂಟಾಗುತ್ತದೆ. ಆದ್ದರಿಂದ ಈ ದೃಶ್ಯಜಗತ್ತು ಪರಮಾರ್ಥತಃ ಇಲ್ಲದ್ದಾಗಿದ್ದು ಅದು ಪರಬ್ರಹ್ಮದ ಒಂದು ತೋರಿಕೆ ಎಂಬುದು ಚೆನ್ನಾಗಿ ಅರಿವಿಗೆ ಬರಲು ಏನು ಉಪಾಯ? ಬ್ರಹ್ಮವೇ ಹೀಗೆ ಎಲ್ಲವೂ ಆಗಿದೆ ಎಂಬುದನ್ನು ತಿಳಿಯಲು ಯಾವ ಯುಕ್ತಿ ಇದೆ? ಈ ತಿಳಿವಳಿಕೆ ಸಿದ್ಧವಾಯಿತೆಂದರೆ ಮತ್ತಿನ್ನೇನೂ ಸಾಧಿಸ ಬೇಕಾದದ್ದು ಉಳಿಯುವುದಿಲ್ಲ.’

ವಸಿಷ್ಠರು ಉತ್ತರಿಸಿದರು – ‘ವಸ್ತುಸ್ಥಿತಿಯಾದರೂ ಬಹುಕಾಲದಿಂದ ತಪ್ಪುಗ್ರಹಿಕೆಗೆ ಒಳಗಾದರೆ, ಆ ತಪ್ಪು ಗ್ರಹಿಕೆಯನ್ನು ಹೋಗಲಾಡಿಸುವುದು ಕಷ್ಟಸಾಧ್ಯ. ವಸ್ತುಸ್ಥಿತಿಯನ್ನು ಮತ್ತೆ ಮತ್ತೆ ಹೆಚ್ಚುಸಲ ಅನುಸಂಧಾನ ಮಾಡುವುದೊಂದೇ ಅದಕ್ಕಿರುವ ರಾಜಮಾರ್ಗ. ವಿಪರೀತಭಾವನೆ, ಅಸಂಭಾವನೆಗಳನ್ನು ಹೋಗಲಾಡಿಸುವ ವೇದಾಂತಾರ್ಥವನ್ನು ಪುನಃ ಪುನಃ ಅನುಸಂಧಾನ ಮಾಡುವುದೇ ಉಪಾಯವಾಗಿದೆ. ಈ ದೃಶ್ಯಪ್ರಪಂಚವು ಪಾರಮಾರ್ಥಿಕ ಸತ್ಯವೆಂಬ ತಪ್ಪು ಗ್ರಹಿಕೆಯು ಬಹುಕಾಲದಿಂದ ರೂಢಿಯಾಗಿಬಿಟ್ಟಿದೆ. ಈ ಮಿಥ್ಯಾಜ್ಞಾನ ಎಂಬ ಮಹಾಮಾರಿಯು ವಸ್ತುಸ್ಥಿತಿಯ ಚಿಂತನೆ ಎಂಬ ಮಂತ್ರದಿಂದಲೇ ಉಪಶಮನಗೊಳ್ಳುತ್ತದೆ. ಈ ದೃಶ್ಯಜಗತ್ತು ಪರಬ್ರಹ್ಮದ ಒಂದು ತೋರಿಕೆ ಎಂಬುದು ವೇದಾಂತಗಳ ತಾತ್ಪರ್ಯ. ಅದೇ ವಸ್ತುಸ್ಥಿತಿ. ಇದನ್ನು ಮತ್ತೆ ಮತ್ತೆ ಚಿಂತಿಸಬೇಕು.’

‘ದೃಶ್ಯಜಗತ್ತು ಪರಮಾರ್ಥ ಸತ್ಯವೆಂಬ ಜ್ಞಾನವನ್ನು ಒಮ್ಮೆಲೇ ನಾಶಪಡಿಸಲು ಸಾಧ್ಯವಿಲ್ಲ. ಏಕೆಂದರೆ ಈ ಜ್ಞಾನದ ಹಿಂದಿರುವ ಸಂಸ್ಕಾರವು ತುಂಬ ಪ್ರಬಲ. ಜಗತ್ತು ಪರಮಾರ್ಥ ಸತ್ಯ ಎಂಬ ಅರಿವು ದೀರ್ಘಕಾಲದಿಂದಲೂ ಇರುವುದರಿಂದ ಅದರಿಂದ ಉಂಟಾದ ಸಂಸ್ಕಾರವು ತುಂಬ ದೃಢವಾಗಿದೆ. ಅರಿವು ಮತ್ತೆ ಮತ್ತೆ ಬಂದಾಗ ಸಂಸ್ಕಾರವು ದೃಢವಾಗುತ್ತದೆ. ಈ ಸಂಸ್ಕಾರವನ್ನು, ಅದಕ್ಕೆ ವಿರುದ್ಧವಾದ ಸಂಸ್ಕಾರವನ್ನು ಅಷ್ಟೇ ಪ್ರಬಲವಾಗಿ ಬೆಳೆಸುವುದರ ಮೂಲಕ ನಾಶಪಡಿಸಬೇಕಾಗುತ್ತದೆ. ಅಂದರೆ ಜಗತ್ತು ಪರಮಾರ್ಥ ಸತ್ಯವಲ್ಲ ಎಂಬ ಅರಿವನ್ನು ದೀರ್ಘಕಾಲದವರೆಗೆ ದೃಢವಾಗಿ ಅಭ್ಯಾಸ ಮಾಡಿದಾಗ ಆ ಸಂಸ್ಕಾರವು ಪ್ರಬಲಗೊಂಡು, ಜಗತ್ತು ಪರಮಾರ್ಥ ಸತ್ಯ ಎಂಬುದು ದುರ್ಬಲಗೊಂಡು ನಾಶಗೊಳ್ಳಬೇಕು. ದೀರ್ಘಕಾಲದಿಂದ ಬಂದ ಸಂಸ್ಕಾರವನ್ನು ಅಷ್ಟೇ ದೃಢ ಸಂಸ್ಕಾರದಿಂದಲೇ ತೊಡೆದುಹಾಕಬೇಕು. ಇದನ್ನೂ ಉದಾಹರಣೆಯ ಮೂಲಕ ವಿವರಿಸಬಹುದು. ಒಂದು ಎತ್ತರದ ಪರ್ವತದ ಕೆಳಗೆ ಸುತ್ತ ಸಮತಟ್ಟಾದ ಭೂಮಿ ಇದೆ ಎಂದಿಟ್ಟುಕೊಳ್ಳಬೇಕು. ಆಗ ಆ ಪರ್ವತವನ್ನು ಎಷ್ಟು ಹೆಜ್ಜೆಗಳಲ್ಲಿ ಹತ್ತಬೇಕಾಗುತ್ತದೆಯೋ, ಅಷ್ಟೇ ಹೆಜ್ಜೆಗಳಲ್ಲಿ ಇಳಿಯಬೇಕಾಗುತ್ತದೆ. ಯಾವ ದಿಕ್ಕಿನಿಂದ ಹತ್ತಿ, ಯಾವ ದಿಕ್ಕಿನಿಂದ ಇಳಿದರೂ ಅಷ್ಟೇ ಹೆಜ್ಜೆಗಳು ಬೇಕಾಗುತ್ತವೆ. ಹಾಗೆಯೇ ಜಗತ್ತು ಪರಮಾರ್ಥ ಸತ್ಯ ಎಂಬ ಸಂಸ್ಕಾರದ ಪರ್ವತವನ್ನು ಹತ್ತಿದವನು ಈಗ ಅದೇ ಅಂತರದಲ್ಲಿ ಇಳಿಯಬೇಕಾಗುತ್ತದೆ. ಆದ್ದರಿಂದಲೇ ಪ್ರಪಂಚವು ಪರಮಾರ್ಥ ಸತ್ಯ ಎಂಬ ಮಿಥ್ಯಾಜ್ಞಾನ ನಾಶವಾಗಲು ದೀರ್ಘಕಾಲ ಬೇಕು. ಜಗತ್ತು ಪರಮಾರ್ಥ ಸತ್ಯವೆಂಬ ಭಾವನೆ ಹೋಗಲಾಡಿಸಲು ಹೆಚ್ಚು ಪ್ರಯತ್ನ ಅಗತ್ಯವಿರುವುದರಿಂದ ಯುಕ್ತಿ, ನ್ಯಾಯ, ಉಪಪತ್ತಿಗಳ ಮೂಲಕ ಚಿಂತಿಸುವ ಅಭ್ಯಾಸ ಮಾಡಿದಾಗ ಈ ಭ್ರಾಂತಿ ಶಮನಗೊಳ್ಳುತ್ತದೆ. ಅದು ಶಮನಗೊಳ್ಳಲು ನಿನಗೊಂದು ಕಥೆ ಹೇಳುತ್ತೇನೆ. ಆ ಕಥೆಯನ್ನು ಗಮನವಿಟ್ಟು ಕೇಳಿದರೆ ಈ ಭ್ರಾಂತಿ ನಿವಾರಿಸುವ ಬೋಧ ಉಂಟಾಗುವುದರಲ್ಲಿ ಸಂದೇಹವಿಲ್ಲ. ಮೊದಲು ಜಗತ್ತಿನ ಪ್ರಳಯವನ್ನು ಕುರಿತಾದ ಆಖ್ಯಾಯಿಕೆ ಹೇಳಿ, ಅನಂತರ ಜಗತ್ತಿನ ಉತ್ಪತ್ತಿ ಕುರಿತಾದ ಪ್ರಕರಣ ಹೇಳಲಿದ್ದೇನೆ.’

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....