More

  ಸರ್ವರ ಸಾಕ್ಷರತೆಯಲ್ಲಿದೆ ದೇಶದ ಪ್ರಗತಿ

  ಅಥಣಿ, ಬೆಳಗಾವಿ: ಸಮಾಜದ ಅತ್ಯಂತ ಕಟ್ಟಕಡೆಯ ಮಗು ಸಹ ಶಿಕ್ಷಣವಂತರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.
  ಪಟ್ಟಣದ ಗುಜರಾತಿ ಸಭಾಭವನದಲ್ಲಿ ರೋಟರಿ ಕ್ಲಬ್, ಇನ್ನರವಿಲ್ ಕ್ಲಬ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಗೌರವ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಜಗತ್ತೇ ಜ್ಞಾನಕ್ಕೆ ತಲೆಬಾಗುತ್ತದೆ. ಜ್ಞಾನವೇ ಜಗತ್ತನ್ನಾಳುತ್ತಿದೆ. ಪ್ರತಿಯೊಬ್ಬರೂ ಸಾಕ್ಷರರಾದರೆ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದರು.

  ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶಾಲೆ ಎಂದರೆ ಬರಿ ಕಲ್ಲು ಮಣ್ಣಿನ ಕಟ್ಟಡವಲ್ಲ. ಭವ್ಯ ಭಾರತದ ಪ್ರಜೆಗಳನ್ನು ರೂಪಿಸುವ ಶ್ರದ್ಧಾ ಕೇಂದ್ರವಾಗಿದೆ. ಮಕ್ಕಳು ಸ್ವಂತ ಆಲೋಚನೆ ಮಾಡುವ ಶಕ್ತಿ ಬೆಳೆಸುವಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ಮಹತ್ತರವಾಗಿದೆ ಎಂದರು.

  ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಬೊಮ್ಮಣವರ, ಹಿರಿಯ ಸದಸ್ಯ ಅರುಣ ಯಲಗುದ್ರಿ ಮಾತನಾಡಿದರು. ಶಿಕ್ಷಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಗೌರವ ನೀಡಲಾಯಿತು. ರೋಟರಿಯ ಹಿರಿಯ ಸದಸ್ಯರಾದ ಪ್ರವೀಣ ಭಾಟೆ, ಭರತ ಸೋಮಯ್ಯ, ದೀಪಕ ಪಾಟೀಲ, ಮೇಘರಾಜ ಪರಮಾರ, ಶ್ರೀಕಾಂತ ಅಥಣಿ, ಸುರೇಶ ಬಳ್ಳೊಳ್ಳಿ, ಬಾಳಪ್ಪ ಬುಕಿಟಗಾರ, ಸುರೇಶ ಪಾಟೀಲ, ಮೋಹನ ಕಾಂಬಳೆ, ಡಾ.ಚಿದಾನಂದ ಮೇತ್ರಿ, ಸುವರ್ಣಾ ಪಾಟೀಲ, ಸೀತಾ ರಜಪೂತ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts