ಸರ್ವರ ಸಮಾನತೆಗೆ ಮೀಸಲಾತಿ ಅಗತ್ಯ

Latest News

ಗವಿಶ್ರೀಗಳ ಸದ್ಭಾವನಾ ಪಾದಯಾತ್ರೆ, ಸ್ವಚ್ಛತೆಗೆ ಭಕ್ತರ ಹೆಚ್ಚಿನ ಆದ್ಯತೆ

ಕಾರಟಗಿ: ಹತ್ತು ದಿನಗಳ ಸದ್ಭಾವನಾ ಪಾದಯಾತ್ರೆ, ಆಧ್ಯಾತ್ಮಿಕ ಪ್ರವಚನ ಕೈಗೊಂಡಿರುವ ಕೊಪ್ಪಳದ ಗವಿಶ್ರೀ ಆಗಮನದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳ ಬೀದಿ ಸಿಂಗಾರಗೊಳ್ಳುತ್ತಿದ್ದು, ಜನ...

ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಕಾರಣ – ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಡಾ.ಶೇಖರಗೌಡ ಮಾಲಿಪಾಟೀಲ್ ಶ್ಲಾಘನೆ

ತಾವರಗೇರಾ: ರೈತರ ಭಾಗವಹಿಸುವಿಕೆ, ಆರ್ಥಿಕ ಅಭಿವೃದ್ಧಿ ಜತೆಗೆ ಕೃಷಿಯಲ್ಲಿ ಯಶಸ್ಸು ಪಡೆಯುವಲ್ಲಿ ಸಹಕಾರ ಕ್ಷೇತ್ರ ಕಾರಣವಾಗಿದೆ ಎಂದು ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ...

ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆಗೆ ಬೇಸತ್ತು ಬಿಜೆಪಿ ಸೇರಿದೆ- ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್

ರಾಯಚೂರು: ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆ, ಹಿರಿತನಕ್ಕೆ ಸಿಗದ ಬೆಲೆ ಮತ್ತು ಹೈಕಮಾಂಡ್ ಧೋರಣೆಯಿಂದ ಬೇಸರವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ವಿನಾ, ಸಮ್ಮಿಶ್ರ...

ಶತಮಾನದಷ್ಟು ಹಳೆಯ ಚರ್ಚ್​ ಬೆಂಕಿಗೆ ಆಹುತಿ; ಜ್ವಾಲೆ ಕಾಣಿಸುತ್ತಲೇ ಒಳಗೆ ಹೋದ ವೃದ್ಧ ದಂಪತಿ ಸಾವು..ಬೆಂಕಿ ನೋಡಿ ಕೂಡ ಅವರು ಒಳಹೋಗಿದ್ದೇಕೆ ಗೊತ್ತಾ?

ಶಿಲ್ಲಾಂಗ್​: ಶತಮಾನದಷ್ಟು ಹಳೆಯ ಚರ್ಚ್​ ಬೆಂಕಿಗೆ ಆಹುತಿಯಾಗಿ, ವೃದ್ಧ ದಂಪತಿ ಸಜೀವ ದಹನಗೊಂಡ ದುರ್ಘಟನೆ ಮೇಘಾಲಯದ ಶಿಲ್ಲಾಂಗ್​ನಲ್ಲಿ ಇಂದು ಮುಂಜಾನೆ ನಡೆದಿದೆ. ಶಿಲ್ಲಾಂಗ್​ನ ಕ್ವಾಲಪಟ್ಟಿ ಪ್ರದೇಶದಲ್ಲಿ 1902ರಲ್ಲಿ...

ಕಾರ್ಯಕರ್ತರ ಭಾವನೆ ಅರಿತು ಸಂಸದ ಸಂಗಣ್ಣ ಹೇಳಿಕೆ ನೀಡಲಿ- ಬಿಜೆಪಿ ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ

ಸಿಂಧನೂರು: ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರಿದ್ದು, ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಆರ್.ಬಸನಗೌಡರು...

ವಿಜಯವಾಣಿ ಸುದ್ದಿಜಾಲ ಕಾರವಾರ: ಮೀಸಲಾತಿ ಪಡೆದು ಜೀವನಮಟ್ಟ ಸುಧಾರಿಸಿಕೊಂಡವರು ವಿಶಾಲ ಹೃದಯಿಗಳಾಗಿ ತಮ್ಮದೇ ವರ್ಗದ ಇತರರಿಗೆ ಸೌಲಭ್ಯ ಸಿಗುವ ಅವಕಾಶ ಮಾಡಿಕೊಡಬೇಕು ಎಂದು ಚಿತ್ರದುರ್ಗ ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಸಹಮತ ವೇದಿಕೆಯಿಂದ ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳೊಟ್ಟಿಗೆ ಅವರು ಸಂವಾದ ನಡೆಸಿದರು.

ಸಾಮಾಜಿಕ, ಆರ್ಥಿಕವಾಗಿ ಕೆಳಸ್ತರದಲ್ಲಿರುವ ಇನ್ನೂ ಹಲವು ಸಮುದಾಯಗಳಿವೆ. ಅಸ್ಪೃಶ್ಯತೆ, ಮೂಢ ನಂಬಿಕೆಗಳಿಂದ ಬಳಲುತ್ತಿವೆ. ಎಲ್ಲ ಸಮುದಾಯದವರೂ ಸಮನಾಗುವವರೆಗೂ ಮೀಸಲಾತಿ ಅಗತ್ಯವಿದೆ. ವೇದ ಹಾಗೂ ವಚನ ಎರಡರಲ್ಲೂ ಜ್ಞಾನವಿದೆ. ಆದರೆ, ವೇದವನ್ನು ಬಳಸಿಕೊಂಡು ಮೌಢ್ಯ ಬಿತ್ತುವ ಕಾರ್ಯವಾಗಿದ್ದ ಸಂದರ್ಭದಲ್ಲಿ ಅದರಲ್ಲಿರುವ ಅಂಶಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳ ಮೂಲಕ ತಿಳಿಸಿದವರು ಆಚರಣೆಗೆ ತಂದವರು ಶರಣರು. ಇದರಿಂದ ವಚನಗಳು ಶ್ರೇಷ್ಠ. ಬಸವ ತತ್ವವನ್ನು ಓದಿ ಅಳವಡಿಸಿಕೊಂಡರೆ ಯಾವುದೇ ಧರ್ಮದ ಹಂಗಿನ ಅವಶ್ಯಕತೆಯಿಲ್ಲ ಎಂದರು.

ವ್ಯಕ್ತಿ ಸರಿಯಾದರೆ ದೇಶ, ಜಗತ್ತು ಸರಿಹೋಗುವುದು. ಎಲ್ಲ ಕಾಲದಲ್ಲೂ ಅಸಮಾನತೆ ಇದ್ದೇ ಇದೆ ಆದರೆ, ಸಮಾಜ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಒಂದಾಗಬೇಕು. ಜಗತ್ತು ಸರಿಯಿಲ್ಲ, ನನ್ನೊಬ್ಬನಿಂದ ಏನಾಗುತ್ತದೆ ಎಂದು ಕೈಕಟ್ಟಿ ಕೂರಬೇಕಿಲ್ಲ. ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು ಬಸವಣ್ಣ ಏಕಾಂಗಿಯಾಗಿ ತನ್ನ ಮನೆಯಿಂದಲೇ ಹೋರಾಟ ಪ್ರಾರಂಭಿಸಿದರು. ಇದೇ ಶಕ್ತಿ ಮುಂದೆ ಅವರನ್ನು ಮಹಾತ್ಮರನ್ನಾಗಿಸಿತು. ಕ್ರೌರ್ಯಕ್ಕೆ ಬದಲಾಗಿ ಕರುಣೆ ತೋರಿದಲ್ಲಿ ಸಂಘರ್ಷಗಳು ತಪ್ಪಿ ಅಸಮಾನತೆ ನಾಶವಾಗುವುದು. ಇವುಗಳ ಬಗ್ಗೆ ಅರಿವು ಮೂಡಿಸುವುದೇ ಮತ್ತೆ ಕಲ್ಯಾಣ ಅಭಿಯಾನದ ಉದ್ದೇಶ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಜಗತ್ತಿಗೆ ಮೊದಲು ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ಅನುಭವ ಮಂಟಪ. ಆದರೆ, ನಮ್ಮಲ್ಲಿಯೇ ಇಂದು ಜಾತಿ ಪದ್ಧತಿ ಮೊದಲಿಗಿಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಅಂಬೇಡ್ಕರ್ ಅವರ ಸದುದ್ದೇಶ ಇಂದು ತನ್ನ ಆಶಯವನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಬ್ಬರೂ ದುಡಿದು ತಿನ್ನಿಬೇಕೆಂಬ ಬಸವಣ್ಣನ ಕಾಯಕ ಸಿದ್ಧಾಂತಕ್ಕೆ ವಿರುದ್ಧವಾಗಿ ಇಂದಿನ ಸರ್ಕಾರಗಳು ಅನೇಕ ಭಾಗ್ಯಗಳನ್ನು ಕೊಡುವ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದರು.

ಉಪನ್ಯಾಸ ನೀಡಿದ ಹೇಮಾ ಪಟ್ಟಣಶೆಟ್ಟಿ, ಹೆಣ್ಣಿನ ಭಾವ ಭಿತ್ತಿಯನ್ನು ಅಭಿವ್ಯಕ್ತಿಗೊಳಿಸಿದವರು ವಚನಕಾರ್ತಿಯರು ಎಂದರು.

ನಾಗರಾಜ ಹರಪನಹಳ್ಳಿ ಆಶಯ ನುಡಿಗಳನ್ನು ಆಡಿದರು. ಡಾ.ಆರ್.ಜಿ. ಗುಂದಿ, ವಿಜಯಾ ನಾಯ್ಕ, ಸುಮಂಗಲಾ ಅಂಗಡಿ, ಫಾದರ್ ಸ್ಟ್ಯಾನಿ ಪಿಂಟೊ, ಖಲಿಲುಲ್ಲಾ ಶೇಖ್, ಪ್ರಕಾಶ ನಾಯ್ಕ ವೇದಿಕೆಯಲ್ಲಿದ್ದರು. ಪಿಯು ಕಾಲೇಜ್​ನಿಂದ ರಂಗಮಂದಿರವರೆಗೆ ವಚನಕಾರರ ಮೂರ್ತಿಗಳಿರುವ ಸ್ತಬ್ಧಚಿತ್ರದೊಟ್ಟಿಗೆ ಸಾಮರಸ್ಯದ ನಡಿಗೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಭಾಷಣ ವಿಜೇತರಾದ ನಮನ್ ಎಸ್., ಶ್ವೇತಾ ರಾಯ್ಕರ್(ಮೊದಲ), ಚಂದ್ರಪ್ರಭಾ ಕೊಡಿಯಾ(ಎರಡನೆಯ)ನಂದಿನಿ ಶೆಟ್ಟಿ, ದೀಪಾ ನಾಯಕ್(ಮೂರನೆಯ) ಅವರಿಗೆ ಬಹುಮಾನ ವಿತರಿಸಲಾಯಿತು.

ಗಮನ ಸೆಳೆದ ಪ್ರಶ್ನೆಗಳು: ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು ಗಮನ ಸೆಳೆದವು. ಪಂಡಿತಾರಾಧ್ಯ ಸ್ವಾಮಿಗಳು ಅಷ್ಟೇ ಸಮಾಧಾನದಿಂದ ಎಲ್ಲ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಿದರು. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಏಕೆ ಬೇಕು? ಕೆಲವರಿಗಿರುವ ವಿಶೇಷ ಸೌಲಭ್ಯಗಳು ಇನ್ನು ಕೆಲವರಿಗಿಲ್ಲ ಈ ತಾರತಮ್ಯವೇಕೆ? ಮೂರ್ತಿ ಪೂಜೆ ತಿರಸ್ಕರಿಸಿದ ಬಸವಣ್ಣನನ್ನೇ ಮೂರ್ತಿ ಮಾಡಿದ್ದು ಎಷ್ಟು ಸರಿ..? 12 ನೇ ಶತಮಾನದಿಂದ ಇಲ್ಲಿಯವರೆಗೂ ಜಾತಿ ಪದ್ಧತಿಯನ್ನೂ ಏಕೆ ತೊಲಗಿಸಲಾಗಲಿಲ್ಲ. ಲಿಂಗಾಯತ, ವೀರಶೈವ ಧರ್ಮ ಒಡೆ ಯಲು ಹೊರಟಿರುವುದೇಕೆ..? ಮುಂತಾದ ಹಲವು ಪ್ರಶ್ನೆಗಳು ಗಮನ ಸೆಳೆದವು.

- Advertisement -

Stay connected

278,517FansLike
570FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....