ವೈಚಾರಿಕ ಮನೋಭಾವದಿಂದ ಎಲ್ಲರೂ ಕೆಲಸ ಮಾಡಿದಾಗ ಮಾತ್ರ ಧರ್ಮ ರಕ್ಷಣೆ ಸಾಧ್ಯ

ಕೆಂಭಾವಿ: ಪ್ರತಿಯೊಬ್ಬರೂ ತಮ್ಮ ಧರ್ಮ ರಕ್ಷಿಸಿದಾಗ ಮಾತ್ರ ಅದು ನಮ್ಮನ್ನು ರಕ್ಷಿಸುತ್ತದೆ. ವೀರಶೈವ ಧರ್ಮ ಸನಾತನ ಧರ್ಮವಾಗಿದ್ದು, ರೇಣುಕಾಚಾರ್ಯರು ಆಗಮ ಶಾಸ್ತ್ರದ ಮೂಲಕ ಈ ಧರ್ಮದ ಅಡಿಪಾಯ ಹಾಕಿದರು ಎಂದು ಸಾಹಿತಿ ಐ.ಬಿ. ಹಿರೇಮಠ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀರೇಣುಕಾಚಾರ್ಯ ಜಯಂತಿ ಹಾಗೂ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜಂಗಮ ಸಮಾಜದ ಪ್ರತಿಯೊಬ್ಬರೂ ಮೊದಲು ಲಿಂಗ ಧರಿಸಬೇಕು. ಆಗಮ ಶಾಸ್ತ್ರ ಹೇಳಿದಂತಹ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ನಂತರ ಇನ್ನೊಬ್ಬರಿಗೆ ಲಿಂಗ ಧಾರಣೆ ಮಹತ್ವ ಕುರಿತು ತಿಳಿ ಹೇಳಬೇಕು ಎಂದರು.

ಪಂಚ ಪೀಠಾಧೀಶ್ವರರ ಸಮ್ಮುಖದಲ್ಲಿ ವೀರಶೈವ ಧರ್ಮ ದೇಶದೆಲ್ಲೆಡೆ ಛಾಪು ಮೂಡಿಸುತ್ತಿದೆ. ವೈಚಾರಿಕ ಮನೋಭಾವದಿಂದ ಎಲ್ಲರೂ ಕೆಲಸ ಮಾಡಿದಾಗ ಮಾತ್ರ ಧರ್ಮ ರಕ್ಷಣೆ ಸಾಧ್ಯ. ಭಕ್ತರಲ್ಲಿ ಧರ್ಮ ಜಾಗೃತಿ ಕುರಿತು ಹಿರೇಮಠ ಸಂಸ್ಥಾನ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಶಿಕ್ಷಕ ಸಾಹಿತಿ ಚನ್ನಬಸಯ್ಯ ನವಣಿ ಮಾತನಾಡಿ, ಜನನ, ಮರಣ ರಹಿತರಾದ ಶ್ರೀರೇಣುಕಾಚಾರ್ಯರು ಜಗತ್ತಿಗೆ ಅದ್ಭುತ ಕೊಡುಗೆ ನೀಡಿದ್ದು, ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಗನೂರ ಸೂಗೂರೇಶ್ವರ ಮಠದ ಶ್ರೀಸೂಗೂರೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು, ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಕರಡಕಲ್ ಕೋರಿಸಿದ್ಧೇಶ್ವರ ಮಠದ ಶಾಂತ ರುದ್ರಮುನಿ ಸ್ವಾಮೀಜಿ, ಮುದನೂರ ಕಂಠಿ ಮಠದ ಶ್ರೀಸಿದ್ಧಚನ್ನ ಮಲ್ಲಿಕಾಜರ್ುನ ಸ್ವಾಮೀಜಿ, ಚಿಕ್ಕಮಠದ ಶ್ರೀ ಚನ್ನಯ್ಯ ಸ್ವಾಮೀಜಿ ಇತರರಿದ್ದರು. ಶರಣಯ್ಯ ಹಿರೇಮಠ ನಿರೂಪಣೆ ಮಾಡಿದರು, ರಾಜಶೇಖರ ಹಿರೇಮಠ ಸ್ವಾಗತಿಸಿದರು. ರೇವಣಸಿದ್ದಯ್ಯ ಮಠ ವಂದಿಸಿದರು. ಶರಣಕುಮಾರ ಯಾಳಗಿ ಹಾಗೂ ಕಾಳಪ್ಪ ವಿಶ್ವಕರ್ಮ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *