ಸರ್ವಜ್ಞರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ

ವಿಜಯವಾಣಿ ಸುದ್ದಿಜಾಲ ಕಲಬುರಗಿ
12ನೇ ಶತಮಾನದಲ್ಲಿ ಬಸವಣ್ಣನವರ ವಚನಗಳು ಎಷ್ಟು ಶ್ರೇಷ್ಠವೋ ಅದೇ ರೀತಿ 17ನೇ ಶತಮಾನದಲ್ಲಿ ಮಹಾ ಮಾನವತಾವಾದಿ ಕನ್ನಡದ ಶ್ರೇಷ್ಠ ಕವಿ ಸರ್ವಜ್ಞ ವಚನಗಳು ಶ್ರೇಷ್ಠವಾಗಿವೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಾಲಿಕೆ ಸಹಯೋಗದಡಿ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಕುಂಬಾರ ಸಮಾಜ ಸರ್ಕಾರದ ಸೌಲತ್ತುಗಳಿಂದ ವಂಚಿತವಾಗಿದೆ. ಸಮಾಜದವರು ಒಳ-ಹೊರ ಪಂಗಡ ಬಿಟ್ಟು ಎಲ್ಲರೂ ಸಮಾನರಾಗಿ ಬದುಕಿದಾಗಲೇ ಮುಂದೆ ಬರಲು ಸಾಧ್ಯ ಎಂದರು.

ಕವಿ ಸರ್ವಜ್ಞ ತಮ್ಮ ವಚನದಲ್ಲಿ ತುಂಬ ಸರಳವಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಕೇವಲ ಮೂರು ಸಾಲಿನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಎಲ್ಲ ವಿಷಯಗಳನ್ನು ತಿಳಿಸಿದ್ದಾರೆ. ಸರ್ವಜ್ಞ ತತ್ವದಂತೆ ಕುಂಬಾರ ಜನಾಂಗ ಯಾರಿಗೂ ತೊಂದರೆ ನೀಡದೆ ಎಲ್ಲರೊಳಗೆ ಒಂದಾಗಿ ಬದುಕಬೇಕು ಎಂದು ಹೇಳಿದರು.

ಶಾಸಕ ಎಂ.ವೈ. ಪಾಟೀಲ್ ಮತ್ತು ಎಂಎಲ್ಸಿ ಶರಣಪ್ಪ ಮಟ್ಟೂರ ಮಾತನಾಡಿದರು. ಕಲಬುರಗಿ ಕುಂಬಾರ ಸಮಾಜದ ಅಧ್ಯಕ್ಷ ಶಿವಶರಣಪ್ಪ ಕುಂಬಾರ ಸುಲೇಪೇಟ, ಕುಂಬಾರ ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಹರೀಶ ಕುಂಬಾರ, ಶಿಷ್ಟಾಚಾರ ತಹಸೀಲ್ದಾರ್ ಪ್ರಕಾಶ ಚಿಂಚೋಳಿಕರ್, ಆಹಾರ ಇಲಾಖೆ ಉಪನಿದರ್ೇಶಕ ರಾಮೇಶ್ವರಪ್ಪ, ಗಣ್ಯರಾದ ಭೀಮಾಶಂಕರ ಹೊನ್ನಕಿರಣಗಿ, ಶರಣು ಕುಂಬಾರ, ವಿಠ್ಠಲ್ ಕುಂಬಾರ, ತಿಪ್ಪಣ್ಣ ಕುಂಬಾರ, ಶ್ರೀನಿವಾಸ ಕುಂಬಾರ, ನಿಂಗಣ್ಣ, ರಾಜು ಕುಂಬಾರ, ಪ್ರಭು ಕುಂಬಾರ ಇತರರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸ್ವಾಗತಿಸಿದರು. ಎಸ್.ಎಂ. ಭಕ್ತಕುಂಬಾರ ನಿರೂಪಣೆ ಮಾಡಿ ವಂದಿಸಿದರು. ಇದಕ್ಕೂ ಮುನ್ನ ಸರ್ವಜ್ಞ ಭಾವಚಿತ್ರದ ಭವ್ಯ ಮೆರವಣಿಗೆ ಜಾನಪದ ಕಲಾ ತಂಡಗಳೊಂದಿಗೆ ಸೂಪರ್ ಮಾರ್ಕೆಟ್ನ ಜನತಾ ಬಜಾರ್ನಿಂದ ಜಗತ್ ವೃತ್ತದ ಮೂಲಕ ಪಂಡಿತ ರಂಗಮಂದಿರಕ್ಕೆ ತಲುಪಿತು.

ಜಾಗತೀಕರಣದಿಂದಾಗಿ ಕಂಬಾರರ ಕುಲಕಸಬು ನಾಶವಾಗುತ್ತಿದೆ. ನಾಗರಿಕ ಸಮಾಜದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಕುಂಬಾರರ ಕುಲಕಸಬು ನಶಿಸುತ್ತಿರುವುದೇ ಸಮಾಜ ಬಡವಾಗಲು ಕಾರಣವಾಗಿದೆ. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು, ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು.
| ಕುಂ.ವೀರಭದ್ರಪ್ಪ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ