ಸರ್ಕಾರಿ ಸೌಲಭ್ಯ ಮರೀಚಿಕೆ

ಶಿರಹಟ್ಟಿ: ಕಾರ್ವಿುಕರ ಕಲ್ಯಾಣದ ಘನ ಉದ್ದೇಶದಿಂದ ಸ್ಥಾಪಿಸಲಾದ ಕಾರ್ವಿುಕ ಇಲಾಖೆ ಕಚೇರಿ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಪಟ್ಟಣದ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ವಿುಕ ಇಲಾಖೆ ಕಚೇರಿಯಲ್ಲಿ ಅಧಿಕಾರಿ ಇರುವುದೇ ತುಂಬ ಅಪರೂಪ. ಅಲ್ಲದೆ, ಸಿಬ್ಬಂದಿ ಕೊರತೆಯಿಂದ ಕಾರ್ವಿುಕರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ತಾಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಾರ್ವಿುಕರು ಗುರುತಿನ ಚೀಟಿ ಹೊಂದಿದ್ದಾರೆ. ಚೀಟಿ ಹೊಂದಿದ 60 ಮೇಲ್ಪಟ್ಟ ಬೆರಳೆಣಿಕೆಯಷ್ಟು ಜನರಿಗೆ ಮಾಸಿಕ ಪಿಂಚಣಿ ಸಿಗುತ್ತಿದೆ. ಇನ್ನುಳಿದಂತೆ ಗೃಹ ಭಾಗ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಹಾಗೂ ವೈದ್ಯಕೀಯ ಸಹಾಯಧನ, ಪ್ರತಿಭಾವಂತ ಮಕ್ಕಳಿಗೆ ಪೋ›ತ್ಸಾಹ ಧನ, ಅಪಘಾತ ಪರಿಹಾರ, ಮದುವೆ ಸಹಾಯಧನ ಇತ್ಯಾದಿ ಹಲವಾರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಕಾರ್ವಿುಕರು ಹರಸಾಹಸ ಪಡಬೇಕಾಗಿದೆ.

ಈ ಬಗ್ಗೆ ದುಡಿಮೆ ಬಿಟ್ಟು ಕಾರ್ವಿುಕ ಇಲಾಖೆ ಕಚೇರಿಗೆ ಬಂದರೆ ಅಧಿಕಾರಿಯ ಮುಖ ದರ್ಶನವೇ ಆಗುವುದಿಲ್ಲ. ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುವ ಒಬ್ಬ ಸಿಬ್ಬಂದಿ ವಾರದಲ್ಲಿ ಮೂರ್ನಾಲ್ಕು ದಿನ ಕಚೇರಿಗೆ ಬರುತ್ತಾನೆ. ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಒಂದು ವರ್ಷ, ಎರಡು ವರ್ಷ ಕಳೆದರೂ ಸರಿಯಾಗಿ ಸ್ಪಂದಿಸಿ ಕೆಲಸ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಛಬ್ಬಿ ಗ್ರಾಮದ ಕಟ್ಟಡ ಕಾರ್ವಿುಕ ಬಸವರಾಜ ನರಗುಂದ.

ಸಿಗದ ಮಾಹಿತಿ: ಕಚೇರಿಯಲ್ಲಿ ಕಾರ್ವಿುಕ ನಿರೀಕ್ಷಕರು ಸಿಗುವುದಿಲ್ಲ. ಬಡ ಕಾರ್ವಿುಕರು ಸರ್ಕಾರದ ಸೌಲಭ್ಯ ಪಡೆಯಲು ನಿತ್ಯವೂ ಕಚೇರಿಗೆ ಆಗಮಿಸಿ ಗಂಟೆಗಟ್ಟಲೇ ಕಾದು ಸುಸ್ತಾಗಿ ಮನೆಗೆ ಮರಳುತ್ತಿದ್ದಾರೆ. ದೂರವಾಣಿ ಮೂಲಕ ನಿರೀಕ್ಷಕರನ್ನು ಸಂರ್ಪಸಿದರೆ ‘ನನಗೆ 2-3 ತಾಲೂಕಿನ ಜವಾಬ್ದಾರಿ ಇದೆ. ನಾನೇನು ಮಾಡಲಿ ಹೇಳಿ? ಕಚೇರಿಯಲ್ಲಿ ಯಾರಾದರಿದ್ದರೆ ಅರ್ಜಿ ಕೊಟ್ಟು ಹೋಗಿ’ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ.

ಇಒ ಅಸಮಾಧಾನ: ಕಾರ್ವಿುಕರ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ತಾ.ಪಂ. ಇಒ. ಡಾ. ಎನ್.ಎಚ್. ಓಲೇಕಾರ ಪಟ್ಟಣದ ಕಾರ್ವಿುಕ ಇಲಾಖೆ ಕಚೇರಿಗೆ ಭೇಟಿ ನೀಡಿದಾಗ ಬೀಗ ಜಡಿದ ದೃಶ್ಯ ಕಂಡುಬಂತು. ಈ ವೇಳೆ ಉಪಸ್ಥಿತರಿದ್ದ ಕಾರ್ವಿುಕರು ಅಧಿಕಾರಿಗಳ ವರ್ತನೆ ಬಗ್ಗೆ ದೂರಿದರು. ‘ಒಂದು ವರ್ಷದಿಂದ ನನಗೆ ಕಾರ್ವಿುಕ ಅಧಿಕಾರಿಯ ಮುಖದರ್ಶನವೇ ಆಗಿಲ್ಲ. ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ ಏನಾದರೊಂದು ನೆಪಹೇಳಿ ಜಾರಿಕೊಳ್ಳುತ್ತಾರೆ. ಪದೇ ಪದೆ ಕಾರ್ವಿುಕರ ದೂರು ಕೇಳಿ ಸಾಕಾಗಿ ಹೋಗಿದೆ. ಶಾಸಕ ಲಮಾಣಿ ಅವರೇ ಖುದ್ದಾಗಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗೆ ಶಿಫಾರಸು ಮಾಡಿದ್ದು. ಈ ಬಗ್ಗೆ ಜಿ.ಪಂ. ಸಿಇಒ ಅವರಿಗೆ ವರದಿ ಸಲ್ಲಿಸಲಾಗುತ್ತದೆ’ ಎಂದು ಇಒ. ಡಾ. ಎನ್.ಎಚ್. ಓಲೇಕಾರ ತಿಳಿಸಿದರು.

ಖಾಸಗಿ ಕಟ್ಟಡದಲ್ಲಿ ಅದರಲ್ಲೂ ಎರಡನೇ ಮಹಡಿ ಮೇಲೆ ಕಚೇರಿ ಇರುವುದರಿಂದ ವಯಸ್ಸಾದ ಕಾರ್ವಿುಕರು ಮೇಲೆ ಹತ್ತಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಾ.ಪಂ. ಆಡಳಿತ ಕಚೇರಿ ಕಟ್ಟಡದಲ್ಲಿ ಬೇಕಾದಷ್ಟು ಖಾಲಿ ಕೊಠಡಿಗಳಿದ್ದು ಕಾರ್ವಿುಕ ಇಲಾಖೆ ಕಚೇರಿ ಅಲ್ಲಿಗೆ ಸ್ಥಳಾಂತರಿಸಲು ಸೂಚನೆ ನೀಡಿ ಶೀಘ್ರ ಕ್ರಮ ಕೈಗೊಳ್ಳುತ್ತೇನೆ. ಇದರಿಂದ ಕಾರ್ವಿುಕರಿಗೆ ಅನುಕೂಲವಾಗುವುದರ ಜತೆಗೆ ಅಧಿಕಾರಿಯ ಕಾರ್ಯವೈಖರಿ ಅರಿಯಲು ಅನುಕೂಲವಾಗಲಿದೆ.

| ಡಾ. ಎನ್.ಎಚ್. ಓಲೇಕಾರ, ತಾ.ಪಂ. ಇಒ

ಗದಗ, ಮುಂಡರಗಿ, ಶಿರಹಟ್ಟಿ ಈ ಮೂರು ತಾಲೂಕಿನ ಜವಾಬ್ದಾರಿ ನೀಡಿದ್ದರಿಂದ ನಾನೇನು ಮಾಡಲು ಸಾಧ್ಯ ಹೇಳಿ? ಸಮಯ ಸಿಕ್ಕಾಗ ಕಚೇರಿಗೆ ಬಂದು ಹೋಗುತ್ತೇನೆ. ಸಿಬ್ಬಂದಿ ಕೊರತೆ ಇದೆ, ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿ ಕಚೇರಿಗೆ ಬರುತ್ತಾನೆ.

| ಶಮೀಮ್ ತಾಲೂಕು ಕಾರ್ವಿುಕ ನಿರೀಕ್ಷಕರು

ಕಚೇರಿಗೆ ಕಾಯಂ ನಿರೀಕ್ಷಕರನ್ನು ನೇಮಿಸಿ ಕಾರ್ವಿುಕರಿಗೆ ಸರ್ಕಾರದ ಸೌಲಭ್ಯ ದೊರಕಿದರೆ ಮಾತ್ರ ಅವರ ಬದುಕು ಹಸನಾಗಲು ಸಾಧ್ಯ.

| ರಿಯಾಜ್ ಢಾಲಾಯತ್, ಅಧ್ಯಕ್ಷ, ತಾಲೂಕು ಕಟ್ಟಡ ಕಾರ್ವಿುಕರ ಸಂಘ

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…