ಬಾಗಲಕೋಟೆ: ಪ್ರಸಕ್ತ ಬಜೆಟ್‌ನಲ್ಲಿ ೨೦೧೫-೨೦೧೬ ರಲ್ಲಿ ಘೋಷಣೆ ಮಾಡಿರುವ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಬೇಕು, ಮುಳಗಡೆಯಾಗಿರುವ ಬಾಗಲಕೋಟೆ ನಗರದ ವ್ಯಾಪಾರ ಉತ್ತೇಜನಕ್ಕೆ ೨೦೦ ಎಕರೇ ಮೀಸಲಿರಿದ್ದು, ವಿಶಾಲವಾದ ವಾಣಿಜ್ಯ ಸಂಕಿರ್ಣ ನಿರ್ಮಿಸಲು ೨೦೦ ಕೋಟಿ ರೂ. ಮಂಜೂರು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಮನವಿ ಮಾಡಿದ್ದಾರೆ.
ಕುರಿತು ಬುಧವಾರ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಎಚ್.ವೈ.ಮೇಟಿ ಅವರು ಪ್ರಮುಖ ಬೇಡಿಕೆಗಳ ಪಟ್ಟಿಮಾಡಿಕೊಂಡು ಪತ್ಯೇಕ ಪತ್ರಗಳ ಮೂಲಕ ವಿನಂತಿ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಯಾವುದೇ ಜಿಲ್ಲೆಯಲ್ಲಿ ಹೃದಯ ರೋಗಕ್ಕೆ ಆಸ್ಪತ್ರೆ ಇಲ್ಲ. ಕೂಲಿ ಕಾರ್ಮಿಕರು, ಬಡ ಕುಟುಂಬದ ಜನರಿಗೆ ಹೃದಯ ರೋಗ ತಪಾಸಣೆ, ಶಸö ಚಿಕಿತ್ಸೆ ಕಠಿಣವಾಗಿದೆ. ೫೦೦ ಕಿ.ಮೀ ಸಂಚರಿಸಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಪ್ರಸಕ್ತ ಬಜೆಟ್‌ನಲ್ಲಿ ಬಾಗಲಕೋಟೆ ನಗರಕ್ಕೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಘಟಕವನ್ನು ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
೨೦೧೫-೨೦೧೬ ಸಾಲಿನಲ್ಲಿ ನಮ್ಮ ಸರ್ಕಾರವಿದ್ದಾಗ ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಲಾಗಿತ್ತು, ೨೦೧೮ ರಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬರಲಿಲ್ಲ. ನಂತರ ಬಂದ ಸರ್ಕಾರಗಳು ಬಿಡಿಗಾಸು ಅನುದಾನ ನೀಡಿಲ್ಲ. ಇದರಿಂದ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜು ಕನಸಾಗಿಯೇ ಉಳಿದಿದೆ. ಕಳೆದ ಚುನಾವಣೆ ವೇಳೆ ತಾವುಗಳು ನಾನೇ ಸರ್ಕಾರಿ ಮಡಿಕಲ್ ಕಾಲೇಜು ಮಂಜೂರು ಮಾಡಿ ಉದ್ಘಾಟನೆ ಮಾಡುತ್ತೇನೆ ಅಂತ ಭರವಸೆ ನೀಡಿದ್ದೀರಿ, ಪ್ರಸಕ್ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಿ ಮಂಜೂರು ಮಾಡಬೇಕು. ಇದರಿಂದ ಬಡವರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು, ಸಾರ್ವಜನಿಕರಿಗೆ ಚಿಕಿತ್ಸೆ ಪಡೆಯಲು ಅನೂಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಮುಳಗಡೆಯಾಗಿರುವ ಬಾಗಲಕೋಟೆ ನಗರದ ವ್ಯಾಪಾರವು ಸಂಪೂರ್ಣ ಕುಸಿದು ಹೋಗಿದೆ. ನಗರವು ಮೂರು ಭಾಗಗಳಾಗಿ ವಿಂಗಡನೆಯಾಗಿದೆ. ಆದ್ದರಿಂದ ವ್ಯಾಪಾರ ವಹಿವಾಟು ಉತ್ತೇಜನಗೊಳಿಸಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಿಂದ ನವನಗರ ಯೂನಿಟ್ -೩ ರಲ್ಲಿ ಎರಡು ನೂರು ಎಕರೇ ಜಮೀನು ಕಾಯ್ದಿರಿಸಲಾಗಿದೆ. ಹೀಗಾಗಿ ಬೃಹತ್ ವಾಣಿಜ್ಯ ಸಂಕಿರ್ಣ ನಿರ್ಮಿಸಲು ಎರಡು ಕೋಟಿ ರೂ. ಮೀಸಲಿಟ್ಟು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.