ಸರ್ಕಾರಿ ಜಯಂತಿ ಜನ ಪ್ರತಿನಿಧಿಗಳನ್ನು ಕಡ್ಡಾಯಗೊಳಿಸಿ

blank

ಬಾಗಲಕೋಟೆ: ಶರಣರು, ಮಹನೀಯರ ಆದರ್ಶಗಳನ್ನು ನೆನಪಿಸುವ ನಿಟ್ಟಿನಲ್ಲಿ ಸರ್ಕಾರವು ಜಯಂತಿ ಆಚರಣೆ ಹಮ್ಮಿಕೊಂಡಿದೆ. ಆದರೇ ಜನ ಪ್ರತಿನಿಧಿಗಳೇ ಗೈರು ಉಳಿದು ಮಹನೀಯರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ಜಿಲ್ಲಾ ಸಂಚಾಲಕ ಹನುಮಂತ ಚಿಮ್ಮಲಗಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,ನಿನ್ನೆ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲೆಯ ಜನ ಪ್ರತಿನಿಧಿಗಳು ಆಗಮಿಸಲಿಲ್ಲ. ಪ್ರೋಟೋಕಾಲ ಪ್ರಕಾರ ಸಚಿವರು, ಶಾಸಕರು, ವಿ.ಪ ಸದಸ್ಯರ ಹೆಸರು ಹಾಕಿ ಆಮಂತ್ರಣ ನೀಡಿದರು ಕ್ಯಾರೆ ಎಂದಿಲ್ಲ. ಚುನಾವಣೆ ಭಾಷಣದಲ್ಲಿ ಮಹನೀಯರನ್ನು ಹೆಸರು ಹೇಳಿ ವೋಟ ಬ್ಯಾಂಕ್ ಆಗಿ ಉಪಯೋಗಿಸುವ ಜನಪ್ರತಿನಿಧಿಗಳು ಸರ್ಕಾರದವೇ ಆಚರಣೆ ಮಾಡುವ ಜಯಂತಿಗಳಿಗೆ ಗೈರು ಉಳಿಯುವುದು ಎಷ್ಟು ಸರಿ? ಕೂಡಲೇ ಸರ್ಕಾರ ಇದಕ್ಕೆ ಮಾರ್ಗಸೂಚಿ ರೂಪಿಸಿ ಜನಪ್ರತಿನಿಧಿಗಳು ಜಯಂತಿಗಳಿಗೆ ಹಾಜರಾಗುವುದು ಕಡ್ಡಾಯಗೊಳಿಸಬೇಕು. ಇಲ್ಲವೇ ಅವರ ಸ್ಥಾನವನ್ನು ಅನುರ್ಜಿತಗೊಳಿಸಬೇಕೆಂದು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರಬಣದ ಜಿಲ್ಲಾ ಸಂಚಾಲಕ ಹನುಮಂತ ಚಿಮ್ಮಲಗಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಆನಂದ ದೊಡಮನಿ, ಮುತ್ತಣ್ಣ ಮೇತ್ರಿ, ಕೃಷ್ಣಮೂರ್ತಿ ನಾಯ್ಕರ, ಜಿಲ್ಲಾ ಖಜಾಂಚಿ ಸಂಗಣ್ಣ ಮಡ್ಡಿ, ಜಿಲ್ಲಾ ಸಮಿತಿ ಸದಸ್ಯ ಪ್ರಭು ದೊಡಮನಿ, ತಾಲೂಕ ಸಂಚಾಲಕ ಶಂಕ್ರಪ್ಪ ದೊಡಮನಿ, ತಾಲೂಕ ಸಂಘಟನಾ ಸಂಚಾಲಕರಾದ ನಾಗಪ್ಪ ದೊಡಮನಿ, ಮೌನೇಶ ಜಾಮುನಿ, ತಾಲೂಕ ಖಜಾಂಚಿ ಯಲ್ಲಪ್ಪ ಪಾತ್ರೋಟಿ, ಹಾಗೂ ಯಮನಪ್ಪ ಹೂವಿನಹಳ್ಳಿ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

Share This Article

ಬೇಸಿಗೆಯಲ್ಲಿ ತಣ್ಣನೆಯ ನಿಂಬೆ ಜ್ಯೂಸ್ ಕುಡಿಯುವ ಮುನ್ನ ಎಚ್ಚರ..!Lemon Juice

Lemon Juice: ನಿಂಬೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇಸಿಗೆಯಲ್ಲಿ…

ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಒಮ್ಮೆ ಹೀಗೆ ಮಾಡಿ ನೋಡಿ..Gastric Problem

Gastric Problem: ಪ್ರಸ್ತುತ ಯುಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನೇಕ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಅನಾರೋಗ್ಯಕರ…

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…