ಸರ್ಕಾರಿ ಕಾರ್ನರ್

ದಿನದ ಪ್ರಶ್ನೆ

ನಾನು 36ನೇ ವಯಸ್ಸಿಗೆ ಕೆಲಸಕ್ಕೆ ಸೇರಿ, 24 ವರ್ಷ ಸೇವೆ ಸಲ್ಲಿಸಿ, 2016ರ ಜುಲೈ 31ರಂದು ವಯೋನಿವೃತ್ತನಾಗಿದ್ದೇನೆ. ಸರ್ಕಾರಿ ಸೇವಾ ನಿಯಮಾವಳಿ ರೀತ್ಯ 30 ವರ್ಷ ಕಳೆದ ನಂತರ ಕೆಲಸಕ್ಕೆ ಸೇರಿದ್ದರೆ, ಪಿಂಚಣಿಗಾಗಿ ನಾಲ್ಕು ವರ್ಷಗಳ ಅರ್ಹತಾದಾಯಕ ಸೇವೆಯನ್ನು ವಿಶೇಷ ಸೇರ್ಪಡೆಯಾಗಿ ಪರಿಗಣಿಸಬಹುದೆ? ಹಾಗಿದ್ದಲ್ಲಿ ಯಾರಿಗೆ ಮನವಿ ಸಲ್ಲಿಸಬೇಕು?

| ಡಿ. ಶಾಂತ ನೆಲಮಂಗಲ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 247ಎ ರೀತ್ಯ 30 ವರ್ಷ ತುಂಬಿದ ತರುವಾಯ ನೇರ ನೇಮಕಾತಿ ಆಗುವ ವ್ಯಕ್ತಿಗಳು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಅವರ ಅರ್ಹತಾದಾಯಕ ಸೇವೆಗೆ ಎರಡು ವರ್ಷಗಳಿಗೆ ಒಳಪಟ್ಟು ಸೇರಿಸಬಹುದಾಗಿದೆ. ಈ ಸೌಲಭ್ಯವು ದಿನಾಂಕ 15-2-2012ರ ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ ಎಫ್​ಡಿ2004ಎಸ್​ಆರ್​ಎ2010ರ ಮೇರೆಗೆ ದಿನಾಂಕ 15-2-2012ರ ನಂತರ ನಿವೃತ್ತರಾಗುವ ನೌಕರರಿಗೆ ನೀಡಲಾಗುತ್ತದೆ.

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560 018. ಇ-ಮೇಲ್: [email protected], ದೂರವಾಣಿ: 8884432666, ಫ್ಯಾಕ್ಸ್: 080-26257464.

 

Leave a Reply

Your email address will not be published. Required fields are marked *