ಸರ್ಕಾರಿ ಕಾರ್ನರ್​

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ನನಗೆ 38 ವರ್ಷ ವಯಸ್ಸಾಗಿದೆ. ಈಗ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸಿದ್ದೇನೆ. ಈ ಹುದ್ದೆಗೆ ವಯೋಮಿತಿ ನಿರ್ಬಂಧವಿದೆಯೇ? ಗರಿಷ್ಠ ವಯೋಮಿತಿ ಎಷ್ಟು? ಸಡಿಲಿಕೆ ಉಂಟೆ?

| ಸುನಿಲ್ ಕುಮಾರ್ ಚಿತ್ರದುರ್ಗ

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977ರ ನಿಯಮ 6(1)ರ ಪ್ರಕಾರ ಸರ್ಕಾರಿ ನೌಕರ ಎಷ್ಟು ವರ್ಷ ಕೆಲಸ ನಿರ್ವಹಿಸಿರುವನೋ ಅಷ್ಟು ವರ್ಷ ಅಥವಾ ಗರಿಷ್ಠ 10 ವರ್ಷ ವಯೋಮಿತಿ ಸಡಿಲಿಕೆ ಉಂಟು. ಆದರೆ, ಕಿರಿಯ ಪ್ರಾಥಮಿಕ ಅಥವಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಾಮಾನ್ಯವರ್ಗಕ್ಕೆ 40 ವರ್ಷ, ಹಿಂದುಳಿದ ವರ್ಗಕ್ಕೆ 43, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಹಾಗಾಗಿ ನಿಮ್ಮ ನೇಮಕಾತಿ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಅರ್ಜಿ ಸಲ್ಲಿಸಿದರೆ ವಯೋಮಿತಿ ಸಡಿಲಿಕೆ ಲಭ್ಯವಾಗುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಪುಸ್ತಕ ನೋಡಬಹುದು.

Leave a Reply

Your email address will not be published. Required fields are marked *