ಸರ್ಕಾರಿ ಕಾರ್ನರ್​

ದಿನದ ಪ್ರಶ್ನೆ

1988ರ ಜುಲೈನಲ್ಲಿ ನಾನು ಸರ್ಕಾರಿ ಕೆಲಸಕ್ಕೆ ಸೇರಿದ್ದು, ಈಗಿನ ವೇತನ ಶ್ರೇಣಿ 52,650-97,100 ರೂ. ಆಗಿದೆ. 2018ರ ಜುಲೈವರೆಗೆ 30 ವರ್ಷ ಕಾಲ ಕರ್ತವ್ಯವನ್ನು ಯಾವುದೇ ಪದೋನ್ನತಿ ಇಲ್ಲದೆ ಪೂರೈಸಿರುತ್ತೇನೆ. ಈವರೆಗೂ ನನಗೆ 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ನೀಡಲಾಗಿಲ್ಲ. ಹಾಗಾಗಿ ಇದನ್ನು ನಿಯಮಾನುಸಾರ ಪಡೆಯಲು ಅವಕಾಶವಿದೆಯೇ?

| ಕೆ. ರಮೇಶ್ ಬಸಾಪುರ, ಬೆಂಗಳೂರು

2012, ಜೂ.14ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012 (8)ರ ಪ್ರಕಾರ ಸತತವಾಗಿ 30 ವರ್ಷ ಕಾಲ ಯಾವುದೇ ಪದೋನ್ನತಿ ಇಲ್ಲದೆ ಕರ್ತವ್ಯ ಸಲ್ಲಿಸಿದ್ದರೆ ಅಂಥ ನೌಕರರಿಗೆ ಹೆಚ್ಚುವರಿಯಾಗಿ ಒಂದು ವೇತನ ಬಡ್ತಿ ಮಂಜೂರು ಮಾಡಬೇಕೆಂದು ಸೂಚಿಸಿದೆ. ಈ ರೀತಿ ಮಂಜೂರು ಮಾಡುವ ಸರ್ಕಾರಿ ನೌಕರನ ಸೇವಾ ದಾಖಲೆ ತೃಪ್ತಿಕರವಾಗಿದ್ದು, ಪದೋನ್ನತಿಗೆ ಎಲ್ಲ ರೀತಿಯಲ್ಲೂ ಅರ್ಹರಾಗಿರಬೇಕು. ಹಾಗಾಗಿ ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಈ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಲು ವಿನಂತಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.