25.1 C
Bangalore
Friday, December 6, 2019

ಸರ್ಕಾರಿ ಆಸ್ಪತ್ರೆಗೆ ಮುಗಿಬಿದ್ದ ಸಾರ್ವಜನಿಕರು

Latest News

ಯೋಗ ತರಬೇತಿಗೆ ಆಸ್ಟ್ರೇಲಿಯಾದಿಂದ ಆಹ್ವಾನ, ಬಳ್ಳಾರಿ ಸಾಧನಾ ಯೋಗ ಕೇಂದ್ರದ ರೂಪಾ ಮುರಳೀಧರ್ ಹೇಳಿಕೆ

ಬಳ್ಳಾರಿ: ಆಸ್ಟ್ರೇಲಿಯಾದ ಜನರಿಗೆ ಯೋಗ ಪದ್ಧತಿ ಬಗ್ಗೆ ತುಂಬಾ ಆಸಕ್ತಿ ಇದೆ. ಸೇವಾ ಆಸ್ಟ್ರೇಲಿಯಾ ಸಂಸ್ಥೆ ಮೂಲಕ ಆಸ್ಟ್ರೇಲಿಯಾದಲ್ಲಿ ಯೋಗ ತರಬೇತಿ ನೀಡಲು...

ಸೆನ್ಸೆಕ್ಸ್​ 334 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 12,000ಕ್ಕೂ ಕೆಳಕ್ಕೆ…

ಮುಂಬೈ: ಷೇರುಪೇಟೆಯ ವಾರಾಂತ್ಯದ ದಿನದ ವಹಿವಾಟಿನ ಕೊನೆಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 334 ಅಂಶ ಕುಸಿತ ಮತ್ತು ನ್ಯಾಷನಲ್...

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ಹಂಪಿ ವಿವಿ ಕೇಂದ್ರ ಸ್ಥಳಾಂತರ ಕೈಬಿಡಿ

ಬಾದಾಮಿ: ಬನಶಂಕರಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ...

ಅವೈಜ್ಞಾನಿಕ ಉಳುಮೆಯಿಂದ ಮಣ್ಣಿನ ಸವಕಳಿ, ಹೊಸಪೇಟೆ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪ ಹೇಳಿಕೆ

ಕೂಡ್ಲಿಗಿ: ರೈತರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಹೊಸಪೇಟೆ ವಿಭಾಗದ ಉಪನಿರ್ದೇಶಕ ಸಹದೇವ ಯರಗುಪ್ಪ ಹೇಳಿದರು. ಪಟ್ಟಣದ...

ಹಾವೇರಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ)ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಮಂಡಳಿಯ(ಐಎಂಎ) ಜಿಲ್ಲಾ ಘಟಕದ ವತಿಯಿಂದ ನಗರ ಸೇರಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ದೈನಂದಿನ ಚಿಕಿತ್ಸೆ ಸ್ಥಗಿತಗೊಳಿಸಿದ್ದವು. ಖಾಸಗಿ ವೈದ್ಯರ ಮುಷ್ಕರದಿಂದ ಜಿಲ್ಲೆಯಲ್ಲಿ ಯಾವುದೇ ತೊಂದರೆಯಾದ ಘಟನೆ ಜರುಗಿಲ್ಲ.

ಖಾಸಗಿ ವೈದ್ಯರು ದೀಢೀರನೆ ಸೇವೆ ಸ್ಥಗಿತಗೊಳಿಸಿದ ಪರಿಣಾಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ಪರದಾಡಿದರು. ತುರ್ತು ಚಿಕಿತ್ಸೆ ಅವಶ್ಯವಿದ್ದವರು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳ ಆಗಮಿಸಿದ್ದರಿಂದ ಅಲ್ಲಿನ ವೈದ್ಯರು ಹೈರಾಣಾದರು. ಕೆಲವರು ಬೆಳಗ್ಗೆಯಿಂದ ಸಂಜೆಯವರೆಗೂ ಸರದಿಯಲ್ಲಿ ಕಾಯ್ದರೆ, ಇನ್ನು ಕೆಲವರು ಮನೆಗೆ ತೆರಳಿದ ದೃಶ್ಯಗಳು ಕಂಡುಬಂದವು. ಜಿಲ್ಲಾಸ್ಪತ್ರೆಯಲ್ಲಿಯೂ ಮುಂಜಾಗೃತ ಕ್ರಮವಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರ ಸೂಚನೆ ಮೇರೆಗೆ ಎಲ್ಲ ವೈದ್ಯರೂ ಆಸ್ಪತ್ರೆಗೆ ಹಾಜರಾಗಿದ್ದರು.

ಖಾಸಗಿ ವೈದ್ಯರಿಂದ ಡಿಸಿಗೆ ಮನವಿ: ಐಎಂಎ ಜಿಲ್ಲಾ ಘಟಕದಿಂದ ಖಾಸಗಿ ವೈದ್ಯರು ನಗರದ ಪ್ರವಾಸಿಮಂದಿರದಲ್ಲಿ ಸಮಾವೇಶಗೊಂಡು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎನ್​ಎಂಸಿ ವಿಧೇಯಕವು ವೈದ್ಯರಿಗೆ ಮಾರಕವಾಗಿದೆ. ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೂ ಇದರಿಂದ ತೊಂದರೆಯಾಗಲಿದೆ. ವಿಧೇಯಕವನ್ನು ಹಿಂಪಡೆಯಬೇಕು ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಮೃತ್ಯುಂಜಯ ತುರಕಾಣಿ ಒತ್ತಾಯಿಸಿದರು.

ಕಾರ್ಯದರ್ಶಿ ಡಾ. ಬಸವರಾಜ ಕೊಳ್ಳಿ, ಡಾ. ವಿಲಾಸ ಹಿರೇಗೌಡರ, ಡಾ. ರೋಹನ್ ಕಾಮತ್, ಡಾ. ಎಸ್.ಎನ್. ಹಂದ್ರಾಳ, ಡಾ. ಜಗದೀಶ ಗೊಡ್ಡೆಮ್ಮಿ, ಡಾ. ಕೆ. ವಿನಾಯಕ, ಡಾ. ಸುದೀಪ ಪಂಡಿತ, ಡಾ. ಪ್ರಮೋದ ಹೆಗ್ಗೇರಿ, ಡಾ. ಶ್ರವಣ ಪಂಡಿತ, ಡಾ. ಗೌತಮ ಲೋಡಾಯ, ಡಾ. ಬಸವರಾಜ ವೀರಾಪುರ, ಡಾ. ಚಿನ್ಮಯಿ ಕುಲಕರ್ಣಿ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

ಖಾಸಗಿ ವೈದ್ಯರ ಮುಷ್ಕರದಿಂದ ಜಿಲ್ಲಾಸ್ಪತ್ರೆಯಲ್ಲಿ ದಿನಕ್ಕಿಂತ ಹೆಚ್ಚಿನ ರೋಗಿಗಳು ಚಿಕಿತ್ಸೆಗೆ ಬಂದಿದ್ದರು. ಆಸ್ಪತ್ರೆಯ 33 ವೈದ್ಯರಿಗೂ ಮೊದಲೇ ಸೂಚನೆ ನೀಡಿದ್ದರಿಂದ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದರು. ಆಸ್ಪತ್ರೆಯ ಸಿಬ್ಬಂದಿಯಲ್ಲದೇ ನರ್ಸಿಂಗ್ ಕಾಲೇಜ್​ನ ವಿದ್ಯಾರ್ಥಿಗಳನ್ನು ಇಂದು ರೋಗಿಗಳ ಸೇವೆಗೆ ಬಳಸಿಕೊಳ್ಳಲಾಗಿದೆ. ಯಾವುದೇ ರೋಗಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
| ಡಾ. ನಾಗರಾಜ ನಾಯ್ಕ, ಜಿಲ್ಲಾಸ್ಪತ್ರೆ ಸರ್ಜನ್ ಹಾವೇರಿ

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...