ಸರ್ಕಾರದ ಸೌಲಭ್ಯ ಸದ್ಬಳಕೆಯಾಗಲಿ

blank

ರಾಮದುರ್ಗ: ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ವಕೀಲ ಎಸ್​.ಪಿ.ಕರದಿನ ಹೇಳಿದರು.

ಪಟ್ಟಣದ ಸಿ.ಎಸ್​.ಬೆಂಬಳಗಿ ಕಲಾ, ಶಾ.ಎಂ.ಆರ್​.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್​.ರಾಠಿ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿವಿಧ ಸಂಸ್ಥೆ ಹಾಗೂ ಹಾಗೂ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮ ದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ನೆತಿಕ ಮೌಲ್ಯಗಳೊಂದಿಗೆ ಉನ್ನತ ಸಾಧನೆಯ ಗುರಿ ಹೊಂದಿ ಅವುಗಳ ಈಡೇರಿಕೆಗಾಗಿ ಶ್ರಮವಹಿಸಬೇಕು ಎಂದು ಕರೆ ನೀಡಿದರು. ವಕೀಲರ ಸಂದ ಅಧ್ಯ ಆರ್​.ಸಿ. ಹಲ್ಯಾಳ ಮಾತನಾಡಿ, ಹೆಣ್ಣು ಮಕ್ಕಳ ರಣೆಗೆ ಅನೇಕ ಕಾನೂನು ಹಾಗೂ ವಿವಿಧ ಇಲಾಖೆಗಳ ಮುಖಾಂತರ ಸಾಕಷ್ಟು ಸೌಲಭ್ಯಗಳಿವೆ. ಸ್ತ್ರೀಯರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಹಾಯಕ ಶಿಶು ಅಭಿವದ್ಧಿ ಯೋಜನಾಧಿಕಾರಿ ಆರ್​.ಮಂಜುಳಾ ಮಾತನಾಡಿ, ಹೆಣ್ಣು ಮಕ್ಕಳ ದಿನ ಆಚರಣೆಗೆ ನಿಜವಾದ ಅರ್ಥ ಬರಬೇಕಾದಲ್ಲಿ ಅವರ ಹಕ್ಕುಗಳ ರಣೆ ಹಾಗೂ ಅಭಿವದ್ಧಿಗೆ ಬಲ ತುಂಬಬೇಕಿದೆ ಎಂದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಬಿ.ಮುರಗೋಡ ಪ್ರಾಸ್ತಾವಿಕ ಮಾತನಾಡಿದರು. ಶಿಶು ಅಭಿವದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಮುಕ್ತಾ ಜಂಬಾಳೆ, ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಎನ್​.ಎಸ್​.ಎಸ್​. ಕಾರ್ಯಕ್ರಮಾಧಿಕಾರಿ ಪ್ರೊ. ಗೀತಾಂಜಲಿ ರಾಠೋಡ ಸ್ವಾಗತಿಸಿದರು. ಬಸವ್ವ ಬೊಮಣ್ಣನವರ ನಿರೂಪಣೆ ಮಾಡಿದರು. ಶ್ರುತಿ ಕುದರಿಮೋತಿ ವಂದಿಸಿದರು.

Share This Article

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…

ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ; ಅದಕ್ಕೆ ಕಾರಣ & ಲಕ್ಷಣವೇನು ಎಂಬ ಮಾಹಿತಿ ಇಲ್ಲಿದೆ | Health Tips

ನೀವು ಆಹಾರವನ್ನು ಸೇವಿಸಿದಾಗ ನಿಮ್ಮ ಜೀರ್ಣಾಂಗವು ಅದನ್ನು ತುಂಡುಗಳಾಗಿ ಮಾಡುತ್ತದೆ ಮತ್ತು ಅದನ್ನು ಶಕ್ತಿಯಾಗಿ ಬಳಸುತ್ತದೆ.…