ಚಿಕ್ಕೋಡಿ: ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ 30 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆ ರಚನೆ ಆಗುತ್ತಿಲ್ಲ. ಭೌಗೋಳಿಕ ವಿಸ್ತಾರ ಹೊಂದಿದ ಚಿಕ್ಕೋಡಿ ಉಪವಿಭಾಗ ಆರ್ಥಿಕವಾಗಿ ಬೆಳೆಯಲು ಜಿಲ್ಲೆಯ ಅವಶ್ಯಕತೆಯಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಆನಂದ ಆರ್ವಾರೆ ಹೇಳಿದರು.
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಮಾಡುವಂತೆ ಕೈಗೊಂಡಿರುವ 6ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ಚಿಕ್ಕೋಡಿ ಜಿಲ್ಲೆ ಮಾಡುವುದರಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಪ್ರತಿಭಟನಾಕಾರರು ತಾಳ್ಮೆ ಕಳೆದುಕೊಳ್ಳುವ ಮುನ್ನ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸಬೇಕೆಂದರು.
ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಬಸವಣ್ಣಿ ಚನ್ನವರ, ರಫೀಕ್ ಪಠಾಣ, ಶಿವು ಮದಾಳೆ, ಮೋಹನ ಪಾಟೀಲ, ಅಮೂಲ ನಾವಿ, ಅಪ್ಪಾಸಾಹೇಬ ಹಿರೆಕೋಡಿ, ರುದ್ರಯ್ಯ ಹಿರೇಮಠ, ಬಸವರಾಜ ಮಗದುಮ್, ಶಿವಾನಂದ ಬಾಗೇವಾಡಿ, ಅನಿಲ ಗಿರಿ, ಸಚಿನ ದೊಡ್ಡಮನಿ, ಮನೋಜ ಶಿರಗಾವಿ, ಮಾಳು ಕರೆಣ್ಣವರ, ರಾಜೇಶ ಮಗದುಮ್, ಬಾಳಾಸಾಹೇಬ ಹೊನ್ನಾಯಿಕ ಇತರರಿದ್ದರು.