More

  ಸರ್ಕಾರದ ಮಾರ್ಗಸೂಚಿ ಪಾಲಿಸಿ

  ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪ್ರತಿ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಕರೊನಾ ಸೋಂಕಿತರ ತಪಾಸಣೆ ಮಾಡುವ ನಿಟ್ಟಿನಲ್ಲಿ ಅಂಗನವಾಡಿ, ಆಶಾ ಕಾರ್ಯಕತೆಯರಿಗೆ 4,500 ಕರೊನಾ ಪರೀಕ್ಷೆ ವಾರಿಯರ್ಸ್ ಕಿಟ್ ವಿತರಿಸಲಾಗುತ್ತಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

  ಸೋಮವಾರ ಪಟ್ಟಣದ ಸಂಸದರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಸೇವಾ ಹಿ ಸಂಘಟನೆ’ ಸಮಾರಂಭದಲ್ಲಿ ಜೊಲ್ಲೆ ಚಾರಿಟಿ ವತಿಯಿಂದ ಕರೊನಾ ಸೇನಾನಿಗಳಾದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಕಿಟ್ ವಿತರಣೆ ಮಾಡಲಾಗುತ್ತಿದೆ. ಈ ರೀತಿ ಕಿಟ್ ವಿತರಣೆ ಮಾಡುತ್ತಿರುವುದು ರಾಜ್ಯದಲ್ಲಿ ಇದೇ ಮೊದಲ ಬಾರಿ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜನರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸುತ್ತಾರೆ. ಪರೀಕ್ಷೆ ವೇಳೆ ಸೋಂಕಿನ ಲಕ್ಷಣ ಕಂಡುಬಂದರೆ ಅವರನ್ನು ಜೊಲ್ಲೆ ಚಾರಿಟಿ ಸಂಸ್ಥೆ ಮೂಲಕ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಗುವುದು ಎಂದರು.

  ಪುರಸಭೆ ಮಾಜಿ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಕರೊನಾ ಸೇನಾನಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಬಸವ ೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಜಯಕುಮಾರ ಖೋತ, ಸಂಜಯ ಕವಟಗಿಮಠ, ಸಂಜಯ ಅರಗೆ, ದೀಪಾ ಕಾಳೆ, ಟಿಎಚ್‌ಒ ಡಾ.ವಿಠ್ಠಲ ಶಿಂಧೆ, ಗಣೇಶ ಅದಮವಾಡಿ, ಶಕುಂತಲಾ ಡೊಣವಾಡೆ ಇದ್ದರು. ಜೊಲ್ಲೆ ಚಾರಿಟಿ ಫೌಂಡೇಷನ್‌ಗೆ ಪಿಕೆಪಿಎಸ್ ಶಮನೇವಾಡಿ, ಶಮನೇವಾಡಿ ಕ್ರೆಡಿಟ್ ಸೌಹಾರ್ದ ಸಹಕಾರಿಯಿಂದ ತಲಾ 25 ಸಾವಿರ ರೂ. ದೇಣಿಗೆಯನ್ನು ಸಂಸ್ಥೆ ಅಧ್ಯಕ್ಷ ಜಯಕುಮಾರ ಖೋತ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts