ಸರ್ಕಾರದಿಂದ ಹಣ ಬಿಡುಗಡೆ ಇಲ್ಲ

ತೀರ್ಥಹಳ್ಳಿ: ರಾಜ್ಯದ ಸಮ್ಮಿಶ್ರ ಸರ್ಕಾರ ಕೇವಲ ಯೋಜನೆಗಳನ್ನು ಘೊಷಣೆ ಮಾಡುತ್ತಿದೆಯೆ ಹೊರತು ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ದೂರಿದ್ದಾರೆ. ಪ್ರವಾಹ ಪರಿಹಾರ ನಿಧಿಯಿಂದ 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೆಗ್ಗೋಡು ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ, ಘೊಷಣೆಯಲ್ಲೇ ಕಾಲಹರಣ ಮಾಡುತ್ತಿರುವ ಸರ್ಕಾರ ಅನುದಾನವನ್ನು ನೀಡುತ್ತಿಲ್ಲ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದರು. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಚಕ್ಕೋಡಬೈಲು ಮಹತ್ತರವಾದ ಸ್ಥಾನ ಹೊಂದಿದೆ. ಈ ಕ್ಷೇತ್ರದ ಜನತೆ ನನಗೆ ನಾಲ್ಕನೆ ಬಾರಿ ಆಶಿರ್ವಾದ ಮಾಡಿದ್ದಾರೆ. ಸುದೀರ್ಘ ಕಾಲದ ಅನುಭವದಲ್ಲಿ ಈ ಊರಿನ ಜನರ ಹಾಗೂ ಕ್ಷೇತ್ರದ ಮತದಾರರ ಋಣವನ್ನು ತೀರಿಸಲು ನನ್ನ ಅಧಿಕಾರದ ಕೊನೆಯ ದಿನದವರೆಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಜಿಪಂ ಸದಸ್ಯೆ ಭಾರತಿ ಪ್ರಭಾಕರ್, ಗ್ರಾಪಂ ಅಧ್ಯಕ್ಷ ಜಯಶೀಲ, ಉಪಾಧ್ಯಕ್ಷೆ ಗೀತಾ ಮಹೇಶ್, ಸದಸ್ಯರಾದ ಅಣ್ಣಪ್ಪ, ಲೋಕೋಪಯೋಗಿ ಇಲಾಖೆ ಎಇಇ ದಿವಾಕರ್ ಇತರರಿದ್ದರು.