More

  ಸರ್ಕಾರದಿಂದ ರೈತರ ಅಭ್ಯುದಯ ಸಾಧ್ಯ

  ರಾಮದುರ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹಣಕಾಸು ಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಬಾಳಿಗೆ ಬೆಳಕಾಗಬಲ್ಲ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಪುನಃಶ್ಚೇತನಗೊಳಿಸಿ ರೈತರಿಗೆ ಅನುಕೂಲ ಮಾಡಿದ್ದಾರೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

  ತಾಲೂಕಿನ ಮನಿಹಾಳ-ಸುರೇಬಾನದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 75ನೇ ವರ್ಷದ ಅಮೃತ ಮಹೋತ್ಸವ, ಕೃಷಿ ಸೇವಾ ಕೇಂದ್ರ ಮತ್ತು ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 3 ಲಕ್ಷದವರೆಗೆ ಇದ್ದ ರೈತರ ಶೂನ್ಯ ಬಡ್ಡಿದರದ ಸಾಲ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತಪರ ಕೆಲಸ ಮಾಡುತ್ತಿವೆ ಎಂದರು.

  ಸಾನ್ನಿಧ್ಯ ವಹಿಸಿದ್ದ ಅವರಾದಿ ಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ತಮ್ಮ ಗೌರವಧನ ಮತ್ತು ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸುತ್ತಾರೆ ಹೊರತು ರೈತಪರ ಯೋಜನೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ಪಿಂಚಣಿ ತೆಗೆದುಕೊಳ್ಳದೆ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಒತ್ತಾಯಿಸಲಿ. ಸಾರಾಯಿ ಮಾರಾಟವನ್ನು ಸರ್ಕಾರ ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

  ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಸ್.ಢವಣ ಮಾತನಾಡಿ, ರೈತರ ಅನುಕೂಲಕ್ಕಾಗಿ ನಬಾರ್ಡ್ ಸಹಕಾರದಿಂದ ಪಿಕೆಪಿಎಸ್ ಮೂಲಕ ತಾಲೂಕಿನ 18 ಸೊಸೈಟಿಗಳಲ್ಲಿ ಬೃಹತ್ ಗೋದಾಮು ನಿರ್ಮಿಸಲಾಗಿದೆ. ರೈತರಿಗೆ ಅಗತ್ಯವಿರುವ ಕೃಷಿ ಮಾಹಿತಿ ನೀಡಲು 18 ಸಂಘಗಳಲ್ಲಿ ಕೃಷಿ ಸೇವಾ ಕೇಂದ್ರ ತೆರೆಯಲಾಗಿದೆ ಎಂದರು.
  ಮನಿಹಾಳ ಆತ್ಮಾನಂದ ಮಠದ ಸಮರ್ಥ ಶಿವಾನಂದ ಸ್ವಾಮೀಜಿ ಹಾಗೂ ಶಂಕ್ರಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಸಂಘದ ಉಪಾಧ್ಯಕ್ಷ ಮೈಲಾರಪ್ಪ ಶಿರನ್ನವರ, ನಿರ್ದೇಶಕರಾದ ಬಸವರಾಜ ಹಿರೇರಡ್ಡಿ, ಗಂಗಪ್ಪ ಜಾಲಿಹಾಳ, ಬಸಪ್ಪ ಮದಕಟ್ಟಿ, ನಿಂಗನಗೌಡ ಈರನಗೌಡ್ರ, ಶಿವಬಸಪ್ಪ ಗಾಣಿಗೇರ, ರಾಜೇಶ್ವರಿ ಮೇಟಿ, ನೀಲವ್ವ ಬನನ್ನವರ, ಪಡಿಯಪ್ಪ ಭಜಂತ್ರಿ, ಶಾಂತವ್ವ ಬೊಮ್ಮನ್ನವರ, ಬಸಪ್ಪ ಕಠಾರಿ, ಚನ್ನಬಸು ಹಿರೇರಡ್ಡಿ, ಎಂ.ಎಂ. ಆತಾರ, ಆರ್.ಎಸ್.ವಾಲಿ, ಎ್.ಎನ್.ಮಾದರ, ಕೆನರಾ ಬ್ಯಾಂಕ್ ಪ್ರಬಂಧಕ ಈರಣ್ಣ ಬಟಕುರ್ಕಿ ಇತರರಿದ್ದರು.

  ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಮಾಡಲು ಯುವ ಉತ್ಸಾಹಿ ಯುವಕರ ಅಗತ್ಯತೆ ಇದೆ. 60 ರಿಂದ 70 ವರ್ಷ ದಾಟಿದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ ಕಾನೂನು ರಚಿಸಬೇಕು. ಯುವಕರಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ
  | ಶ್ರೀ ಶಿವಮೂರ್ತಿ ಸ್ವಾಮೀಜಿ ಲಹಾರೇಶ್ವರ ಮಠ ಅವರಾದಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts