Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಸರ್ಕಾರಕ್ಕೆ ಕೆಇಆರ್​ಸಿ ಶಾಕ್

Saturday, 20.05.2017, 3:10 AM       No Comments

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ವಿದ್ಯುತ್ ದರ ಹೆಚ್ಚಳ ಮಾಡಿ ಜನತೆಗೆ ಶಾಕ್ ನೀಡಿದ್ದ ಕೆಇಆರ್​ಸಿ, ಇದೀಗ ಪವನ ವಿದ್ಯುತ್ ಖರೀದಿ ಒಪ್ಪಂದಗಳನ್ನು ತಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದೆ.

ತೀವ್ರ ಮಳೆ ಕೊರತೆಯಿಂದ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗದೆ ಸಂಕಷ್ಟ ಕ್ಕೊಳಗಾಗಿರುವ ರಾಜ್ಯಕ್ಕೆ ಕೆಇಆರ್​ಸಿ ಆದೇಶ ಆಘಾತ ತಂದಿದ್ದು, ಆದೇಶದ ವಿರುದ್ಧ ಕೇಂದ್ರ ಸರ್ಕಾರದ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದುವರೆಗೂ ಮಾಡಿಕೊಂಡಿರುವ ಒಪ್ಪಂದಗಳಿಂದ ಮಾತ್ರ ವಿದ್ಯುತ್ ಖರೀದಿ ಮಾಡಬೇಕು, ಹೊಸದಾಗಿ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಕೆಇಆರ್​ಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿದ್ಯುತ್ ಸಮಸ್ಯೆ ನೀಗಿಸಲು ನವೀಕೃತ ಇಂಧನ ಖರೀದಿಗೂ ಒತ್ತು ನೀಡುತ್ತಿದ್ದ ಸರ್ಕಾರ, ಕೆಇಆರ್​ಸಿ ಆದೇಶದಿಂದ ಆತಂಕಕ್ಕೆ ಒಳಗಾಗಿದೆ.

ಕಾರಣವೇನು?: ಪವನ ವಿದ್ಯುತ್​ಗಿಂತ ಕಡಿಮೆ ಬೆಲೆಗೆ ಸಿಗುವ ವಿದ್ಯುತ್ ಖರೀದಿ ಮಾಡಿ ಎಂದು ಕೆಇಆರ್​ಸಿ ಸೂಚನೆ ನೀಡಿದೆ. ಆದರೆ ಕಡಿಮೆ ಬೆಲೆಗೆ ಸಿಗುವ ವಿದ್ಯುತ್ ಖರೀದಿಗೆ ಮುಂದಾದರೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ದೊರಕುವುದಿಲ್ಲ. ಸಿಕ್ಕ ವಿದ್ಯುತ್ ಸಾಗಿಸಲು ಕಾರಿಡಾರ್ ಸಮಸ್ಯೆ ಇದೆ. ಸ್ಥಳೀಯವಾಗಿಯೇ ಲಭ್ಯವಾಗುವ ನವೀಕೃತ ವಿದ್ಯುತ್ ಬಳಕೆಗೆ ಕೆಇಆರ್​ಸಿ ಅಡ್ಡಿಯಾಗುತ್ತಿರುವುದು ವಿದ್ಯುತ್ ಉತ್ಪಾದಕರಲ್ಲಿ ಆಕ್ರೋಶವನ್ನುಂಟು ಮಾಡಿದೆ.

ರಾಜ್ಯದ ವಿದ್ಯುತ್ ಬೇಡಿಕೆ

  • ಬೇಡಿಕೆ 118.35 ದಶಲಕ್ಷ ಯೂನಿಟ್
  • ಸರಬರಾಜು 107.96 ದಶಲಕ್ಷ ಯೂನಿಟ್
  • ಖರೀದಿ 29.72 ದಶಲಕ್ಷ ಯೂನಿಟ್

ಕೇಂದ್ರದ ಮೊರೆಗೆ ನಿರ್ಧಾರ

ಕೆಇಆರ್​ಸಿಯಿಂದ ಆದೇಶದ ಪ್ರತಿ ತಲುಪುತ್ತಿದ್ದಂತೆ ಅಧಿಕಾರಿಗಳ ಜತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದಾರೆ. ಯಾವ ರೀತಿಯಲ್ಲಿ ಕೆಇಆರ್​ಸಿ ಮನವೊಲಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸಿ ಪ್ರಸ್ತಾವನೆ ಸಲ್ಲಿಸು ವಂತೆಯೂ ಸೂಚನೆ ನೀಡಿದ್ದಾರೆ. ಇಂಧನ ಇಲಾಖೆಯ ಅಧಿಕಾರಿಗಳು ಎಲ್ಲಾ ರೀತಿಯಲ್ಲಿ ಚರ್ಚೆ ನಡೆಸಿದ್ದು, ಕೇಂದ್ರದ ಮೊರೆ ಹೋಗುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಜಲ ವಿದ್ಯುತ್ ಯಾವಾಗಲೂ ಒಂದೇ ಪ್ರಮಾಣದಲ್ಲಿ ಉತ್ಪಾದನೆಯಾಗುವುದಿಲ್ಲ, ಶಾಖೋತ್ಪನ್ನಕ್ಕೆ ಕಲ್ಲಿದ್ದಲು ಸಮಸ್ಯೆ ಇದೆ. ಕೇಂದ್ರ ಸರ್ಕಾರ ನವೀಕೃತ ಮೂಲಗಳ ವಿದ್ಯುತ್ ಬಳಕೆ ಹೆಚ್ಚಳಕ್ಕೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿದೆ. ಆದ್ದರಿಂದ ಈಗ ಆ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಎಷ್ಟು ಒಪ್ಪಂದವಾಗಿದೆ

3798 ಮೆ.ವಾ. ಪವನ ವಿದ್ಯುತ್ ಖರೀದಿಗೆ ಸರ್ಕಾರ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇನ್ನೂ 2625 ಮೆ.ವಾ. ಖರೀದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆದಿತ್ತು. ಜತೆಗೆ 600 ಮೆ.ವಾ. ಉತ್ಪಾದನೆ ಒಪ್ಪಂದಕ್ಕೆ ಅರ್ಜಿಗಳು ಸಲ್ಲಿಕೆಯಾಗಿವೆ. ಕೆಇಆರ್​ಸಿ ಮುಂದಿರುವ 1000 ಮೆ.ವಾ. ಖರೀದಿ ಒಪ್ಪಂದಗಳಿಗೆ ಇನ್ನೂ ಒಪ್ಪಿಗೆ ಸಹ ಸಿಕ್ಕಿಲ್ಲ. ಈ ಕಡತ ಹೋದ ಸಂದರ್ಭದಲ್ಲಿಯೇ ಕೆಇಆರ್​ಸಿ ಸರ್ಕಾರಕ್ಕೆ ಈ ರೀತಿಯ ಸೂಚನೆ ನೀಡಿದೆ.

ಆತಂಕದಲ್ಲಿ ಉತ್ಪಾದಕರು

ರಾಜ್ಯದಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಕೋಟ್ಯಂತರ ರೂ.ಗಳ ಬಂಡವಾಳ ಹೂಡಿಕೆಯಾಗಿದ್ದು, ಏಕಾಏಕಿ ಈ ರೀತಿಯ ಆದೇಶ ಹೊರಬಿದ್ದರೆ ಮುಂದೆ ಏನು ಮಾಡಬೇಕು ಎಂಬುದು ಉತ್ಪಾದಕರ ಆತಂಕವಾಗಿದೆ. ಕೆಇಆರ್​ಸಿಯ ಮನವೊಲಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ.

ರಾಜ್ಯದಲ್ಲಿ ಪವನ ವಿದ್ಯುತ್ ಉತ್ಪಾದನೆ

  • ಉತ್ಪಾದನೆಗೆ ಇರುವ ಅವಕಾಶ 15923.22 ಮೆ.ವಾ.
  • ಅನುಮತಿ ನೀಡಿರುವುದು 3798.66 ಮೆ.ವಾ.
  • ಅನುಮತಿ ನೀಡಲು ಸಿದ್ಧತೆ 2625 ಮೆ.ವಾ.
  • ಅರ್ಜಿ ಸಲ್ಲಿಕೆಯಾಗಿರುವುದು 600 ಮೆ.ವಾ.
  • ಅನುಮತಿ ನೀಡಿ ರದ್ದಾಗಿರುವುದು 4244.59 ಮೆ.ವಾ.

 

ಕೆಇಆರ್​ಸಿ ಯಾವ ಉದ್ದೇಶದಿಂದ ಹೇಳಿದೆ ಗೊತ್ತಿಲ್ಲ. ಆದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ಕಡತ ಸಿದ್ಧಪಡಿಸಿದ್ದೇವೆ. ಆದಷ್ಟು ಬೇಗ ಸಚಿವರೊಂದಿಗೆ ಚರ್ಚೆ ನಡೆಸಿ, ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗುತ್ತದೆ.

| ಡಾ. ರಜನೀಶ್ ಗೋಯಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

ಖರೀದಿ ಹೆಚ್ಚಳಕ್ಕೆ ಮನವಿ

ವಿದ್ಯುತ್ ಬಳಕೆಯಲ್ಲಿ ಶೇ.11 ಮಾತ್ರ ನವೀಕೃತ ಇಂಧನ ಮೂಲಗಳ ವಿದ್ಯುತ್ ಬಳಕೆಗೆ ಅವಕಾಶ ಇದೆ. ಅದಕ್ಕಿಂತ ಜಾಸ್ತಿ ಬಳಕೆ ಮಾಡುವಂತಿಲ್ಲ. ಇದೀಗ ರಾಜ್ಯ ಸರ್ಕಾರ ನವೀಕೃತ ಇಂಧನ ಬಳಕೆಯ ಪ್ರಮಾಣವನ್ನು ಶೇ.25ಕ್ಕೆ ಹೆಚ್ಚಳ ಮಾಡುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ. ಇಂಧನ ಇಲಾಖೆಯ ಅಧಿಕಾರಿಗಳು ಈ ರೀತಿಯ ಕಡತ ಸಿದ್ಧಪಡಿಸಿದ್ದು, ಆದಷ್ಟು ಬೇಗ ಇಂಧನ ಸಚಿವರ ಜತೆಗೆ ಇನ್ನೊಂದು ಸಭೆ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.

Leave a Reply

Your email address will not be published. Required fields are marked *

Back To Top