ಸರೋಜಮ್ಮ ಭದ್ರಾವತಿ ತಾಪಂ ಉಪಾಧ್ಯಕ್ಷೆ

ಭದ್ರಾವತಿ: ತಾಪಂ ನೂತನ ಉಪಾಧ್ಯಕ್ಷೆಯಾಗಿ ಜೆಡಿಎಸ್​ನ ಹಿರಿಯೂರು ಕ್ಷೇತ್ರದ ಸದಸ್ಯೆ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್ ಸದಸ್ಯೆ ತುಂಗಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. 

ಉಪಾಧ್ಯಕ್ಷ ಸ್ಥಾನ ಎಸ್​ಸಿ ಮಹಿಳೆಗೆ ಮೀಸಲಾಗಿದ್ದು, ಸರೋಜಮ್ಮ ಹಾಗೂ ನೇತ್ರಾಬಾಯಿ ಸ್ಪರ್ಧಿಸಿದ್ದರು. ನೇತ್ರಾಬಾಯಿ ಉಮೇದುವಾರಿಕೆ ಹಿಂಪಡೆದ ಹಿನ್ನೆಲೆಯಲ್ಲಿ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೊಷಿಸಲಾಯಿತು. .

ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಪ್ರಕಾಶ್ ಕಾರ್ಯನಿರ್ವಹಿಸಿದರು. ಒಟ್ಟು 19 ಸ್ಥಾನ ಹೊಂದಿರುವ ತಾಪಂನಲ್ಲಿ 9 ಜೆಡಿಎಸ್, 6 ಕಾಂಗ್ರೆಸ್, 4ಬಿಜೆಪಿ ಸದಸ್ಯರನ್ನೊಳಗೊಂಡಿದ್ದು, ಯಡೇಹಳ್ಳಿಯ ಕಾಂಗ್ರೆಸ್ ಸದಸ್ಯೆ ಆಶಾಶ್ರೀಧರ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಆಗಿರುವ ಒಪ್ಪಂದದ ಪ್ರಕಾರ ಕಾಂಗ್ರೆಸ್​ನ ತುಂಗಮ್ಮ ರಾಜೀನಾಮೆ ಸಲ್ಲಿಸಿದ್ದು, ತೆರವಾದ ಸ್ಥಾನಕ್ಕೆ ಜೆಡಿಎಸ್ ಸದಸ್ಯೆ ಸರೋಜಮ್ಮ ಅವರನ್ನು ಆಯ್ಕೆ ಮಾಡಲಾಯಿತು.

ತಾಪಂ ಸದಸ್ಯರಾದ ಆರ್. ತಿಪ್ಪೇಶರಾವ್, ಧಮೇಗೌಡ, ಕೆ.ವಿ.ರುದ್ರೇಶ್, ಪ್ರೇಮ್ುಮಾರ್, ಯಶೋಧಮ್ಮ, ತುಂಗಮ್ಮ, ಗೀತಾ ಜಗದೀಶ್, ಲಕ್ಷ್ಮೀದೇವಿ, ಶಬೀನಾಬಾನು, ಮುಖಂಡರಾದ ಎಸ್.ಕುಮಾರ್, ಕರುಣಾಮೂರ್ತಿ ಇತರರಿದ್ದರು.