ಶನಿವಾರಸಂತೆ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ ಸಂಯುಕ್ತಾಶ್ರಯದಲ್ಲಿ ಗುರುವಾರ ಸಂಗಯ್ಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಅರೆಭಾಷೆ ದಿನವನ್ನು ಸರಳವಾಗಿ ಆಚರಿಸಲಾಯಿತು.
ಅರೆಭಾಷೆ ದಿನಾಚರಣೆ ಕುರಿತು ಸಮಾಜದ ಹಿರಿಯ ಅತ್ಯಡಿ ಪೂವಯ್ಯ ಮಾತನಾಡಿ, ಹಲವಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ಅರೆಭಾಷೆ ಸಮುದಾಯದ ಮಾತೃಭಾಷೆಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮಾತನಾಡುವ ಮೂಲಕ ಪ್ರೋತ್ಸಾಹಿಸಿಸಬೇಕು. ಅರೆಭಾಷೆ ಮಾತನಾಡಲು ಗೊತ್ತಿಲ್ಲದ ಸಮುದಾಯದ ಬಾಂಧವರಿಗೆ ಕಲಿಸಿಕೊಡಬೇಕು ಎಂದು ಹೇಳಿದರು.
ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ, ಆಚಾರ ವಿಚಾರಗಳನ್ನು ಸಮುದಾಯದ ಪ್ರತಿಯೊಬ್ಬರೂ ಅನುಸರಿಸುವ ಉದ್ದೇಶದ ಹಿನ್ನೆಲೆಯಲ್ಲಿ ಅಕಾಡೆಮಿ ಸ್ಥಾಪಿಸಲಾಗಿದ್ದು, ಇದರ ನೆನಪಿಗಾಗಿ ಅರೆಭಾಷೆ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಅಧ್ಯಕ್ಷತೆ ವಹಿದ್ದರು. ಗೌರವಾಧ್ಯಕ್ಷ ಭಟ್ಯನ ಈರಪ್ಪ ಮಾತನಾಡಿದರು. ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಸಮಾಜದ ಪ್ರಮುಖರಾದ ನಂಗಾರು ಮೋಹನ್, ಕೆದಂಬಾಡಿ ಮಧು, ಚೀಯಂಡಿ ದೇವಯ್ಯ, ಕುಯುಮುಡಿ ಗಣೇಶ್, ಕೋಟೇರ ಶಿವಾಜಿ ಮುಂತಾದವರು ಇದ್ದರು.