ಬಾಗಲಕೋಟೆ: ಸಮಾಜದಲ್ಲಿ ಮುಂದಿನ ಪಿಳಿಗೆಗೆ ಮಾದರಿ ಸಮಾಜಮುಖಿ ನಾಯಕರ ಅವಶ್ಯಕತೆ ಇದ್ದು, ಸಮಾಜ ಸೇವೆ ಪವಿತ್ರವಾದ ಕೆಲಸವಾಗಿದ್ದು, ಸೇವೆಯಲ್ಲಿ ಪ್ರಾಮಾಣಿಕರ ಅಗತ್ಯತೆ ಇದೆ ಎಂದು ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಗುರನಾಥ ಸ್ವಾಮೀಜಿ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಶನಿವಾರ ಹನಮಂತ ಗೊರವರ ಅವರ ಅಭಿಮಾನಿ ಬಳಗದಿಂದ ನಿವೃತ್ತ ಕೃಷಿ ಅಽಕಾರಿ ಹನಮಂತ ಗೊರವರ ಅವರ ೭೪ನೇ ಜನ್ಮ ದಿನಾಚರಣೆ ನಿಮಿತ್ಯ ಸಜೀವ ಅಂಧ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ಅಂಧ ಮಕ್ಕಳಿಗೆ ಪಠ್ಯಪರಿಕರಗಳ ವಿತರಣೆ ಮಾಡಿ ಅವರು ಮಾತನಾಡಿದರು.
ಮನೆಯಲ್ಲಿ ಹಿರಿಯರಿರಬೇಕು, ಮಠದಲ್ಲಿ ಗುರುಗಳಿರಬೇಕು ಎಂಬ ಆಶಯದಂತೆ, ಒಬ್ಬ ದೂರದೃಷ್ಠಿಯ ನಾಯಕರಿದ್ದಾಗ ಗ್ರಾಮ. ನಗರ. ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಸಹಾಯವಾಗುತ್ತದೆ, ಅದರಂತೆ ಸಮಾಜ ಸೇವೆ ಎನ್ನುವುದು ಪವಿತ್ರವಾದ ಕೆಲಸವಾಗಿದ್ದು, ಇಂಥ ಸೇವೆ ಸಲ್ಲಿಸಲು ಪ್ರಾಮಾಣಿಕರ ಅಗತ್ಯತೆ ಇದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿ, ನಿವೃತ್ತ ಕೃಷಿ ಅಽಕಾರಿಗಳಾದ ಹನಮಂತ ಗೊರವರ ಅವರ ಪ್ರಾಮಾಣಿಕ ಸಮಾಜ ಸೇವೆ ಮೆಚ್ಚುವಂತದ್ದು. ಇಂದು ತಮ್ಮ ಜನ್ಮ ದಿನವನ್ನು ಅಂಧ ಮಕ್ಕಳ ಜೊತೆಗೆ ಆಚರಿಸುತ್ತಿರುವುದು ನಿಜಕ್ಕೂ ಸಮಾಜದಲ್ಲಿ ಅರ್ಥಪೂರ್ಣವಾಗಿದೆ. ಗದುಗಿನ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಸಾಧನೆಯಂತಹ ಜೀವನ ಮೌಲ್ಯಗಳನ್ನು ಅಂಧ ಮಕ್ಕಳ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಡಾ.ಜಿ.ಜಿ.ಹಿರೇಮಠ ಮಾತನಾಡಿ, ಅಂಧ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನೀಡಿ, ಅವರನ್ನು ಉತ್ತಮವಾಗಿ ಪೋಷಿಸಲ್ಪಟ್ಟರೆ ಸಮಾಜದಲ್ಲಿ ಆರೋಗ್ಯವಂತರಾಗಿ ಬೆಳೆದು, ಅವರ ಬದುಕು ಸಂಗೀತ ಮತ್ತು ಸಾಂಸ್ಕೃತಿಕವಾಗಿ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಜೀವ ಅಂಧಮಕ್ಕಳ ವಸತಿಯುತ ಶಾಲೆಯ ಅಧ್ಯಕ್ಷ ಮಲ್ಲಪ್ಪ ಉದಪುಡಿ ಮಾತನಾಡಿ, ನಮ್ಮ ಶಾಲೆಯ ಅಂಧ ಮಕ್ಕಳಿಗೆ ಸರಿಯಾಗಿ ನಿಯಮಿತ ತರಗತಿಗಳನ್ನು ನಮ್ಮ ಶಿಕ್ಷಕರು ಸಮಾಲೋಚನೆ ಮೂಲಕ ತರಗತಿಗಳನ್ನು ಮಾಡುತ್ತಾರೆ. ನಮ್ಮಲ್ಲಿರುವ ಉತ್ತಮ ಶೈಕ್ಷಣಿಕ ವಾತಾವರಣದೊಂದಿಗೆ, ಅಂಧ ಮಕ್ಕಳು ತಮ್ಮ ಜೀವನದ ಮೌಲ್ಯವನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ನಿವೃತ್ತ ಕೃಷಿ ಅಽಕಾರಿ ಹನಮಂತ ಗೊರವರ, ಡಾ.ಸಂಗಮೇಶ ಬ್ಯಾಳಿ, ಸುಖದೇವ, ಸಂಗಮೇಶ ಬಡಿಗೇರ ಸೇರಿದಂತೆ ಇತರರು ಇದ್ದರು.