ಕಲಬುರಗಿ: ಸಮಾಜಮುಖಿ ಚಿಂತನೆಗಳ ಮೂಲಕ ಕಾಯಕ ದಾಸೋಹ ಮಾಡುವುದು ಬಹುಮುಖ್ಯವಾಗಿದೆ. ಸೌಭಾಗ್ಯ ಸಿರಿ ಇಡೀ ಸಮಾಜದ ಸಿರಿಯಾಗಲಿ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಹೇಳಿದರು.
ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಸೌಭಾಗ್ಯ ಸಿರಿ ಸಾಮಾಜಿಕ ಸೇವಾ ಟ್ರಸ್ಟ್’ ಉದ್ಘಾಟನಾ ಹಾಗೂ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸುರೇಶ ಬಡಿಗೇರ ಅವರು ತಂಗಿ ಸೌಭಾಗ್ಯ ಸ್ಮರಣೆಯಲ್ಲಿ ಸಾಮಾಜಿಕ ಕಾರ್ಯ ಮಾಡಲು ಮುಂದಾಗಿರುವುದು ಶ್ಲಾಘಿನೀಯ. ಸಹೋದರಿ ಸೌಭಾಗ್ಯ ಮನೆಯಲ್ಲಿ ಸೌಭಾಗ್ಯ ಲಕ್ಷಿö್ಮÃ, ಶಾಲೆಯಲ್ಲಿ ವಿದ್ಯಾಲಕ್ಷ್ಮೀ ಹಾಗೂ ಸಮಾಜದಲ್ಲಿ ಸೌಭಾಗ್ಯ ಸಿರಿಯಾಗಿದ್ದರು ಎಂದು ಸ್ಮರಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ಅಪ್ಪ- ಅವ್ವ, ಹೆಂಡತಿ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬಹುದು. ಆದರೆ ಅಕ್ಕ-ತಂಗಿಯ ಸ್ಮರಣೆಯಲ್ಲಿ ಟ್ರಸ್ಟ್ ಸ್ಥಾಪಿಸುವುದು ಅಪರೂಪ. ಸಂಸ್ಥೆಯಿAದ ಮಾದರಿ ಕೆಲಸಗಳು ನಡೆಯಲಿ ಎಂದರು.
ಕಸಾಪ ಜಿ¯್ಲÁಧ್ಯP್ಷÀ ವಿಜಯಕುಮಾರ ತೇಗಲತಿಪ್ಪಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿ¯್ಲÁಧ್ಯP್ಷÀ ಬಾಬುರಾವ ಯಡ್ರಾಮಿ ಮಾತನಾಡಿದರು. ಯಳಸಂಗಿ, ಮುತ್ಯಾನ ಬಬಲಾದ್‌ನ ಶ್ರೀ ಗುರುಪಾದಲಿಂಗ ಶಿವಯೋಗಿಗಳು ನೇತೃತ್ವ, ಲೋಕೋಪಯೋಗಿ ಇಲಾಖೆಯ ಗುಣ ನಿಯಂತ್ರಣ ವಿಭಾಗದ ಅಧೀP್ಷÀಕ ಅಭಿಯಂತರ ಡಾ.ಸುರೇಶ ಎಲï. ಶರ್ಮಾ ಅಧ್ಯP್ಷÀತೆ ವಹಿಸಿದ್ದರು.
ಎಚ್‌ಕೆಸಿಸಿ ಮಾಜಿ ಅಧ್ಯP್ಷÀ ಸೋಮಶೇಖರ ಟೆಂಗಳಿ, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ಡಾ.ಅಲ್ಲಮಪ್ರಭು ದೇಶಮುಖ, ರಾಷ್ಟçಪ್ರಶಸ್ತಿ ಪುರಸ್ಕೃತ ಶಿಕ್ಷಕ ದೇವಿಂದ್ರಪ್ಪ ಬಡಿಗೇರ ಇತರರಿದ್ದರು.
ಟ್ರಸ್ಟ್ ಅಧ್ಯP್ಷÀ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ರಾಜಕುಮಾರ ಉದನೂರ ನಿರೂಪಣೆ ಮಾಡಿದರು. ಮಾಲಾ ಕಣ್ಣಿ ಸ್ವಾಗತಿಸಿದರು. ಆಕಾಂಕ್ಷಾ ಪುರಾಣಿಕ ಭರತ ನಾಟ್ಯ ಪ್ರದರ್ಶನ ಮಾಡಿದರು. ಕಲ್ಪನಾ ಗೋಲ್ಡ್ ಸ್ಮಿತ್ ಪ್ರಾರ್ಥಿಸಿದರು. ಪ್ರೊ.ಶಂಕರಪ್ಪ ಹತ್ತಿ ವಂದಿಸಿದರು.
ಸಮಾಜಮುಖಿ ಕಾಯಕ ದಾಸೋಹ ಮುಖ್ಯ
You Might Also Like
ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits
Goat Milk Health Benefits : ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…
ಪೋಷಕರೇ ಹುಷಾರ್! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips
Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…
ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?
ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…