ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮದ್ದು

ವಿಜಯವಾಣಿ ಸುದ್ದಿಜಾಲ ಅಫಜಲಪುರ
ಪ್ರತಿ ಸಮಾಜವು ಸಮಾಜದ ಮುಖ್ಯ ವಾಹಿನಿಯಲ್ಲಿ ಬರಬೇಕಾದರೆ ಎಲ್ಲರೂ ಶಿಕ್ಷಿತರಾಗಬೇಕು. ಇನ್ನು ಎಲ್ಲರೂ ಆರ್ಥಿಕವಾಗಿ ಸಬಲರಾಗಿ, ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯ ಮಾಡಬೇಕು ಎಂದು ಶ್ರೀ ವಿಶ್ವಾರಾಧ್ಯ ಮಳೇಂದ್ರ ಸ್ವಾಮಿಗಳು ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕೋಲಿ (ಗಂಗಾಮತಸ್ಥ) ನೌಕರರ ಸಮಾವೇಶದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಮಾಜ ಸಂಘಟಿತವಾಗಬೇಕಾದರೆ ಪ್ರಜ್ಞೆ ಮತ್ತು ಸ್ವಾರ್ಥ ರಹಿತ ಮನೋಭಾವ ಅವಶ್ಯಕ ಎಂದರು.

ಡಾ. ಮೀನಾಕ್ಷಿ ಬಾಳಿ ಉಪನ್ಯಾಸ ನೀಡಿ, ಹಿಂದುಳಿದ ಸಮುದಾಯದವರು ಮುಂದುವರಿಯಬೇಕಾದರೆ ಶಿಕ್ಷಿತರಾಗಬೇಕು. ಅಂಬಿಗರ ಚೌಡಯ್ಯನವರ ತತ್ವಾದರ್ಶ ಹಾಗೂ ವಿಠ್ಠಲ್ ಹೇರೂರ್ ಅವರ ದಿಟ್ಟತನ ಅಳವಡಿಸಿಕೊಂಡು, ಸಮಾಜ ಮುಖಿಯಾದಾಗ ಸಮಾಜದ ಏಳ್ಗೆ ಸಾಧ್ಯ ಎಂದರು.

ಪ್ರತಿಭಾವಂತ ಮಕ್ಕಳನ್ನು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. 2019ರ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ಶಂಕು ಮ್ಯಾಕೇರಿ ಉದ್ಘಾಟಿಸಿದರು.

ಶ್ರೀ ಶಿವಾನಂದ ಶಿವಾಚಾರ್ಯರು, ಕೋಲಿ ನೌಕರ ಸಂಘದ ಗೌರವಾಧ್ಯಕ್ಷ ದೇವಣ್ಣ ಕಿರಸಾವಳಗಿ, ಪ್ರಮುಖರಾದ ಬಸಣ್ಣ ಹನ್ನೂರ, ಭೀಮಶಾ ತೆಲ್ಲುಣಗಿ, ಬಾಬುರಾವ ಜಮಾದಾರ, ನೀಲಕಂಠ ಜಮಾದಾರ, ಅಣ್ಣಾರಾವ ಅಜಗೊಂಡ, ಶಿವಾನಂದ ಚಿಂಚೋಳಿ, ಭೀಮಾಶಂಕರ ಜಮಾದಾರ, ಪರಮೇಶ್ವರ ಜಮಾದಾರ, ಸೋಮಶೇಖರ ಹಂಚನಾಳ, ಸಾಧಿಕ್ ನಾಗೂರ, ಸಿದ್ದರಾಮ ಗುಣಾರಿ, ಪರಮೇಶ್ವರ ದೇಸಾಯಿ, ಬಸವರಾಜ ನಿಂಬಗರ್ಿ, ದಾದಾಸಾಹೇಬ ಹೊಸುರಕರ, ವಿಶ್ವನಾಥ ಘಂಟೆ, ಸಾಯಬಣ್ಣ ಜಮಾದಾರ, ಇತರರಿದ್ದರು.