ಬಾಗಲಕೋಟೆ: ಎನ್‌ಎಸ್‌ಎಸ್ ಶಿಬಿರಗಳಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಸಮಾಜದೊಂದಿಗೆ ಹೇಗೆ ಮುಖಾಮುಖಿಯಾಗಬೇಕು ಎನ್ನುವುದು ಕಲಿಸಿಕೊಡುತ್ತದೆ ಎಂದು ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಽಕಾರಿಮಾರುತಿ ಪಾಟೋಳಿ ಹೇಳಿದರು.

ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿನಗಳಲ್ಲಿ ಕಲಿಕೆ ಜೊತೆ ಸಮಾಜ, ದೇಶ ಸೇವೆ ಕುರಿತು ಅಭಿಮಾನ ಬೆಳೆಸಿಕೊಳ್ಳಬೇಕು. ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಎನ್‌ಎಸ್‌ಎಸ್‌ನಿಂದ ನಾಯಕತ್ವ ಗುಣ ರೂಢಿಗತವಾಗುತ್ತದೆ ಎಂದರು.
ಪ್ರಾಚಾರ್ಯ ರವಿ ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ಸಕಲ ಸೌಲಭ್ಯ ದೊರೆಯುತ್ತೀವೆ. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು. ನಮ್ಮ ಸುತ್ತಮುತ್ತಲೀನ ಪರಿಸರ, ಸಮಾಜ ಸದೃಢಗೊಳಿಸಲು ಶ್ರಮಿಸಬೇಕು ಎಂದರು.
ಎನ್‌ಎಸ್ ಎಸ್ ಸಂಚಾಲಕ ಪ್ರಶಾಂತ ಪಿ, ಸಹಾಯಕ ಪ್ರಾಧ್ಯಾಪಕಿ ಪವಿತ್ರ ಬಿ. ಸಿ., ವಸತಿ ನಿಲಯದ ಅಽಕಾರಿ ವಿದ್ಯಾವತಿ ಬಿರಾದಾರ, ಗ್ರಂಥಾ ಪಾಲಕ ಸಂಜಯ ಕುಂಬಾರ, ಲಲಿತ ಕರೆಗಾರ ಉಪಸ್ಥಿತರಿದ್ದರು. ಅಶ್ವಿನಿ ಶಿಂಧೆ ಸ್ವಾಗತಿಸಿದರು. ಜಾನಕಿ ಕೊಳಚಿ ವಂದಿಸಿದರು.