ಸಮಸ್ಯೆ ಎದುರಿಸುವ ಜಾಣ್ಮೆ ಬೆಳೆಸಿಕೊಳ್ಳಿ

blank

ಬೆಳಗಾವಿ: ದಶಕಗಳೇ ಕಳೆದರೂ ಗಡಿ ವಿವಾದ ಜೀವಂತವಾಗಿರಲು ಕೇವಲ ಮಹಾರಾಷ್ಟ್ರ ಕಾರಣವಲ್ಲ. ಪೂರ್ವಸಿದ್ಧತೆಗಳಿಲ್ಲದೆ ಮುನ್ನುಗ್ಗುವ ಕರ್ನಾಟಕ ಸರ್ಕಾರದ ಪಾಲೂ ಸೇರಿದೆ ಎಂದು ಕನ್ನಡಪರ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಸಮೀಪದ ಕಣಬರ್ಗಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಡಿ ಪ್ರದೇಶದ ಅಭಿವೃದ್ಧಿ ಹಿನ್ನಡೆಯಲ್ಲಿ ಗಡಿ ವಿವಾದದ ಜೀವಂತಿಕೆಯೂ ಕಾರಣವಾಗಿದೆ. ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ದಿಟ್ಟ ನಿರ್ಧಾರ ಕೈಗೊಳ್ಳದ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತ ಬಂದಿವೆ. ಅಧ್ಯಯನದ ಜತೆಗೆ ಸಂಘಟನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸುವ ಜಾಣ್ಮೆ ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಅಂತಾರಾಷ್ಟ್ರೀಯ ಈಜುಪಟು ರಾಘವೇಂದ್ರ ಅನ್ವೇಕರ್ ಮಾತನಾಡಿ, ಇರುವ ಸೌಲಭ್ಯಗಳಲ್ಲಿಯೇ ಸಾಧನೆ ಮಾಡುವವರೇ ನಿಜವಾದ ಚಾಂಪಿಯನ್. ಹಾಗಾಗಿ, ಯುವಕರು ಹೊಸ ಬೇಡಿಕೆಗಳಿಗೆ ಜೋತು ಬೀಳದೆ ಇರುವ ಸಂಪನ್ಮೂಲಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಜಾಣ್ಮೆ ರೂಢಿಸಿಕೊಳ್ಳಬೇಕು. ವಿಶೇಷವಾಗಿ ಸಮಯಕ್ಕೆ ಬೆಲೆ ಕೊಡುವುದರ ಜತೆಗೆ ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಧನಾತ್ಮಕ ವಿಚಾರ, ವಿಷಯಗಳ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲವನ್ನೂ ನೀಡಿರುವುದಕ್ಕೆ ಪ್ರತಿಯಾಗಿ ದೇಶಕ್ಕಾಗಿ ದುಡಿಯಬೇಕು ಎಂದು ಸಲಹೆ ನೀಡಿದರು. ನಂದನ ಮಕ್ಕಳ ಕೇಂದ್ರದ ಸಂಚಾಲಕಿ ಕಸ್ತೂರಿ ಬಂಗೇರ್ ಅವರನ್ನು ಸನ್ಮಾನಿಸಲಾಯಿತು. ವಿಸ್ತರಣಾಧಿಕಾರಿ ಕೆ.ಡಿ.ದೇವಪ್ಪಗೋಳ, ನಿಲಯಪಾಲಕರಾದ ಆರ್.ಎಂ.ಗುರವ, ಕೆ.ಡಿ.ಬಂಗಿ, ರಾಜು ಬಂಗೋಡಿ, ಅನಿತಾ ದಜಿ ಇತರರು ಉಪಸ್ಥಿತರಿದ್ದರು. ಬಸವರಾಜ ಹಡಪದ, ರಾಘವೇಂದ್ರ ಗಡಗಡಿ ನಿರೂಪಿಸಿದರು.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…