ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಔರಾದ್ ಗ್ರಾಮೀಣ
ರೈತರು ಕೃಷಿಯಲ್ಲಿ ಒಂದೇ ಬೆಳೆಗೆ ಸೀಮಿತವಾಗದೇ ಸಮಗ್ರ ಬೇಸಾಯ ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬಹುದು ಎಂದು ಸಂತಪುರ ಜಿಪಂ ಸದಸ್ಯ ಅನೀಲ ಬಿರಾದಾರ ಹೇಳಿದರು.

ನಾಗೂರ(ಎಂ) ಗ್ರಾಮದ ಯುವ ರೈತ ಬಾಲಾಜಿಯವರ ತೋಟದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ರಿಲಾಯನ್ಸ್ ಫೌಂಡೇಷನ್ ಬಸವೇಶ್ವರ ರೈತ ಸಂಘದ ಸಹಯೋಗದಲ್ಲಿ ತರಕಾರಿ ಬೆಳೆಯಲ್ಲಿ ಸುಧಾರಿತ ಬೇಸಾಯ ಪದ್ಧತಿ ಕುರಿತ ಒಂದು ದಿನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳು ಬಳಕೆ ಮಾಡುತ್ತಿರುವುದರಿಂದ ಗುಣಮುಕ್ತ ಆಹಾರದ ಕೊರತೆ ಅನುಭವಿಸುವಂತಾಗಿದೆ. ಸಾವಯವ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿ ಗುಣಮಟ್ಟದ ತರಕಾರಿ ಬೆಳೆಗಳನ್ನು ಬೆಳೆದು ಸೇವೆನೆ ಮಾಡಿ ಸದೃಢ ಆರೋಗ್ಯ ಪಡೆಯಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಆರ್ ಎಲ್ ಜಾಧವ್ ಮಾತನಾಡಿ, ಭೂಮಿಯಲ್ಲಿ ಸಾರಜನಕ, ರಂಜಕ, ಕಬ್ಬಿಣ್ಣದಂತಹ ಪೋಷಕಾಂಶಗಳ ಕೊರತೆಯಿಂದ ರೈತರು ಬೆಳೆದ ತರಕಾರಿ ಬೆಳೆಗಳು ಹೆಚ್ಚಿನ ಇಳುವರಿ ನೀಡುತ್ತಿಲ್ಲ, ರೈತರುಗಳು ಕೊಟ್ಟಿಗೆ ಗೊಬ್ಬರ ಹಾಗೂ ಸಾವಯವ ಗೊಬ್ಬರದ ಉಪಯುಕ್ತತೆ ಮಾಡಿಕೊಂಡು ಸಮಗ್ರ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿ ಮಹಾಂತೇಶ .ಶೆಂಬೆಳ್ಳಿ ಸರ್ಕಾರಿ ಶಾಲೆ ಮುಖ್ಯಗುರು ಶಾಂತಪ್ಪ ವಾಲಿಕಾರ್ ಮಾತನಾಡಿದರು. ಡಾ. ಆರ್. ಎಲ್ ಜಾಧವ್, ಗ್ರಾಪಂ ಅಧ್ಯಕ್ಷ ಘಾಳರೆಡ್ಡಿ, ಧರ್ಮಸ್ಥಳದ ಯೋಜನಾಧಿಕಾರಿ ಮಹಾಂತೇಶ, ಶಾಂತಪ್ಪ ವಾಲಿಕಾರ್, ಗಣಪತಿ ಧನಗರ್, ಸಂಜು ಶೆಂಬೆಳ್ಳಿ, ಪ್ರೀಯಾಂಕಾ, ಝರೆಪ್ಪ ಬಂಗಾರೆ, ಭೂದೇವಿ, ಕುಶೆಲ್ ಮಾನುರೆ, ರಾಜೆಪ್ಪ, ನೀಲಮ್ಮ, ಸುಶಿಲಮ್ಮ, ಹರ್ಷದ್, ರವೀಂದ್ರ ಹಾಗೂ ಬೋಗರ್ಿ(ಜೆ), ಖಾಶೆಂಪುರ, ಶೆಂಬೆಳ್ಳಿ, ಸಂತಪುರ, ನಂದಿನಾಗೂರ, ಜೋಜನಾ, ಚಿಕಲಿ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಭುಶೆಟ್ಟಿ ಸೈನಿಕಾರ್ ನಿರೂಪಣೆ ಮಾಡಿದರು. ಮಾರುತಿ ಸ್ವಾಗತಿಸಿದರು. ಬಾಲಾಜಿ ಮೇತ್ರೆ ವಂದಿಸಿದರು.

Leave a Reply

Your email address will not be published. Required fields are marked *