ಬೇಲೂರು: ಪಟ್ಟಣಕ್ಕೆ ಸಮೀಪದ ಸನ್ಯಾಸಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಅವ ಜೆಡಿಎಸ್ ಬೆಂಬಲಿಗ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಎದುಾಳಿ ತಂಡಕ್ಕೆ ಬಾರಿ ಹೊಡೆತ ನೀಡಿದೆ.
ಸಂಘದ 12 ನಿರ್ದೇಶಕ ಸ್ಥಾನದ 5 ವರ್ಷದ ಅವಧಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ 11 ಸ್ಥಾನವನ್ನು ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಅವು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸಿಕೊಳ್ಳುವ ಮೂಲಕ ಮತ್ತೆ ಸಹಕಾ ಸಂಘದ ಆಡಳಿತವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ವೇಳೆ ಬಿ.ಡಿ.ಚಂದ್ರೇಗೌಡ ಮಾತನಾಡಿ, ಚುನಾವಣೆಯಲ್ಲಿ ಷೇುದಾರರು ಜೆಡಿಎಸ್ ಪಕ್ಷದ ಪರ 11 ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವೆಲ್ಲರಿಗೂ ನಾನು ಮತ್ತು ತಂಡ ಅಭಿನಂದನೆ ಸಲ್ಲಿಸುತ್ತೇವೆ. ಜತೆಗೆ ಸಂಘವನ್ನು ನಡೆಸುವಂತೆ ಮತ್ತೊಮ್ಮೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಮತದಾರರ ನಂಬಿಕೆಯಂತೆ ಎಲ್ಲ ನಿರ್ದೇಶಕರ ಸಹಕಾರದಿಂದ ಉತ್ತಮ ಆಡಳಿತ ನೀಡಲು ಮುಂದಾಗಲಿದ್ದೇವೆ ಎಂದರು.
ಸಂಘಕ್ಕೆ ನೂತನವಾಗಿ ನಿರ್ದೇಶಕರಾಗಿ ಎಂ.ಡಿ.ಬಸವಾಜು, ಪ್ರಸಾದಿಹಳ್ಳಿ ಚಂದು, ಚಿಕ್ಕೊಲೆ ಕಾಂತಾಜು, ಸಿ.ಎಚ್.ಲೋಕೇಶ್, ಹಿರಿಕೊಲೆ ಕಾಂತಾಜು, ಹೊನ್ನಯ್ಯ, ಪುಷ್ಪಕುಮಾರ್, ಪಂಕಜಾ, ಅಣ್ಣಪ್ಪ, ಪುಟ್ಟನಾಯಕ್ ಆಯ್ಕೆಯಾದು. ಈ ಸಂದರ್ಭ ಪುಸಭೆ ಸದಸ್ಯ ಜಗದೀಶ್, ಮುಖಂಡಾದ ಪ್ರಸಾದಿಹಳ್ಳಿ ಯದುಕುಮಾರ್, ಶಾಂತಗೌಡ, ಮಾಳೆಗೆೆ ಕುಮಾರ್, ಪರಶುರಾಮ್, ಚಂದ್ರೇಗೌಡ ಇತರರಿದ್ದರು.