ಸನ್ಮಾನ ಸ್ವೀಕರಿಸಿ ಸಂಭ್ರಮಿಸಿದ ಸಾಧಕರು

ಧಾರವಾಡ: ಇಲ್ಲಿನ ಕೃಷಿ ವಿವಿ ಆವರಣದಲ್ಲಿರುವ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿವಿ ಕುಲಪತಿ ಡಾ.ಪ್ರಮೋದ ಗಾಯಿ ಸಾಧಕರನ್ನು ಸನ್ಮಾನಿಸಿದರು.

ವಿದ್ವಾನ್ ಆರ್.ಕೆ.ಪದ್ಮನಾಭ, ಸ.ನ.ವಿಶ್ವೇಶ್ವರಯ್ಯ, ವೆಂಕಪ್ಪ ಸುಗತೇಕರ, ಸುಂದ್ರಪ್ಪ ಪಿ., ಡಿ.ಎನ್.ಹರಿದಾಸ್, ಡಿ.ಪ್ರಕಾಶ, ರಂಗನಾಥ ರಾಮಚಂದ್ರರಾವ್, ವಿರೂಪಾಕ್ಷಪ್ಪ ಪೂಲಭಾವಿ, ಎನ್.ಎಚ್.ರಾಜು, ಕೆ.ರಘುರಾಂ, ಮಲ್ಲಣ್ಣ, ಸಿದ್ಧರಾಮ ಸಾತಲಗಾಂವ, ಹರಿದಾಸ ಬಿ.ಸಿ.ರಾವ್, ಪೊ›.ಎಸ್.ಆರ್.ದೇವಪ್ರಕಾಶ್, ಹ.ಮಾ.ರಾಮಚಂದ್ರ, ಚಿನ್ನಪ್ಪ ಮುರಿಗೆಪ್ಪ ಋಣೇದ, ಸಿದ್ದಪ್ಪ ನೇಗಿಲಾಲ, ಪ್ರೇಮಕ್ಕ ಅಂಕದಕಟ್ಟಿ, ಪಾಲಾಕ್ಷ ಖಾಣದ, ಡಾ.ಟಿ.ಕೆ.ಕೆಂಪೇಗೌಡ, ಡಾ.ವಿ.ಸಿ.ಐರಸಂಗ, ಎಂ.ಸತೀಶಕುಮಾರ್, ಇದ್ದಿಲ ನಾರಾಯಣರೆಡ್ಡಿ, ಚಂದ್ರಕಾಂತ ಎನ್.ಭಂಡಾರಿ, ಮಾಂಖಾಡಿ ಸುಬ್ರಹ್ಮಣ್ಯ ಭಟ್, ಶಾರದಾ ಭಟ್ಟ, ವಿಷ್ಣು ಅಸ್ರ.ಯು., ಬಿ.ಎಂ.ತಿಪ್ಪೇರುದ್ರಸ್ವಾಮಿ, ನಾಗೇಶಕುಮಾರ ಸಿ.ಎಸ್., ಮಹಾಂತೇಶ ಗಜೇಂದ್ರಗಡ, ಕೆ.ಪಿ.ಹೆಗ್ಡೆ, ಐ.ಕೆ.ಕಮ್ಮಾರ, ಡಿ.ಎಸ್.ಗುಡ್ಡೋಡಗಿ ಹಾಗೂ ಟಿ.ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಹಾಗೂ ಅಂಕಣಕಾರ ಎಸ್.ಷಡಕ್ಷರಿ ಮಾತನಾಡಿ, ವಿವಿಧ ಕ್ಷೇತ್ರಗಳ ಸಾಧಕರಾದ ನೀವೆಲ್ಲ ಮೇರುಸ್ಥಾನದಲ್ಲಿದ್ದೀರಿ. ಯುವಕರಿಗೆ ನೀವು ಮಾರ್ಗದರ್ಶನ ಮಾಡಬೇಕೆಂದರು. ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಇತರರಿದ್ದರು.