ಎನ್.ಆರ್.ಪುರ: ವಿಶ್ವ ದಾದಿಯರ ದಿನಾಚರಣೆ ಪ್ರಯುಕ್ತ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಬಸ್ ನಿಲ್ದಾಣದ ಎದುರು ಭಾಗದ ವಿಜಯ ಕ್ಲಿನಿಕ್‌ನಲ್ಲಿ ಶುಶ್ರೂಷಕಿ ಶಿಬಿ ಎಲಿಯಾಸ್ ಅವರನ್ನು ಸನ್ಮಾನಿಸಲಾಯಿತು.

ವಿಜಯ ಕ್ಲಿನಿಕ್‌ನ ಡಾ. ಶಿವಕುಮಾರ್ ಮಾತನಾಡಿ, ಜೇಸಿ ಸಂಸ್ಥೆ ವೈದ್ಯಕೀಯ ಸೇವೆ ಗುರುತಿಸಿ ಆಸ್ಪತ್ರೆಯ ದಾದಿಯನ್ನು ಗೌರವಿಸುತ್ತಿರುವುದು ನಮಗೆ ಹೆಮ್ಮೆಯಾಗಿದೆ. ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುವವರನ್ನು ಇದೇ ರೀತಿ ಜೇಸಿ ಪ್ರೋತ್ಸಾಹಿಸಲಿ ಎಂದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ್ ಗೌಡ ಮಾತನಾಡಿ, ಈ ವರ್ಷ ಜೇಸಿಯಿಂದ ಸಾರ್ಥಕತೆಯತ್ತ ಜೇಸಿ ಎಂಬ ಶೀರ್ಷಿಕೆಯಡಿ ಸಮಾಜದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಸೀನಿಯರ್ ಜೇಸಿ ಇಂಟರ್ ನ್ಯಾಷನಲ್‌ನ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್, ಮಿಥುನ್ ಗೌಡ, ಅಪೂರ್ವ ರಾಘು, ದರ್ಶನಾಥ್, ಪವನ್, ಜೋಯಿ, ಸುಹಾಸ್, ಜೀವನ್, ಪ್ರೀತಂ, ಆದರ್ಶ ಇದ್ದರು.