ಕಲಬುರಗಿ: ಬೌದ್ಧ ಧಮ್ಮದ ಪವಿತ್ರ ಕ್ಷೇತ್ರವಾಗಿರುವ ಸನ್ನತಿ ಸೇರಿ ಸುತ್ತಲಿನ ಬೌದ್ಧ ಕೇಂದ್ರಗಳ ಅಭಿವೃದ್ಧಿಗೆ ಆಗ್ರಹಿಸಿ ಬೆಂಗಳೂರಿನವರೆಗೆ ಹಮ್ಮಿಕೊಂಡ ಪಾದಯಾತ್ರೆಗೆ ಜಾತ್ಯಾತೀತ, ಪಕ್ಷಾತೀತ ಬೆಂಬಲ ನೀಡಬೇಕು ಎಂಬ ಒತ್ತಾಸೆ ವ್ಯಕ್ತಪಡಿಸಲಾಯಿತು.
ನಗರದ ಜಿ¯್ಲÁ ವಿe್ಞÁನ ಕೇಂದ್ರದಲ್ಲಿ ಬೌದ್ಧ ಸಂಘಟನೆಗಳು ಭಾನುವಾರ ಹಮ್ಮಿಕೊಂಡ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು, ಪಾದಯಾತ್ರೆ ಯಶಸ್ವಿಗೆ ಶ್ರಮಿಸಲು ಮನವರಿಕೆ ಮಾಡಿದರು.
ಬಿಕ್ಕು ಹಾಗೂ ಬಿಕ್ಕುಣಿ ಸಂಘ ಮತ್ತು ಭಾರತೀಯ ಬೌದ್ಧ ಮಹಾಸಭಾ, ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ದಲಿತಪರ ಇತರೆ ಎಲ್ಲ ಸಂಘಟನೆಗಳು, ರಾಜ್ಯದ ಎಲ್ಲ ಬುದ್ಧ ವಿಹಾರ ಸಂಸ್ಥೆಗಳು ಮತ್ತು ಬೌದ್ಧ ಉಪಾಸಕ, ಉಪಾಸಿಕಾ ಬಂಧುಗಳ ಆಶ್ರಯದಲ್ಲಿ ಸನ್ನತಿಯಿಂದ ನ.೧೫ರಿಂದ ಹಮ್ಮಿಕೊಂಡ ಪಂಚಶೀಲ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಬಿಕ್ಕುಗಳು, ಬೌದ್ಧ ಉಪಾಸಕರು ಮಾತನಾಡಿದರು.
ಸನ್ನತಿ ಅಭಿವೃದ್ಧಿಗೆ ಆಗ್ರಹಿಸಿ ಹಾಗೂ ಬೌದ್ಧ ಸಮುದಾಯದ ಸರ್ವಾಂಗೀಣ ಪ್ರಗತಿಗೆ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಆಗ್ರಹಿಸಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಪಾದಯಾತ್ರೆಯ ನೇತೃತ್ವವನ್ನು ಬೋದತ್ತ ಥೇರೊ ಬಂತೇಜಿ ವಹಿಸಲಿz್ದÁರೆ. ಸನ್ನತಿಯಿಂದ ಬೆಂಗಳೂರುವರೆಗೆ ಸುಮಾರು ೮೦೦ ಕಿಮೀ ಕ್ರಮಿಸಲಿದ್ದು ಎಲ್ಲರೂ ಸಹಕರಿಸಬೇಕು ಎಂದು ಕೋರಲಾಯಿತು.
ಪೂಜ್ಯ ವರಜ್ಯೋತಿ ಭಂತೇಜಿ ಮಾತನಾಡಿ, ಜಾಗತಿಕ ಪಾರಂಪರಿಕ ಸ್ಥಳಗಳ ಸನ್ನತಿಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತಿಂಗಳಾನುಗಟ್ಟಲೆ ನಡೆಯುವ ಈ ಪಾದಯಾತ್ರೆಗೆ ಒಗ್ಗೂಡಬೇಕು ಎಂದರು.
ಕಾರ್ಯಕ್ಕೆ ತ್ಯಾಗದ ಜನರು ಬೇಕು. ತೆಲಂಗಾಣ, ಅಮರಾವತಿಯಲ್ಲಿ ಅಭಿವೃದ್ಧಿಯಾಗಿದೆ. ಸನ್ನತಿಯಾಗಿಲ್ಲ. ಸಂಪೂರ್ಣ ಸಿದ್ಧತೆ ಮಾಡಿಕೊಂಡು ಬದ್ಧತೆಯಲ್ಲಿ ಕೆಲಸ ಮಾಡಿದಾಗ ಯಶಸ್ವಿಯಾಗಲಿದೆ. ಪಾದಯಾತ್ರೆಯಲ್ಲಿ ಆರ್ಥಿಕ ಸಂಪನ್ಮೂಲಕ್ಕಿAತ ಮಾನಸಿಕವಾಗಿ ಸಿದ್ಧಗೊಳ್ಳಬೇಕು ಎಂದರು.
ಬೋದತ್ತ ಬಂತೇಜಿ ಥೇರೊ ಮಾತನಾಡಿ, ಪಾದಯಾತ್ರೆಯಲ್ಲಿ ಉಪಾಸಕರ ವಸತಿ-ಊಟದ ವ್ಯವಸ್ಥೆ ನೋಡಿಕೊಳ್ಳಬೇಕು. ಭಂತೇಜಿಗಳಿಗಿAತ ಉಪಾಸಕರ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.
ಬೋದತ್ತ ಬಂತೇಜಿ ಥೇರೊ ಸಾನ್ನಿಧ್ಯವಹಿಸಿದ್ದರು. ಸೂರ್ಯಕಾಂತ ನಿಂಬಾಳಕರ್, ಮರೆಪ್ಪ ಹಳ್ಳಿ, ನೀಲಕಂಠ ಬಡಿಗೇರ, ಹಣಮಂತ ಮಸ್ಕಲ್, ಶ್ರೀರಂಗ ಭರತ್, ರಾಘವೇಂದ್ರ ಪರತಾಬಾದ್, ಸುರೇಶ ಕಾನೇಕರ್, ಲಕ್ಷ್ಮಣ ಸೋನಕಾಂಬಳೆ, ಮರೆಪ್ಪ ಬುಕ್ಕಲ್, ಸುರೇಶ ಮೆಂಗನ್, ವಿಕ್ರಂ, ಹಣಮಂತ ಯಳಸಂಗಿ, ಸಂದೀಪ ಕಟ್ಟಿಮನಿ, ಕಪಿಲ್ ಧನ್ನಿ ಇತರರಿದ್ದರು.
ಒಂಬತ್ತು ಜಿಲ್ಲೆಗಳ ಸಂಪರ್ಕ: ಪಂಚಶೀಲ ಪಾದಯಾತ್ರೆಯೂ ಒಂಬತ್ತು ಜಿಲ್ಲೆಗಳನ್ನು ಸಂಪರ್ಕಿಸಲಿದೆ. ಪಾದಯಾತ್ರೆ ಮಾರ್ಗದುದ್ದಕ್ಕೂ ವಸತಿ ಇರುವಲ್ಲಿ ಬುದ್ಧ ಧಮ್ಮದ ಬಗ್ಗೆ ಜಾಗೃತಿ ನಡೆಯಲಿದೆ. ಭಗವಾನ್ ಬುದ್ಧರ ಅಸ್ತಿ ಕಲಶ, ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯ ಟ್ಯಾಬ್ಲೋ ಯಾತ್ರೆಯಲ್ಲಿ ಇರಲಿದೆ. ಸನ್ನತಿ ಅಭಿವೃದ್ಧಿ ನಿಗಮ ಸ್ಥಾಪನೆ, ಅಶೋಕ ಸನ್ನತಿ ಉತ್ಸವ ಆರಂಭಿಸಬೇಕು, ಸನ್ನತಿ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು, ಬುದ್ಧ ಪೂರ್ಣಿಮೆ ದಿನ ರಜೆ ಘೋಷಿಸಬೇಕು, ಸನ್ನತಿ ಶಿಲಾಶಾಸನಗಳನ್ನು ರಕ್ಷಿಸಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿ. ಸಮಾರೋಪ ಸಮಾರಂಭವನ್ನು ಸನ್ನತಿಯಲ್ಲಿ ಮಾಡಲಾಗುವುದು ಎಂದು ಸೂರ್ಯಕಾಂತ ನಿಂಬಾಳಕರ್ ತಿಳಿಸಿದರು.