Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸದುದ್ದೇಶಗಳಿಗೆ ಸಾಲ

Monday, 27.03.2017, 8:54 AM       No Comments

ಜೀವನ ನಿರ್ವಹಣೆಯಲ್ಲಿ ಹಣಕಾಸು ಜವಾಬ್ದಾರಿಗಳನ್ನು ನಿಭಾಯಿಸಲು ಉಳಿತಾಯದ ಮೊತ್ತವು ಸಾಕಾಗದಿರಬಹುದು. ಅಂತಹ ಸಂದರ್ಭಗಳಲ್ಲಿ ಸಾಲ ಮಾಡಿ ಉದ್ದೇಶ ಈಡೇರಿಸಿಕೊಳ್ಳುವುದು ಅನಿವಾರ್ಯ. ಮೊದಲೆಲ್ಲ ಸಾಲ ಮಾಡಲು ಜನ ಹಿಂಜರಿಯುತ್ತಿದ್ದರು. ಏಕೆಂದರೆ ಈಗಿನಷ್ಟು ಸುಲಭದಲ್ಲಿ ಸಾಲ ಸೌಲಭ್ಯವಿರಲಿಲ್ಲ. ಏನಿದ್ದರೂ ತಮ್ಮ ಊರಲ್ಲಿರುವ ಖಾಸಗಿ ಲೇವಾದೇವಿದಾರರಲ್ಲಿ ಅಥವಾ ಚಿನ್ನ ಅಡವಿಟ್ಟು ಸಾಲ ಪಡೆಯಬೇಕಾಗಿತ್ತು. ಅಲ್ಲದೆ ಯಾವುದೇ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕ್​ಗಳು ಸಾಲ ನೀಡುತ್ತಿರಲಿಲ್ಲ. ಆದರೆ ಕಾಲ ಬದಲಾಗಿದೆ ಹಾಗೂ ಆರ್ಥಿಕ ಉದಾರೀಕರಣದಿಂದ ಸಾಲ ನೀಡಲು ಬ್ಯಾಂಕ್ ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮನೆ ಬಾಗಿಲಿಗೇ ಬರುತ್ತಿವೆ.

ನಮ್ಮ ದೇಶದಲ್ಲಿ ಹಣಕಾಸಿನ ಒಳಹರಿವು ಹೆಚ್ಚಿದ ಕಾರಣ ಹಾಗೂ ಜನಸಾಮಾನ್ಯರಲ್ಲೂ ಖರೀದಿಸುವ ಸಾಮರ್ಥ್ಯ ಹೆಚ್ಚಾಗಿದೆ. ಹಾಗಾಗಿ ವೈಯಕ್ತಿಕ ಸಾಲ, ಉದ್ಯಮ ಸಾಲ, ಗೃಹ ಸಾಲ, ಶೈಕ್ಷಣಿಕ ಸಾಲ, ಕೃಷಿ ಸಾಲ, ವಾಹನ ಸಾಲ, ಗೃಹೋಪಯೋಗಿ ವಸ್ತುಗಳಿಗೆ ಸಾಲ ಹಾಗೂ ಪ್ರವಾಸ ಕೈಗೊಳ್ಳಲು ಸಾಲ. ಹೀಗೆ ಹಲವು ಬಗೆಯ ಸಾಲಗಳು ಅವರವರ ವೈಯಕ್ತಿಕ ಆದಾಯಕ್ಕೆ ಅನುಗುಣವಾಗಿ ಹಣಕಾಸು ಸಂಸ್ಥೆಗಳು ನೀಡುತ್ತಿವೆ.

ಕೃಷಿ ಸಾಲ: ಇಂದು ಕೃಷಿಯನ್ನು ಉತ್ತೇಜಿಸಲು ಹಾಗೂ ರೈತರು ಖಾಸಗಿ ಸಾಲಗಾರರ ಮೊರೆ ಹೋಗದಿರಲು ಸರ್ಕಾರವು ಹಲವು ರೀತಿಯ ಸಾಲಗಳ ನೆರವನ್ನು ರೈತರಿಗೆ ನೀಡಿದೆ.ಅಂತಹ ಸಾಲ ಸೌಲಭ್ಯಗಳನ್ನು ಅರಿತು ರೈತರು ಪಡೆಯುವುದು ಒಳ್ಳೆಯದು. ಸರ್ಕಾರಗಳು ಕನಿಷ್ಠ ಬಡ್ಡಿ ದರ ವಿಧಿಸುವ ಕಾರಣ ರೈತರಿಗೆ ನೆರವಾಗಿದೆ.

ಗೃಹ ಸಾಲ: ಪ್ರತಿಯೊಬ್ಬರಿಗೆ ತಮ್ಮ ಜೀವಮಾನದಲ್ಲಿ ಸ್ವಂತ ಮನೆ ಹೊಂದುವ ಕನಸು ಇರುವುದು ಸಹಜ. ಈ ಸದುದ್ದೇಶ ಈಡೇರಿಸಲು ಸರ್ಕಾರ ಆದಾಯ ತೆರಿಗೆಯಲ್ಲಿ ವಿನಾಯಿತಿ ಹಾಗೂ ಕಡಿಮೆ ಬಡ್ಡಿದರ ನಿಗದಿಗೊಳಿಸಿದೆ. ಕಾರಣ ಹಲವಾರು ಬ್ಯಾಂಕಗಳು ಹಾಗೂ ಗೃಹ ಸಾಲ ನೀಡುವ ಹಣಕಾಸು ಸಂಸ್ಥೆಗಳು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ.

ಶೈಕ್ಷಣಿಕ ಸಾಲ: ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಆದರೆ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ತಗಲುವ ವೆಚ್ಚ ಭರಿಸಲು ಅಶಕ್ತರೆನಿಸಿದರೆ, ಶೈಕ್ಷಣಿಕ ಸಾಲ ಪಡೆದು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಬಹುದು. ಸರ್ಕಾರವೂ ಸಹಿತ ಶೈಕ್ಷಣಿಕ ಸಾಲಕ್ಕೆ ಉತ್ತೇಜನ ನೀಡುತ್ತಿದೆ.

ಉದ್ಯಮ ಸಾಲ: ಹೊಸ ಉದ್ಯಮಗಳನ್ನು (ಸ್ಟಾರ್ಟಪ್) ಉತ್ತೇಜಿಸಲು ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್​ಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿದೆ. ಉದ್ಯಮವನ್ನು ಬೆಳೆಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಉದ್ಯಮ ಸಾಲ ಪಡೆಯಲು ಆಲೋಚಿಸಬಹುದು.

ವಾಹನ ಸಾಲ: ಈಗಿನ ದಿನಗಳಲ್ಲಿ ವಾಹನವನ್ನು ಹೊಂದುವುದು ಅನಿವಾರ್ಯವಾಗಿದೆ. ವಾಹನ ಸಾಲ ನೀಡಲು ಬಹಳಷ್ಟು ಹಣಕಾಸು ಸಂಸ್ಥೆಗಳು ಮುಂದೆ ಬರುತ್ತಿವೆ. ಆದರೆ ವಾಹನದ ಅವಶ್ಯಕತೆ, ನಿರ್ವಹಣೆಯ ಬಗ್ಗೆ ಅರಿತು ಪಡೆಯುವುದು ಒಳ್ಳೆಯದು.

ಗೃಹೋಪಯೋಗಿ ವಸ್ತುಗಳ ಸಾಲ: ಆಧುನಿಕತೆ ಬೆಳೆದಂತೆ ಗೃಹ ಬಳಕೆಯ ವಸ್ತುಗಳಿಗೆ ಬಹಳಷ್ಟು ಬೇಡಿಕೆ ಇದೆ. ಗ್ರಾಹಕರನ್ನು ಸೆಳೆಯಲು ಸುಲಭದ ಇಎಂಐಗಳಲ್ಲಿ ಗ್ರಾಹಕ ವಸ್ತುಗಳು ದೊರೆಯುತ್ತಿರುವುದು ಇದಕ್ಕೆ ಕಾರಣ. ಉಪಯುಕ್ತತೆ ಅರಿತು ಇಂತಹ ಸಾಲ ಪಡೆಯುವುದು.

ಕ್ರೆಡಿಟ್ ಕಾರ್ಡ್ ಸೌಲಭ್ಯ: ವ್ಯಕ್ತಿಯ ಆದಾಯಕ್ಕನುಗುಣವಾಗಿ ವಿವಿಧ ಬ್ಯಾಂಕ್​ಗಳು, ಈಗಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್​ಗಳನ್ನು ನೀಡುತ್ತಿವೆ. ಇದನ್ನು ಬಳಸಿ ತಮ್ಮ ಬಳಿ ಹಣವಿಲ್ಲದಿದ್ದರೂ, ವಸ್ತುಗಳನ್ನು ಖರೀದಿಸಬಹುದು. ಆದರೆ ಆಯಾ ಕ್ರೆಡಿಟ್ ಕಾರ್ಡ್ ಕಂಪನಿಗಳು ನೀಡಿದ ಅವಧಿಯೊಳಗೆ ಅದರ ಮೂಲಕ ಖರ್ಚು ಮಾಡಿದ ಹಣವನ್ನು ಮರುಪಾವತಿಸಿದರೆ ಒಳ್ಳೆಯದು. ತಪ್ಪಿದರೆ ದುಬಾರಿ ಹಣ ಮರುಪಾವತಿಸಬೇಕಾದೀತು.

ಒಟ್ಟಾರೆಯಾಗಿ ಸಾಲವನ್ನು ಪಡೆದು ಸರಿಯಾದ ಕೆಲಸಕ್ಕೆ ವಿನಿಯೋಗಿಸಿ ನಿಗದಿತ ಅವಧಿಯೊಳಗೆ ಮರುಪಾವತಿಸಿ ಸಾಲದಿಂದ ಮುಕ್ತರಾಗುವುದು ಒಳ್ಳೆಯದು.

Leave a Reply

Your email address will not be published. Required fields are marked *

Back To Top