More

  ಸತ್ಸಂಗದಿಂದ ಜ್ಞಾನೋದಯ ಸಾಧ್ಯ – ಬಸವ ಜಯಮೃತ್ಯುಂಜಯ ಸ್ವಾಮೀಜಿ


  ಕೊಟ್ಟಲಗಿ: ಮಹಾತ್ಮರ ಸತ್ಸಂಗದಲ್ಲಿ ಪಾಲ್ಗೊಂಡು ಶ್ರದ್ಧಾ, ಭಕ್ತಿ, ಜ್ಞಾನದ ಅನುಭವವನ್ನು ಪಡೆದು ಗುರುವಿಗೆ ಶರಣಾಗಬೇಕು. ಮಠ-ಮಂದಿರಗಳಲ್ಲಿನ ಪ್ರಸಾದ ಕೆಡಿಸದೆ ದೇವರ ಪ್ರಸಾದವೆಂದು ಸ್ವೀಕರಿಸಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

  ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ದೇವರ ಆರಾಧನಾ ಮಹೋತ್ಸವದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

  ಆಸ್ತಿ, ಅಂತಸ್ತು, ಸಂಪತ್ತಿಗೆ ಆಸೆ ಮಾಡದೆ ಭಕ್ತಿ, ಭಾವದಿಂದ ದುಡಿಯಬೇಕು. ಜೀವನದ ಸಂಸಾರದ ಬಂಡಿ ಸಾಗಲೆಂದು ನಿಸ್ವಾರ್ಥ ಸೇವೆಯಿಂದ ದುಡಿದರೆ ಜೀವನದಲ್ಲಿ ಗುರುವಿನಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಕಾಯಕ, ದಾಸೋಹ, ಪ್ರಸಾದ ತತ್ತ್ವಗಳ ಮೂಲಕ ಕಾಯಕ ಮಾಡಬೇಕು ಎಂದರು.

  ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಭಗವಂತ ಕೊಟ್ಟ ಈ ಶರೀರವು ಅಪರೂಪದ ಕಾಣಿಕೆ. ಶರೀರದ ಇಂದ್ರೀಯಗಳು ಪವಿತ್ರವಾದರೆ ದೇವರಲ್ಲಿ ನಾವು ಮುಕ್ತಿ ಪಡೆದಂತೆ. ಇಂದ್ರೀಯಗಳನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು ಎಂದರು.

  ಕಕಮರಿಯ ಅಭಿನವ ಗುರುಲಿಂಗ ಸ್ವಾಮೀಜಿ, ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ, ಕಾಗವಾಡದ ಯತೀಶಾನಂದ ಸ್ವಾಮೀಜಿ, ಸವಿತಾನಂದ ಸ್ವಾಮೀಜಿ, ಅನ್ನಪೂರ್ಣಾ ತಾಯಿ, ಸಿದರಾಯ ಯಲಡಗಿ, ಅಪ್ಪಸಾಬ ಬಿರಾದಾರ, ರವಿ ಸಂಕ, ಗುರುಬಸು ಬಂಡಗರಗೋಟ್ಟಿ, ಗುರು ಮುಗ್ಗನ್ನವರ ಇತರರು ಇದ್ದರು. ಮಹೇಶ ಬಂಡರಗೊಟ್ಟಿ ಸ್ವಾಗತಿಸಿ, ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts