ಸತ್ಯಪ್ರಮೋದರ ಜನ್ಮಶತಮಾನೋತ್ಸವ

ಬೆಂಗಳೂರು: ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿಮಠದ ಯತಿಗಳಾಗಿದ್ದ ಶ್ರೀ ಸತ್ಯಾಭಿಜ್ಞತೀರ್ಥರು ಮತ್ತು ಶ್ರೀ ಸತ್ಯಪ್ರಮೋದತೀರ್ಥರ ಜನ್ಮಶತಮಾನೋತ್ಸವ ಸಮಾರೋಪ ಜುಲೈ 4ರಿಂದ ಐದು ದಿನಗಳ ಕಾಲ ನಡೆಯಲಿದೆ.

ಬಸವನಗುಡಿಯ ಶ್ರೀ ದಿಗ್ವಿಜಯ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥರ ಮಾರ್ಗದರ್ಶನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಜು.4ರ ಸಂಜೆ 5.30ಕ್ಕೆ ಬಸವನಗುಡಿ ಪ್ರಮುಖ ರಸ್ತೆಗಳಲ್ಲಿ ಉಭಯ ಶ್ರೀಗಳ ಪಾದುಕಾ ಶೋಭಾಯಾತ್ರೆ ನಡೆಯಲಿದೆ. ರಾತ್ರಿ 7ಕ್ಕೆ ಕಾರ್ಯಕ್ರಮವನ್ನು ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಉದ್ಘಾಟಿಸಲಿದ್ದಾರೆ.

ಜು.5ರಂದು ಬೆಳಗ್ಗೆ 9.30ಕ್ಕೆ ಶತಮಾನೋತ್ಸವದ ಅವಲೋಕನ ಸೇರಿ ವಿವಿಧ ಗೋಷ್ಠಿಗಳು ನಡೆಯಲಿವೆ.

ಸಂಜೆ 7ಕ್ಕೆ ಶ್ರೀ ಅದಮಾರು ಶ್ರೀ ವಿಶ್ವಪ್ರಿಯತೀರ್ಥರು ಮತ್ತು ಕೂಡಲೀ ಅಕ್ಷೋಭ್ಯತೀರ್ಥ ಮಠದ ಶ್ರೀರಘವಿಜಯತೀರ್ಥರ ಆಶೀರ್ವಚನವಿದೆ. 6ರ ಬೆಳಗ್ಗೆ 9ರಿಂದ ವಿಶೇಷ ಉಪನ್ಯಾಸ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥರು, ಶ್ರೀಪಾದರಾಜ ಮಠದ ಶ್ರೀಕೇಶವನಿಧಿ ತೀರ್ಥರು, ಸೋಸಲೆ ಶ್ರೀ ವಿದ್ಯಾಶ್ರೀಶತೀರ್ಥರು ಮತ್ತು ಶ್ರೀಭೀಮನಕಟ್ಟೆ ಶ್ರೀರಘುವರೇಂದ್ರ ತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ.

7ರಂದು ಬೆಳಗ್ಗೆ 9ರಿಂದ ವಿಶೇಷ ಉಪನ್ಯಾಸ, ಸಂಜೆ 6ಕ್ಕೆ ಪ್ರಮೋದ ಚಂದ್ರಿಕಾ ಗೋಷ್ಠಿ ನಡೆಯಲಿದೆ. ಪೇಜಾವರ ಶ್ರೀ ವಿಶ್ವೇಶತೀರ್ಥರು, ಶ್ರೀ ವಿಶ್ವಪ್ರಸನ್ನ ತೀರ್ಥರು, ಶ್ರೀಭಂಡಾರಕೇರಿ ಶ್ರೀ ವಿದ್ಯೇಶತೀರ್ಥರು, ಶ್ರೀ ಸುವಿದ್ಯೇಂದ್ರ ತೀರ್ಥರು ಮತ್ತು ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥರು ಅಮೃತೋಪದೇಶ ನೀಡಲಿದ್ದಾರೆ. 8ರ ಬೆಳಗ್ಗೆ 6ಕ್ಕೆ ಗಾಯತ್ರಿ ಮಹಾಯಾಗ, ಸಂಜೆ 7ಕ್ಕೆ ಸಂಸ್ಥಾನ ಪೂಜೆ, 10ಕ್ಕೆ ಶತಕೋಟಿ ಗಾಯತ್ರಿಜಪ ಸಮರ್ಪಣೆ ಮತ್ತು ಶ್ರೀ ಸತ್ಯಾತ್ಮತೀರ್ಥರಿಂದ ಸಮಾರೋಪ ಸಂದೇಶವಿದೆ ಎಂದು ಮಠ ತಿಳಿಸಿದೆ.