ಮಸ್ಕಿ: ಕಿರಿಯ ವಕೀಲರಿಗೆ ಹಿರಿಯ ವಕೀಲರ ಮಾರ್ಗದರ್ಶನ ಅವಶ್ಯ ಎಂದು ನ್ಯಾಯಾಧೀಶ ಅಚ್ಚಪ್ಪ ದೊಡ್ಡ ಬಸವರಾಜ ಹೇಳಿದರು.
ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ವಕೀಲರು ಸತತ ಅಧ್ಯಯನದ ಮೂಲಕ ಜ್ಞಾನ ಹೆಚ್ಚಿಸಿಕೊಂಡರೆ ಕಕ್ಷಕಿದಾರರಿಗೆ ನ್ಯಾಯ ಒದಗಿಸಲು ಸಹಕಾರಿಯಾಗಲಿದೆ. ಯಶಸ್ವಿ ವಕೀಲರಾಗಲು ಟ್ರಯಲ್ ಕೋರ್ಟ್ ಬುನಾದಿಯಾಗಿದೆ ಎಂದರು. ವಕೀಲರಾದ ರಾಮಣ್ಣ ನಾಯಕ, ನಿರುಪಾದೆಪ್ಪ ಗುಡಿಹಾಳ, ಶರಣಪ್ಪ ಸಜ್ಜನ, ಜೆ.ರಾಯಪ್ಪ, ರುದ್ರಪ್ಪ ಎಲಿಗಾರ ಇದ್ದರು.