Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಸಜ್ಜನಿಕೆಯ ಮಹತ್ವ

Sunday, 19.02.2017, 7:46 AM       No Comments

ಈಗಿನ ಕಾಲದಲ್ಲಿ ಜನರು ಸಜ್ಜನಿಕೆಗಿಂತಲೂ ಸೌಂದರ್ಯ ಅಥವಾ ಆಡಂಬರಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸೌಂದರ್ಯವು ಸಾಮಾಜಿಕ ಅಂತಸ್ತಿನ ಸಂಕೇತವೆಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಆಡಂಬರವೇ ಸಂತೋಷ ಎಂದು ನಂಬುವಂತೆ ಜನರ ಮನಸ್ಸಿನಲ್ಲಿ ಭ್ರಮೆ ಹುಟ್ಟಿಸಲಾಗುತ್ತಿದೆ. ಇದು ತಪ್ಪು ತಿಳಿವಳಿಕೆ. ಮಾಧ್ಯಮಗಳು ಅತ್ಯಂತ ಚಾಣಾಕ್ಷತೆಯಿಂದ ಈ ಮಿಥ್ಯೆಯನ್ನು ಜನಮನದಲ್ಲಿ ಬಲವಾಗಿ ಬೇರೂರುವಂತೆ ಮಾಡುತ್ತಿವೆ. ಪ್ರಚಾರದ ಬಲ ಆಧುನಿಕ ಜಗತ್ತನ್ನು ನಡೆಸುತ್ತಿದೆ.

  • ಸಜ್ಜನಿಕೆಗಿಂತಲೂ ಆಡಂಬರ ಹೆಚ್ಚು ಪ್ರಭಾವ ಬೀರುವುದೇಕೆ?

ಮಾನವಪ್ರಜ್ಞೆಯಲ್ಲಿ ಚೆನ್ನಾಗಿರುವುದು, ಚೆನ್ನಾಗಿರುವಂತೆ ಭಾವಿಸುವುದು ಹಾಗೂ ಚೆನ್ನಾಗಿ ಕಾಣಿಸುವುದು ಎಂಬ ಮೂರು ಆಯಾಮಗಳಿವೆ. ಇವುಗಳ ಪೈಕಿ ‘ಚೆನ್ನಾಗಿ ಇರುವುದು’ ಅತಿಮುಖ್ಯ. ಅನೇಕರು ‘ಚೆನ್ನಾಗಿದ್ದೇವೆಂದು ಭಾವಿಸುವುದು’ ಮುಖ್ಯವೆಂದು ತಿಳಿಯುತ್ತಾರೆ. ಆದರೆ ಚೆನ್ನಾಗಿದ್ದೇವೆಂಬ ಭಾವನೆ ನಿಜವಾಗಿ ಚೆನ್ನಾಗಿ ಇರುವುದರಲ್ಲಿ ನೆಲೆ ನಿಂತಿರದಿದ್ದರೆ, ಅಂಥವರು ಮಾದಕದ್ರವ್ಯಗಳ ದಾಸರಾಗುತ್ತಾರೆ. ಅವುಗಳಿಂದ ತಾತ್ಕಾಲಿಕವಾಗಿ ನೀವು ಚೆನ್ನಾಗಿರುವಂತೆ ಭಾಸವಾಗುತ್ತದೆ.

ಹಾಗೆಯೇ ಇತರರನ್ನು ಮೆಚ್ಚಿಸುವುದಕ್ಕಾಗಿ ಜನರು ‘ಚೆನ್ನಾಗಿ ಕಾಣಿಸಲು’ ಯತ್ನಿಸುತ್ತಾರೆ. ಅವರ ದೃಷ್ಟಿಯಲ್ಲಿ ಚೆನ್ನಾಗಿ ಇರುವುದಕ್ಕಿಂತಲೂ, ಚೆನ್ನಾಗಿರುವಂತೆ ಭಾವಿಸುವುದಕ್ಕಿಂತಲೂ, ಚೆನ್ನಾಗಿ ಕಾಣಿಸುವುದೇ ಅತಿಮುಖ್ಯ. ಚೆನ್ನಾಗಿ ಕಾಣಿಸುವುದೇನೂ ತಪ್ಪಿಲ್ಲ; ಆದರೆ ಅದು ‘ಚೆನ್ನಾಗಿ ಇರುವುದರ’ ಮೇಲೆ ಆಧಾರಿತವಾಗಿರಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಜನರು ತಮ್ಮ ‘ಅಹಂ’ನ ತೃಪ್ತಿಗಾಗಿ ತಮ್ಮ ‘ಇಮೇಜು’ ಚೆನ್ನಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಆದ್ದರಿಂದ ಆಡಂಬರ ಎಂಬುದು ‘ಅಹಂ’ನ ಆಹಾರ. ಅದು ‘ಚೆನ್ನಾಗಿ ಕಾಣಿಸು’ವುದನ್ನು ಅಲಂಕರಿಸುತ್ತದೆ. ಹಾಗಾಗಿ ಅದಕ್ಕೆ ಹೆಚ್ಚಿನ ಪ್ರಭಾವವಿರುತ್ತದೆ.

  • ‘ಚೆನ್ನಾಗಿ ಕಾಣಿಸು’ವುದರಲ್ಲಿ ತಪ್ಪೇನಿದೆ?

ಇದು ಸರಿ-ತಪ್ಪುಗಳ ಪ್ರಶ್ನೆಯಲ್ಲ. ಅದಕ್ಕಿಂತಲೂ ಆಳವಾದ ಅರ್ಥ ಅಲ್ಲಿದೆ. ನಿಜಜೀವನದ ಈ ಪ್ರಸಂಗ ಕೇಳಿ: 20ರ ವಯಸ್ಸಿನಲ್ಲೇ ವಿಧವೆಯಾಗಿದ್ದ ಯುವತಿಯೊಬ್ಬಳು ತನ್ನ ಏಕಾಕಿತನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಳು. ‘ನೀನೇಕೆ ಪುನಃ ಮದುವೆಯಾಗಬಾರದು?’ ಎಂದು ನಾನು ಕೇಳಿದೆ. ‘ಹಾಗೆ ಮಾಡಿದರೆ ಜನ ಏನೆಂದಾರು ಎಂದು ಭಯವಾಗುತ್ತದೆ’ ಎಂದುತ್ತರಿಸಿದಳು. ‘ಜನ ನಿನ್ನ ಕುರಿತು ಏನು ಹೇಳುತ್ತಾರೆ?’ ಎಂದು ಕೇಳಿದೆ. ‘ಒಳ್ಳೆಯ ಹೆಂಗಸು ಎನ್ನುತ್ತಾರೆ’ ಎಂದಳು. ‘ಆದರೆ ನೀನು ಚೆನ್ನಾಗಿರುವೆಯೆಂದು ನಿನಗನಿಸುತ್ತದೆಯೇ?’ ಎಂದು ಕೇಳಿದೆ. ಆಗ ಅವಳು ಸುಖವಾಗಿಲ್ಲ ಎಂದು ತಿಳಿಯಿತು.

ಸಾಮಾನ್ಯವಾಗಿ ಜನರು ಚೆನ್ನಾಗಿ ಕಾಣಿಸಿಕೊಳ್ಳುವುದಕ್ಕಾಗಿ ಚೆನ್ನಾಗಿ ಇರುವುದನ್ನೂ, ಚೆನ್ನಾಗಿರುವಂತೆ ಭಾವಿಸುವುದನ್ನೂ ತ್ಯಾಗಮಾಡುತ್ತಾರೆ. ಚೆನ್ನಾಗಿ ಕಾಣಿಸುವುದು ‘ಚೆನ್ನಾಗಿ ಇರುವುದರ’ ಮೇಲೆ ಆಧಾರಿತವಾಗಿರದಿದ್ದರೆ ಬದುಕು ಬವಣೆಯಾಗುತ್ತದೆ. ಆದರೆ ಈ ಪ್ರಪಂಚ ಚೆನ್ನಾಗಿ ಕಾಣಿಸುವುದರ ಹಿಂದೆ ಹುಚ್ಚಾಗಿ ಓಡುತ್ತಿದೆ.

’ಚಠಿ ್ಕ್ಚ’ ಎಂದೇ ಕರೆಯಲ್ಪಡುವ ಇಂದಿನ ತೀವ್ರ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ನೀವು ಚೆನ್ನಾಗಿ ಕಾಣಿಸದಿದ್ದರೆ ಗೆಲ್ಲಲಾಗುವುದಿಲ್ಲ ಎಂಬುದೇನೋ ನಿಜ. ಆದರೆ ಗೆದ್ದರೂ ನೀವು ಇಲಿಯಾಗಿಯೇ ಉಳಿಯುತ್ತೀರಿ. ಜೀವನದಲ್ಲಿ ಯಶಸ್ವಿಯಾಗಿದ್ದರೂ ಎಷ್ಟೋ ಮಂದಿ ದುಃಖಿಗಳಾಗಿಲ್ಲವೇ? ಅದೇಕೆ? ಏಕೆಂದರೆ ಅವರಿಗೆ ಸಂತೋಷವಾಗಿರುವ ಕಲೆ ತಿಳಿದಿಲ್ಲ. ಜೀವನದಲ್ಲಿ ಸಂತುಷ್ಟರಾಗಿರುವ ಜನರ ಬಗ್ಗೆ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ, ಸಂತುಷ್ಟ ಜನರು ಯಾವಾಗಲೂ ಒಳ್ಳೆಯ ಸಂಶೋಧಕರಾಗಿರುತ್ತಾರೆ. ಅರ್ಥಾತ್ ಅವರು ಕೆಟ್ಟದರಲ್ಲಿಯೂ ಒಳ್ಳೆಯ ಯಾವುದೋ ಅಂಶವನ್ನು ಕಂಡುಹಿಡಿಯಬಲ್ಲರು.

ಚೆನ್ನಾಗಿ ಕಾಣಿಸಿಕೊಳ್ಳುವ ಇಮೇಜನ್ನು ಬಳಸಿಕೊಂಡರೆ ತಪ್ಪಿಲ್ಲ. ಆದರೆ ಆ ಇಮೇಜೇ ನಿಮ್ಮನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳಿ. ನೀವು ಧರಿಸುವ ಉಡುಪು ನೀವಲ್ಲ. ಹಾಗೇ ನಿಮ್ಮ ಇಮೇಜು ನೀವಲ್ಲ. ಸಂತೋಷವಾಗಿರಬೇಕಾದರೆ ನಿಮ್ಮ ಇಮೇಜಿನಿಂದ ಮುಕ್ತರಾಗಿ. ಎಲ್ಲ ಬಗೆಯ ಇಮೇಜು, ತೀರ್ವನ, ಯೋಚನೆಗಳನ್ನು ತ್ಯಜಿಸಿ ಶೂನ್ಯವಾಗಲು ಕಲಿಯಿರಿ. ಈ ಆಂತರಿಕ ಶೂನ್ಯತೆಯೇ ಆನಂದ. ಇದು ಜೀವನವನ್ನು ನೋಡುವ ಹೊಸದೃಷ್ಟಿ.

  • ಒಳ್ಳೆಯವನಾಗಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗಿರುವಾಗ ನಾನೇಕೆ ಒಳ್ಳೆಯವನಾಗಬೇಕು?

ಈ ಪ್ರಪಂಚದಲ್ಲಿ ಎಲ್ಲರೂ ತಮ್ಮ ಬಗ್ಗೆ ಒಳ್ಳೆಯ ಮಾತು ಕೇಳಲು ಬಯಸುತ್ತಾರೆಯೇ ಹೊರತು ಕೆಟ್ಟ ಮಾತನ್ನಲ್ಲ. ಒಳ್ಳೆಯವನಾಗಲು ಯತ್ನಿಸುವವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ನಿಜ. ಆದರೆ ಕೆಟ್ಟವರಾಗಿರುವವರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಮಸ್ಯೆಗಳು ಬದುಕಿನ ಅವಿಭಾಜ್ಯ ಅಂಗಗಳು; ಅವುಗಳನ್ನು ವಿರೋಧಿಸಬೇಡಿ. ಸಮಸ್ಯೆಗಳನ್ನೇ ಆಸ್ವಾದಿಸುವಂತೆ ಮನಸ್ಸನ್ನು ತರಬೇತಿಗೊಳಿಸಿ. ವ್ಯಾಯಾಮಶಾಲೆಗೆ ಹೋಗಿ ಬೆವರು ಸುರಿಸಿ ವ್ಯಾಯಾಮ ಮಾಡುವಾಗ ಕಷ್ಟವಾದರೂ ಅದನ್ನು ಎಂಜಾಯ್ ಮಾಡುವಂತೆ, ಸಮಸ್ಯೆಗಳನ್ನೂ ಎಂಜಾಯ್ ಮಾಡಲು ಮನಸ್ಸಿಗೆ ಕಲಿಸಿರಿ. ಸಮಸ್ಯೆಗಳನ್ನು ಎದುರಿಸುವುದರಿಂದಲೇ ನೀವು ಬಲಿಷ್ಠ ವ್ಯಕ್ತಿಯಾಗಲು ಸಾಧ್ಯವಿದೆ.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top