21 C
Bengaluru
Wednesday, January 22, 2020

ಸಜ್ಜನರ ರಕ್ಷಣೆಗೆ ಧರೆಗಿಳಿವ ಭಗವಂತ

Latest News

ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ಆರೋಪ ತನಿಖೆ ನಡೆಸಿ ವಾರದೊಳಗೆ ವರದಿ‌ ಸಲ್ಲಿಸಿ ಎಂದು ಸೂಚಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಹಾಸನ: ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದ ಆರೋಪವಿದ್ದು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವ...

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೊತ್ತು 6 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದ ಯೋಧರ ತಂಡ

ಬಿಜಾಪುರ್​: ಸಿಆರ್​ಪಿಎಫ್​ ಯೋಧರ ತಂಡವೊಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಂಚದ ಮೇಲೆ ಹಾಕಿಕೊಂಡು ಸುಮಾರು 6 ಕಿ.ಮೀ ದೂರದ ಆಸ್ಪ್ರತೆಗೆ ನೆಡದುಕೊಂಡೇ...

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಸತ್ತ್ವ, ರಜಸ್ಸು, ತಮಸ್ಸು ಭಗವಂತನ ಭಾಗ. ಮಾಯೆಯ ಮೋಹವು ಜಗತ್ತಿನ ನಿಜಸ್ವರೂಪವನ್ನು ಮರೆಸಿ ಮೋಸಗೊಳಿಸಿದೆ. ಇಡೀ ಜಗತ್ತಿಗೆ ಮೋಹವುಂಟಾಗಿ ಜಗತ್ತು ಶ್ರೀಕೃಷ್ಣನನ್ನು ವಾಸುದೇವನು ಪರಮಾತ್ಮ ಎಂಬುದನ್ನು ಮರೆತಿದೆ. ಪ್ರಕೃತಿಯನ್ನು ವಶಮಾಡಿಕೊಂಡು ಭಗವಂತ ತನಗೆ ಬೇಕಾದ ರೂಪ (ಇದೇ ಲೀಲಾವಿಗ್ರಹ) ಪಡೆದು ಭೂಮಿಗೆ ಇಳಿಯುವನು. ಕಳ್ಳನ ಸುತ್ತಲೂ ಇರುವ ಪೊಲೀಸರು ಅವನನ್ನು ಶಿಕ್ಷಿಸಲು (ಓಡಬಾರದೆಂದು) ಎಳೆದೊಯ್ಯುತ್ತಿರುತ್ತಾರೆ. ಆದರೆ ರಾಷ್ಟ್ರಾಧ್ಯಕ್ಷರ ಸುತ್ತಲೂ ಇರುವ ಪೊಲೀಸರು ಅವರ ಸೇವೆಗಾಗಿ ಇರುತ್ತಾರೆ. ಹಾಗೆಯೇ ನಮ್ಮ ವಿಷಯದಲ್ಲಿ ಪ್ರಕೃತಿಯು ಪ್ರಾರಬ್ಧ (ಹಣೆಬರಹ), ನಾವೇನೂ ಮಾಡುವಂತಿಲ್ಲ. ಆದರೆ ಭಗವಂತನ ವಿಷಯದಲ್ಲಿ ಪ್ರಕೃತಿಯು ಅವನ ಅಧೀನವಾದ ಮಾಯಾಶಕ್ತಿ. ಆದ್ದರಿಂದ ಭಗವಂತನು ತನ್ನ ಕೆಲಸಕ್ಕಾಗಿ ಬೇಕಾದ ಶರೀರವನ್ನು ಸೃಷ್ಟಿಸಲು ಮಾಯೆಗೆ ಆದೇಶ ನೀಡುವನು. ಆಗ ಪ್ರಕೃತಿಯು ಸರ್ವಜ್ಞನೂ, ತನ್ನ ಚಕ್ರವರ್ತಿಯೂ ಆದ ಪರಮಾತ್ಮನ ಸಂಕಲ್ಪದಂತೆ ಕೆಲಸ ಮಾಡುವುದು. ತನಗೆ ಬೇಕಾದ ಸೃಷ್ಟಿಶರೀರದಲ್ಲಿ ಪ್ರವೇಶಿಸಿ ತನ್ನ ಲೀಲೆಯನ್ನು ತೋರುವುದು. ಇದರಿಂದ ನಮಗೆ ಭಗವಂತನ ಅಪಾರ ಶಕ್ತಿಯ ಅರಿವಾಗುವುದು. ಇದೇ ಅವನ ತ್ರಿಗುಣಾತ್ಮಕವಾದ ಮಾಯಾಪ್ರಕೃತಿ. ಒಂದು ದೃಷ್ಟಿಯಿಂದ ಇದು ಜಡವಾದ ಜೇಡಿಮಣ್ಣಿನಂತೆ. ಆದರೆ ಅದರಿಂದ ಬೇಕಾದ ವಿಗ್ರಹಗಳನ್ನೂ ತಯಾರಿಸುವಂತೆ, ಪ್ರಕೃತಿಯ ಮೂಲಕ ಶರೀರವನ್ನು ಸೃಷ್ಟಿಸಿ, ಅದರಲ್ಲಿ ತನ್ನ ಜೀವಕಳೆ ತುಂಬಿ ಭಗವಂತ ಅವತರಿಸುವನು. ಬೆಂಕಿಯ ಸುಡುವ ಶಕ್ತಿಯಿದ್ದಂತೆ ಪರಮಾತ್ಮನ ಮಾಯಾಶಕ್ತಿ. ಅದ್ವೈತದಲ್ಲಿ ಭಗವಂತ ಮತ್ತು ಮಾಯೆಯ ಸಂಬಂಧವಾಗಿ ಬಹಳ ಚರ್ಚೆ ಮಾಡಿ, ಅಂತಿಮವಾಗಿ ನಿರ್ಣಯವಾದದ್ದು ‘ಗೊತ್ತಿಲ್ಲ’ ಎಂಬುದು. ಅದನ್ನು ತಿಳಿಯಲಾಗಲಿ, ವರ್ಣಿಸಲಾಗಲಿ ಸಾಧ್ಯವಿಲ್ಲ. ‘ಮಾಯಾ’ ಶಬ್ದವನ್ನು ಹಿಂದುಮುಂದು ಮಾಡಿದರೆ ‘ಯಾಮಾ’ ಎಂದಾಗುವುದು.(‘ಯಾ’ ಎಂದರೆ ಯಾವುದು, ‘ಮಾ’ ಎಂದರೆ ಇಲ್ಲವೊ, ಎರಡೂ ಸೇರಿದರೆ – ಯಾವುದು ಇಲ್ಲವೋ – ಅದೇ ‘ಮಾಯಾ’. ಆದ್ದರಿಂದಲೇ ಅದು ಅಷ್ಟೊಂದು ಗಲಾಟೆ ಮಾಡುವುದು). ಭಗವಂತ ನಮ್ಮಂತೆ ಜನ್ಮ ಪಡೆಯುವುದಿಲ್ಲ. ಆದ್ದರಿಂದ ಅದು ಮಾಯೆ. ನಾವಿದನ್ನು ಸದಾ ಸ್ಮರಣೆಯಲ್ಲಿಡಬೇಕು.

ಮುಂದಿನ ಎರಡು ಶ್ಲೋಕಗಳು ಬಹಳ ಪ್ರಸಿದ್ಧವಾದವು

(ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ || 4-7) ‘ಎಲೈ ಅರ್ಜುನ! ಯಾವಾಗ ಧರ್ಮದ (ಅಭ್ಯುದಯ-ನಿಃಶ್ರೇಯಸ್ಸುಗಳಿಗೆ ಕಾರಣಗಳಾದ ವರ್ಣಾಶ್ರಮಾದಿ ಧರ್ಮಗಳ) ಅವನತಿಯಾಗಿ ಅಧರ್ಮದ ಉನ್ನತಿಯಾದಾಗ ನಾನು ಅವತರಿಸುತ್ತೇನೆ. (ನನ್ನನ್ನು ನಾನು ಸೃಷ್ಟಿಸಿಕೊಳ್ಳುವೆ).’

ಭಗವಂತ ಜಗತ್ತನ್ನು ಸೃಷ್ಟಿಸಿ ಅದು ಸರಿಯಾಗಿ ನಡೆಯಲು ‘ಧರ್ಮ’ ಎಂಬ ವ್ಯವಸ್ಥೆಯನ್ನು ಮಾಡಿದ. ಈ ಧರ್ಮಕ್ಕಿರುವ ಎರಡು ಮುಖಗಳಾದ ಪ್ರವೃತ್ತಿಧರ್ಮ ಮತ್ತು ನಿವೃತ್ತಿಧರ್ಮಗಳನ್ನು ಈಗಾಗಲೇ ಹಿಂದೆ ವಿಸ್ತಾರವಾಗಿ ಅಭ್ಯಾಸ ಮಾಡಿದ್ದೇವೆ. ಒಂದು ಗಾರ್ಹಸ್ಥ್ಯರ್ಮ, ಮತ್ತೊಂದು ಸಂನ್ಯಾಸಧರ್ಮ. ಇವೆರಡರಿಂದ ಧರ್ಮಪ್ರಚಾರವಾಗಿ ಧರ್ಮವು ಸರಿಯಾಗಿ ನಡೆಯುತ್ತಿತ್ತು. ಕಾಲಕ್ರಮೇಣ ಈ ಧರ್ಮವನ್ನು ಅನುಸರಿಸುತ್ತಿದ್ದವರಲ್ಲಿ ಧರ್ಮಶ್ರದ್ಧೆ, ಶಕ್ತಿ ಕಡಿಮೆಯಾಯಿತು. ಕಾಮಾದಿ ಅರಿಷಡ್ವರ್ಗ ದುರ್ಗಣಗಳು ಬಂದವು. ಶುದ್ಧ ಮನಸ್ಸು ಮಲಿನವಾಗಿ ಅಧರ್ಮ ಹೆಚ್ಚಿತು. ಈ ರೀತಿಯಾದಾಗ ಭಗವಂತನು ಶ್ರೀಕೃಷ್ಣನ ರೂಪದಲ್ಲಿ ಬಂದನೆಂದು

ಶ್ರೀ ಆದಿಶಂಕರಾಚಾರ್ಯರು ಹೇಳಿದ್ದಾರೆ. ಈ ಅವತಾರತತ್ತ್ವವನ್ನು ಈ ಎರಡು ಶ್ಲೋಕದಲ್ಲಿ ಕಾಣುತ್ತೇವೆ.

‘ಗ್ಲಾನಿ’ ಎಂದರೆ ರೋಗದಿಂದ ಶಕ್ತಿಹಾನಿಯಾಗಿ, ಕಡಿಮೆಯಾಗುವುದು. ಧರ್ಮದಲ್ಲಿ ಶಕ್ತಿಗುಂದಿ, ಅಧರ್ಮ ಶಕ್ತಿಯುತವಾದಾಗ ಭಗವಂತನ ಅವತಾರ. ಮೂಲಾರ್ಥದಲ್ಲಿ ‘ಧರ್ಮ’ ಎಂದರೆ ಪರಮಾತ್ಮ. ಎರಡನೆಯ ಅರ್ಥದಲ್ಲಿ ಪರಮಾತ್ಮನ ಹತ್ತಿರ ಕರೆದೊಯ್ಯುವ ನೈತಿಕ-ಆಧ್ಯಾತ್ಮಿಕ ನಿಯಮಗಳು. ಈ ನಿಯಮಗಳು ಕಡಿಮೆಯಾದಾಗ ಸಮಾಜವು ತಾನಾಗಿಯೇ ಹಾಳಾಗುವುದು. ಧರ್ಮವಿದ್ದಾಗ ಧರ್ಮದ ಹತ್ತು ಲಕ್ಷಣಗಳು ಇರುತ್ತವೆ ಎಂಬುದನ್ನು ಈ ಹಿಂದೆ ವಿವರವಾಗಿ ಅಭ್ಯಸಿಸಿದ್ದೇವೆ. ಅಭ್ಯುದಯವೆಂದರೆ ಪ್ರಾಪಂಚಿಕ ಜೀವನದಲ್ಲಿ ಏಳ್ಗೆ.

ನಿಃಶ್ರೇಯಸ್ಸು ಎಂದರೆ ಎಲ್ಲವನ್ನೂ ತ್ಯಜಿಸಿ ಭಗವಂತನೆಡೆಗೆ ಸಾಗುವುದು. ಇವು ಧರ್ಮದ ರೂಪಗಳೇ. ಧರ್ಮವು ಸಾಕ್ಷಾತ್ ಭಗವಂತನ ರೂಪವಾದ್ದರಿಂದ ಅದಕ್ಕೆ ಎಂದಿಗೂ ನಾಶವಿಲ್ಲ. ಆದರೆ ಹಾನಿಯಾಗಿ, ಧರ್ಮದ ಪ್ರಭಾವ ಕಡಿಮೆಯಾಗಬಹುದು. ಆಗ ಅವತಾರದ ಆವಶ್ಯಕತೆ ಬರುವುದು. ವೇದ ಹೇಳಿರುವ ನಾಲ್ಕು ಆಶ್ರಮ ಹಾಗೂ ನಾಲ್ಕು ವರ್ಣಗಳಿಗೆ ಗ್ಲಾನಿಯುಂಟಾಗಿ, ಅವುಗಳಿಗೆ ವಿರುದ್ಧವಾದ ಅಧರ್ಮದ ಏಳ್ಗೆಯಾದಾಗ ಭಗವಂತನು ತನ್ನ ಸಂಕಲ್ಪದಿಂದಲೇ ಜನ್ಮತಾಳುವನೆಂದು ತಮ್ಮ ವ್ಯಾಖ್ಯಾನದಲ್ಲಿ ಶ್ರೀರಾಮಾನುಜರು ಹೇಳಿರುವರು. ಅವತರಿಸುವುದರಿಂದ ಭಗವಂತನಿಗೆ ಆಗಬೇಕಾದ ಪ್ರಯೋಜನವೇನೂ ಇಲ್ಲವಾದರೂ, ಹೆಚ್ಚಾಗಿರುವ ಅಧರ್ಮ ಕಡಿಮೆಯಾಗಿ, ಧರ್ಮದ ಅಭಿವೃದ್ಧಿಯಾಗಬೇಕೆಂದು ಜಗತ್ತು ಅಪೇಕ್ಷಿಸುತ್ತಿದೆ. ಹಾಗೆಯೇ ಧರ್ಮಸ್ಥಾಪನೆಗಾಗಿ, ಅಧರ್ಮವನ್ನು ಹತ್ತಿಕ್ಕಲು ಭಗವಂತ ಅವತರಿಸಲೇಬೇಕೆಂದು ರಾಘವೇಂದ್ರಸ್ವಾಮಿಗಳು ಹೇಳಿರುವರು. ಶ್ರೀರಾಮಕೃಷ್ಣರು ಮುಂದಿನ ದೃಷ್ಟಾಂತ ಕೊಡುವರು. ಕಲ್ಕತ್ತೆಯಲ್ಲಿರುವ ಜಮೀನುದಾರನೊಬ್ಬ ತನ್ನ ದೊಡ್ಡ ತೋಟವನ್ನು ನೋಡಿಕೊಳ್ಳಲು ವ್ಯವಸ್ಥಾಪಕರನ್ನು ನೇಮಿಸಿದ್ದಾನೆ. ಸಣ್ಣಪುಟ್ಟ ಸಮಸ್ಯೆಗಳಾದರೆ ವ್ಯವಸ್ಥಾಪಕನೇ ನಿರ್ವಹಿಸುವನು. ಕೆಲವೊಮ್ಮೆ ವ್ಯವಸ್ಥಾಪಕನಿಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಜಮೀನುದಾರನಿಗೆ ಬಂದು ವರದಿ ಮಾಡುವನು. ಆಗ ಜಮೀನುದಾರ ತನ್ನ ಬಲವಾದ ಪ್ರತಿನಿಧಿಯನ್ನು ಕಳುಹಿಸುವನು. ಅವನಿಂದಲೂ ಸಮಸ್ಯೆ ಬಗೆಹರಿಯದಿದ್ದಲ್ಲಿ ಬೇರೆ ಉಪಾಯವಿಲ್ಲದೆ ಸ್ವತಃ ಜಮೀನುದಾರನೇ ಹೋಗಿ ಸಮಸ್ಯೆ ಬಗೆಹರಿಸುವನು. ಹಾಗೆಯೇ ಈ ಪ್ರಪಂಚದಲ್ಲಿ ಧರ್ಮದ ವಿಷಯದಲ್ಲಿ ಸಣ್ಣಪುಟ್ಟ ತೊಂದರೆಗಳಾದಾಗ ಉತ್ತಮರು ಅದನ್ನು ಸರಿಪಡಿಸುವರು. ಹೆಚ್ಚು ತೊಂದರೆಯಾಗಿ, ಸಾಮಾನ್ಯ ಜನರಿಗೆ ತೊಂದರೆಯಾದಾಗ ಪರಮಾತ್ಮನು ಸಂತ-ಮಹಾತ್ಮರುಗಳನ್ನು ಕಳುಹಿಸುವನು. ಅವರು ಬಂದು ತಮ್ಮ ಅದ್ಭುತ ಆದರ್ಶ ಜೀವನಕಾರ್ಯಗಳಿಂದ, ಉಪದೇಶಗಳಿಂದ, ಕರ್ಮಗಳಿಂದ ಜನರಲ್ಲಿ ಧರ್ಮಪ್ರಜ್ಞೆಯನ್ನು ಮೂಡಿಸುವರು. ದುಷ್ಟರನ್ನು ಹತೋಟಿಯಲ್ಲಿಡುವರು ಅಥವಾ ದುಷ್ಟರನ್ನು ಪರಿವರ್ತಿಸುವರು. ಇದೂ ಸಾಧ್ಯವಾಗದಿದ್ದಾಗ ಸಾಕ್ಷಾತ್ ಪರಮಾತ್ಮನೇ ಬರುವನು. ಭಗವಂತ ಲೋಕಕ್ಕೆ ಬರಲು ಧರ್ಮ ಬಹಳವಾಗಿ ಹದಗೆಡಬೇಕು. ಬೇರೆ ಯಾರಿಂದಲೂ ಧರ್ಮಸಂರಕ್ಷಣೆ ಸಾಧ್ಯವಾಗದಿದ್ದಾಗ ಸ್ವತಃ ಭಗವಂತ ಬರುವನು. ಇಂತಹ ಸಂದರ್ಭದಲ್ಲಿ ಧರ್ಮಸಂರಕ್ಷಣೆಗೆ ಬೇಕಾದ ದೇಹವನ್ನು ಸೃಷ್ಟಿಸುವನು.

ಅಕ್ಬರನ ಕಾಲದಲ್ಲಿದ್ದ ಮಧುಸೂದನ ಸರಸ್ವತಿಗಳು ಬಹಳ ದೊಡ್ಡ ವಿದ್ವಾಂಸರು ಹಾಗೂ ಸಂನ್ಯಾಸಿಗಳೂ ಆಗಿದ್ದರು. ಇಸ್ಲಾಂಪಂಥದ ಕೆಲವು ಫಕೀರರು ಹಿಂದು ಸಂನ್ಯಾಸಿಗಳಿಗೆ ಬಹಳ ತೊಂದರೆ ಕೊಡುತ್ತಿದ್ದರು. ಇದರ ನಿವಾರಣೆಗಾಗಿ ಇವರು ನಾಗಾಜನರಲ್ಲಿ ಕೆಲವರನ್ನು ಆರಿಸಿ ಅವರಿಗೆ ಸಂನ್ಯಾಸ ಕೊಟ್ಟು, ಜೊತೆಯಲ್ಲಿ ಧರ್ಮರಕ್ಷಣೆಗಾಗಿ ಆಯುಧಗಳನ್ನೂ ಕೊಟ್ಟರು. ಒಂದು ರೀತಿಯ ಸಂನ್ಯಾಸಿ ಕ್ಷಾತ್ರಸೈನ್ಯ ನಿರ್ಮಾಣ ಮಾಡಿದರು. ತನ್ಮೂಲಕ ಹಿಂದೂಧರ್ಮಸಂರಕ್ಷಣೆ ಮಾಡಿದರು. ಇವರ ಗೀತಾಭಾಷ್ಯ ಪ್ರಸಿದ್ಧವಾದುದು. ನಿತ್ಯಸಿದ್ಧನಾದ ಭಗವಂತನು ಧರ್ಮರಕ್ಷಣೆಗೆ ಬಂದಾಗ ಅದಕ್ಕೆ ಬೇಕಾದ ಶರೀರವನ್ನು ಸೃಷ್ಟಿಸಿ, ಅಭಿವ್ಯಕ್ತ ಮಾಡುವನು. ಶ್ರೀರಾಮಕೃಷ್ಣ ಪರಮಹಂಸರು, ‘ಭಗವಂತನಿಗೆ ರೂಪ-ಆಕಾರ ಇರಬಹುದು, ಇರದಿರಬಹುದು. ನಿರಾಕಾರ-ನಿರ್ಗಣ, ಸಾಕಾರ-ಸಗುಣ ಇವೆರಡನ್ನೂ ಮೀರಿಯೂ ಇರಬಹುದು’ ಎಂದು ನೀರಿನ ದೃಷ್ಟಾಂತ ಕೊಡುವರು. ಹಾಗೆಯೇ ಉತ್ತರ ಹಾಗೂ ವಿಶೇಷವಾಗಿ ದಕ್ಷಿಣಧ್ರುವದಲ್ಲಿ ಸಮುದ್ರ ಸದಾ ಹೆಪ್ಪುಗಟ್ಟಿರುತ್ತದೆ. ಕರಗುವುದೇ ಇಲ್ಲ. ಅಲ್ಲಿ ಎಲ್ಲ ದೇಶಗಳವರೂ ಶಿಬಿರ ಹೂಡಿದ್ದಾರೆ. ಅಲ್ಲಿ ಭಾರತ ಸರ್ಕಾರದ ವೈಜ್ಞಾನಿಕ ಸಂಶೋಧನಾಕೇಂದ್ರವಿದೆ. ಅದು ಸಮುದ್ರದ ಹಿಮದ ಮೇಲಿದೆ. ಇದೇ ರೀತಿ ವೈಕುಂಠ, ಕೈಲಾಸಾದಿ ಲೋಕಗಳಲ್ಲಿ ವಿಶೇಷರೂಪದಿಂದ ಭಗವಂತ ಸದಾಕಾಲ ಇರುವನು. ಶಿವ, ಕೈಲಾಸ, ನಾರಾಯಣ, ವೈಕುಂಠ, ಇವು ಶಾಶ್ವತ. ಸಗುಣ ಸಾಕಾರ ಚೈತನ್ಯರೂಪವಾಗಿ ಕಲ್ಪಿಸಿಕೊಂಡು ನಮಗೆ ಧ್ಯಾನ, ಜಪಾದಿಗಳನ್ನು ಮಾಡಲು ಅನುಕೂಲವಾಗಿದೆ.

ಭಗವಂತ ಅವತರಿಸಿದಾಗ ಏನಾಗುವುದೆಂಬುದನ್ನು ಮುಂದಿನ ಶ್ಲೋಕದಲ್ಲಿ ಕಾಣುತ್ತೇವೆ. (ಪರಿತ್ರಾಣಾಯ ಸಾಧುನಾಂ ವಿನಾಶಯ ಚ ದುಷ್ಕೃತಾಂ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ || 4.8) ಸಾಧುಗಳ ರಕ್ಷಣೆಗಾಗಿಯೂ ದುಷ್ಟರ ವಿನಾಶಕ್ಕಾಗಿಯೂ ಮತ್ತು ಧರ್ಮದ ಸಂಸ್ಥಾಪನೆಗಾಗಿಯೂ (ಕೃತ, ತ್ರೇತಾ ಮುಂತಾದ ಯುಗಗಳ ನಿಯಮವಿಲ್ಲದೆ ಎನ್ನುವರು ಶ್ರೀರಾಮಾನುಜರು) ಅವತರಿಸುತ್ತೇನೆ. ಇಲ್ಲಿ ಯುಗಗಳೆಂದರೆ ಕಾಲ ಎಂದರ್ಥ. ಧರ್ಮವೆಂಬ ತತ್ತ್ವದ ಆಧಾರದ ಮೇಲೆ ಜಗತ್ತು ನಡೆಯುತ್ತಿರುವುದರಿಂದ, ಜಗತ್ತು ಸರಿಯಾಗಿರಲು ಧರ್ಮವು ಸದಾ ಸರಿಯಾಗಿರಬೇಕು. ಅರ್ಥಾತ್ ಭಗವಂತನ ಅವತಾರದ ಮುಖ್ಯ ಉದ್ದೇಶವೇ ಧರ್ಮಸಂಸ್ಥಾಪನೆ.

(ನಿರೂಪಣೆ: ರಾಮಾಯಣ ಸುರೇಶ್​ಕುಮಾರ್)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...