More

  ಸಚಿವ ಬಿ. ನಾಗೇಂದ್ರ ಕೊಲೆಗಡುಕ ಎಂಬ ಪೋಸ್ಟ್

  ಬಳ್ಳಾರಿ : ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಬಗ್ಗೆ ಸಚಿವ ಬಿ. ನಾಗೇಂದ್ರ ವಿರುದ್ಧ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಕೊಲೆಗಡುಕ ನಾಗೇಂದ್ರ ಎಂಬ ಪೋಸ್ಟ್ ಹಾಕಿ ಅಕ್ರೋಶ ಹೊರಹಾಕಿದ್ದಾರೆ. ಪೋಸ್ಟರ್ ನಲ್ಲಿ ಸಚಿವ ಬಿ. ನಾಗೇಂದ್ರ ಅವರ ಭಾವಚಿತ್ರ ಹಾಕಿ ಭ್ರಷ್ಟರಿಗೆ ಶ್ರೀರಕ್ಷೆ, ಲೂಟಿಕಾರರಿಗೆ ಶ್ರೀರಕ್ಷೆ , ದಕ್ಷ ಅಧಿಕಾರಿಗಳಿಗೆ ಸಾವಿನ ಶಿಕ್ಷೆ , ಇದು ಕಾಂಗ್ರೆಸ್ ಸರ್ಕಾರದ ನಕ್ಷೆ, ದಲಿತರ 187 ಕೋಟಿ ರೂ. ನುಂಗಿದ ಸಚಿವ ಬಿ. ನಾಗೇಂದ್ರ , ರಾಜೀನಾಮೆ ಯಾವಾಗ ?, ಮೃತ ಅಧಿಕಾರಿ ಚಂದ್ರಶೇಖರನ್ ಪೋಟೋ ಹಾಕಿ ನಾಗೇಂದ್ರ ರಾಜೀನಾಮೆಗೆ ಇನ್ನೇಂತಹ ಸಾಕ್ಷಿ ಎಂಬ ಬರಹ ಬರೆದು ಜಿಲ್ಲಾ ಬಿಜೆಪಿ ಫೇಸ್‌ಬುಕ್ ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿದ್ದಾರೆ. ಜಾಲತಾಣದಲ್ಲಿ ಕೆಲವರು ಪ್ರತಿಕ್ರಿಯೆ ನೀಡಿದ್ದು, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

  See also  ಮನಸೆಳೆದ ಛದ್ಮವೇಷಧಾರಿ ಮಕ್ಕಳು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts